ಆ್ಯಪ್ನಗರ

ತಾಳಿಕೋಟೆ: ವಿದ್ಯುತ್ ಕ್ಷೇತ್ರದ ಖಾಸಗೀಕರಣದ ವಿರುದ್ಧ ಆಕ್ರೋಶ, ಪ್ರತಿಭಟನೆ

ವಿದ್ಯುತ್‌ ಕ್ಷೇತ್ರದ ಹೊರ ಗುತ್ತಿಗೆ ಹಾಗೂ ಖಾಸಗೀಕರಣವನ್ನು ವಿರೋಧಿಸಿ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮದ ನೌಕರರ ಸಂಘದ ವತಿಯಿಂದ ಸಾಂಕೇತಿಕವಾಗಿ ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಲಾಯಿತು.

Vijaya Karnataka Web 2 Jun 2020, 10:01 am
ತಾಳಿಕೋಟೆ: ವಿದ್ಯುತ್‌ ಕ್ಷೇತ್ರದ ಹೊರ ಗುತ್ತಿಗೆ ಹಾಗೂ ಖಾಸಗೀಕರಣವನ್ನು ವಿರೋಧಿಸಿ ಪಟ್ಟಣದ ಹೆಸ್ಕಾಂ ಕಚೇರಿಯಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ಕೈಕೊಂಡ ನೌಕರರು, ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ 2020ರ ವಿದ್ಯುತ್‌ ಕಾಯ್ದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿದರು. ವಿದ್ಯುತ್‌ ಇಲಾಖೆ ಸಂಪೂರ್ಣವಾಗಿ ಲಾಭದಲ್ಲಿ ನಡೆಯುತ್ತಿದ್ದರೂ ಸಹ ಇಲಾಖೆಯನ್ನು ಖಾಸಗೀಕರಣ ಮಾಡುತ್ತಿರುವುದು ಖಂಡನೀಯವಾಗಿದೆ. ಇಲಾಖೆಯನ್ನು ಯಾವುದೇ ಕಾರಣಕ್ಕೂ ಸಹ ಖಾಸಗಿಕರಣ ಮಾಡಬಾರದು. ಇದರೊಂದಿಗೆ ಕಾರ್ಮಿಕರ ಕೆಲಸದ ಅವಧಿಯನ್ನು ಹೆಚ್ಚುವರಿ ಮಾಡಿ ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಇದನ್ನು ಕೂಡಲೇ ನಿಲ್ಲಿಸಬೇಕು. ಈ ಕಾಯಿದೆಯಿಂದ ರೈತರಿಗೂ ಸಹ ತೊಂದರೆಯಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
Vijaya Karnataka Web ಸಾಂದರ್ಭಿಕ ಚಿತ್ರ


ಸಹಾಯಕ ಕಾರ್ಯನಿವಾಹಕ ಅಭಿಯಂತರ ಟಿ.ವಿ.ರಾಠೋಡ, ಅಭಿಯಂತರರಾದ ಶಿವನಗೌಡ ಪಾಟೀಲ,ಆರ್‌.ಎಸ್‌.ಕುಲಕರ್ಣಿ, ಪಿ.ಡಿ,ಗುರಡ್ಡಿ, ಬಿ.ಆಯ್‌.ಸಾರವಾಡ, ಡಿ.ಎಂ.ಹೆಬ್ಬಾಳ, ಸಿಬ್ಬಂದಿಗಳಾದ ಮಾಧುಸಿಂಗ ಬಿಜಾಪೂರ, ಬಾಹುಬಲಿ ಸುರಪೂರ, ಎಸ್‌.ಎಂ.ಬೇನಾಳಮಠ, ಎಚ್‌.ಎಸ್‌.ಮೇಟಿ, ಎನ್‌.ವಿ.ಬಿರಾದಾರ, ಎಸ್‌.ಬಿ.ಮಂಗ್ಯಾಳ, ಬಿ.ಆರ್‌.ದೇಸಾಯಿ, ಆನಂದ ದೊಡಮನಿ, ಬಿ.ಎಸ್‌.ಗಂಗನಳ್ಳಿ, ಶಿವಾಜಿ ಬಿಜಾಪೂರ, ಎಸ್‌.ಎಂ.ಬಿದರಿ, ಎಂ.ಆಯ್‌.ಮುಲ್ಲಾ, ಎನ್‌.ಎಚ್‌.ಮಳಳ್ಳಿ, ರಾಮಂಚಂದ್ರ ಕೆಂಬಾವಿ, ತಿಪ್ಪಣ್ಣ ಅಂಬಳನೂರ, ಶ್ರೀಶೈಲ ಬಿರಾದಾರ ಸೇರಿದಂತೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ