ಆ್ಯಪ್ನಗರ

ಮುತಾಲಿಕ್, ಯತ್ನಾಳ್‌ರನ್ನೇಕೆ ಬಿಜೆಪಿ ಸೇರಿಸಿಕೊಳ್ತಿಲ್ಲ?

ಈಗಾಗಲೇ ಬಿಜೆಪಿಗೆ ಎಂಥೆಂಥವರನ್ನೋ ಸೇರಿಸಿಕೊಂಡಿದ್ದಾರೆ. ಆದರೆ, ಯತ್ನಾಳ್ ಹಾಗೂ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರನ್ನೇಕೆ ಸೇರಿಸಿಕೊಳ್ಳುತ್ತಿಲ್ಲ

Vijaya Karnataka Web 26 Mar 2018, 3:38 pm
ವಿಜಯಪುರ: ಈಗಾಗಲೇ ಬಿಜೆಪಿಗೆ ಎಂಥೆಂಥವರನ್ನೋ ಸೇರಿಸಿಕೊಂಡಿದ್ದಾರೆ. ಆದರೆ, ಯತ್ನಾಳ್ ಹಾಗೂ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರನ್ನೇಕೆ ಸೇರಿಸಿಕೊಳ್ಳುತ್ತಿಲ್ಲ ಎಂದು ಜನ ಫೇಸ್‌ಬುಕ್‌ನಲ್ಲಿ ಪ್ರಶ್ನಿಸುತ್ತಿರುವುದಾಗಿ ಎಂಎಲ್‌ಸಿ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.
Vijaya Karnataka Web ಮುತಾಲಿಕ್, ಯತ್ನಾಳ್‌ರನ್ನೇಕೆ ಬಿಜೆಪಿ ಸೇರಿಸಿಕೊಳ್ತಿಲ್ಲ?


ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಇವತ್ತಿದ್ದ ಪಕ್ಷದ ನಾಯಕರೇ ನಮ್ಮ ತಂದೆ-ತಾಯಿ ಎಂದು ಹೇಳುತ್ತಾರೆ. ಆದರೆ, ನಾಳೆ ಬೆಳಗ್ಗೆ ಅನ್ನುವುದರಲ್ಲೇ ಪಕ್ಷಾಂತರವಾಗಿ ಅವರೇ ನಮ್ಮ ತಂದೆ-ತಾಯಿ ಎನ್ನುತ್ತಾರೆ. ಚುನಾವಣೆ ನಾಮಪತ್ರ ಸಲ್ಲಿಕೆ ಅವಧಿ ಮುಗಿಯುವ ಕೊನೆಯ ಕ್ಷಣದವರೆಗೂ ಯಾರು ಯಾವ ಪಕ್ಷಕ್ಕೆ ಹೋಗುತ್ತಾರೆ ಎನ್ನುವುದು ತಿಳಿಯಲ್ಲ' ಎಂದು ಪಕ್ಷಾಂತರಿಗಳ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯಧಾನಿ ಬೆಂಗಳೂರಿಗೆ ಬರುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಬುಲಾವ್ ನೀಡಿದ್ದು, ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತಿದ್ದೇನೆ. ನಾಳೆ ಕೇಂದ್ರ ನಾಯಕರಾದ ಪ್ರಕಾಶ್ ಜಾವಡೇಕರ್, ಪಿಯೂಶ್ ಗೋಯಲ್ ಹಾಗೂ ಮುರಳಿಧರ್ ರಾವ್ ಆಗಮಿಸಲಿದ್ದು, ಅವರೊಂದಿಗೆ ಚರ್ಚಿಸಿದ ಬಳಿಕ ಬಿಜೆಪಿ ಸೇರ್ಪಡೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇನೆ ಎಂದು ಬಸನಗೌಡ ಪಾಟೀಲ ಯತ್ನಾಳ್ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ