ಆ್ಯಪ್ನಗರ

ವಿಜಯಪುರದಲ್ಲಿ ಟ್ರ್ಯಾಕ್ಟರ್ ಖದೀಮರ ಬಂಧನ: ₹14.93 ಲಕ್ಷ ಮೌಲ್ಯದ ಟ್ರೇಲರ್, ಎಂಜಿನ್ ವಶ!

ವಿಜಯಪುರದಲ್ಲಿ ಟ್ರ್ಯಾಕ್ಟರ್, ಟ್ರೇಲರ್‌ಗಳನ್ನು ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, 14.93 ಲಕ್ಷ ರೂ. ಮೌಲ್ಯದ 8 ಟ್ರೇಲರ್‍ಗಳು, 1 ಬೈಕ್, 1 ಟ್ರ್ಯಾಕ್ಟರ್ ಎಂಜಿನ್‌ಗಳನ್ನು ಶಪಡಿಸಿಕೊಂಡಿದ್ದಾರೆ.

Vijaya Karnataka Web 14 Aug 2020, 9:13 pm
ವಿಜಯಪುರ: ಟ್ರ್ಯಾಕ್ಟರ್, ಟ್ರೇಲರ್‌ಗಳನ್ನು ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಸಿಂದಗಿ ಠಾಣೆ ಪೊಲೀಸರು, 14.93 ಲಕ್ಷ ರೂ. ಮೌಲ್ಯದ 8 ಟ್ರೇಲರ್‍ಗಳು, 1 ಬೈಕ್, 1 ಟ್ರ್ಯಾಕ್ಟರ್ ಎಂಜಿನ್ ಹಾಗೂ ಅದಕ್ಕೆ ಜೋಡಿಸಿದ ಪಲ್ಟಿ ನೇಗಿಲು ವಶಪಡಿಸಿಕೊಂಡಿದ್ದಾರೆ.
Vijaya Karnataka Web Tractor thieves


ಸಿಂದಗಿ ತಾಲೂಕಿನ ಗುತ್ತರಗಿ ಗ್ರಾಮದ ಹುಸೇನ್ ಬಾಬುಸಾಬ ನದಾಫ (24), ಸಮೀರ ಸಿಕಂದರ ನದಾಫ (20) ರವಿಕುಮಾರ ಜೆಟ್ಟೆಪ್ಪ ಮಾದರ (24) ಹಾಗೂ ಪೈಗಂಬರ ದಾವಲಸಾಬ ನದಾಫ (20) ಬಂಧಿತ ಟ್ರ್ಯಾಕ್ಟರ್ ಟ್ರೇಲರ್ ಖದೀಮರು.

ಯಂಕಂಚಿ ಗ್ರಾಮದ ಮಲ್ಲೇಶಪ್ಪ ಮಡಿವಾಳಪ್ಪ ಕೊಂಡಗೂಳಿ ಎಂಬುವರು ಸುಂಗಠಾಣ ರಸ್ತೆಯ ಪಕ್ಕ ಟ್ರ್ಯಾಕ್ಟರ್ ನಿಲ್ಲಿಸಿದ್ದ ಟ್ರೇಲರನ್ನು ಕಳ್ಳರು ಕಳ್ಳತನ ಮಾಡಿದ್ದಾರೆ ಎಂದು ಸಿಂದಗಿ ಠಾಣೆಗೆ ದೂರು ನೀಡಿದ್ದರು. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು, ಈ ಟ್ರೇಲರ್ ಕಳ್ಳರ ಬಂಧನಕ್ಕೆ ರಚಿಸಲಾಗಿದ್ದ ವಿಶೇಷ ತಂಡ ನಾಲ್ವರನ್ನು ಶನಿವಾರ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ನೀಡಿದೆ ಎಂದು ಎಸ್ಪಿ ಅನುಪಮ ಅಗರವಾಲ ತಿಳಿಸಿದ್ದಾರೆ.

ಈ ಬಾರಿ ಸಾರ್ವಜನಿಕ ಗಣೇಶೋತ್ಸವ ರದ್ದು: ರಾಜ್ಯ ಸರಕಾರದ ಮಾರ್ಗಸೂಚಿ ಬಿಡುಗಡೆ!

ಇಂಡಿ ಪ್ರಭಾರ ಡಿಎಸ್ಪಿ ಟಿ.ಎಸ್. ಸುಲ್ಪಿ ನೇತೃತ್ವದಲ್ಲಿ ಸಿಪಿಐ ಸತೀಶಕುಮಾರ ಕಾಂಬಳೆ, ಪಿಎಸ್‍ಐ ಎಸ್.ಎಚ್. ಹೊಸಮನಿ, ಎಎಸ್‍ಐಗಳಾದ ಎಸ್.ಎನ್.ಸಂಕದ, ಎಂ.ಜಿ. ಪಾಟೀಲ ಸಿಬ್ಬಂದಿ ಎಚ್.ಎಸ್. ಬಗಲಿ, ಎಸ್.ಪಿ.ಹುಣಸಿಕಟ್ಟಿ, ಜಿ.ಸಿ.ಪಾಟೀಲ, ಬಿ.ಎಲ್.ಪಟ್ಟೇದ, ಎಸ್.ಎಂ. ಬತ್ತಗೌಡರ, ವೈ.ಕೆ.ಉಕಮನಾಳ. ಆರ್.ಎಲ್.ಕಟ್ಟಿಮನಿ, ಎ.ಕೆ.ಮಾಳಾಬಾಗಿ, ಜಿ.ಎಂ. ಕೊಟ್ಯಾಳ, ವಿ.ಆರ್.ರಾಠೋಡ, ಎಸ್.ಕೆ.ಯಳಸಂಗಿ, ಎಸ್.ಆರ್.ಚೌಹಾಣ್ ದಾಳಿಯಲ್ಲಿ ಪಾಲ್ಗೊಂಡಿದ್ದರು ಎಂದು ಎಸ್ಪಿ ಅಗರವಾಲ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ