ಆ್ಯಪ್ನಗರ

ಕಾಲುವೆ ನೀರು ಹರಿಸಲು ಒತ್ತಾಯಿಸಿ ಪ್ರತಿಭಟನೆ

ಮುಳವಾಡ ಏತ ನೀರಾವರಿ ಕಾಲುವೆಗಳಿಗೆ ನೀರು ಹರಿಸಲು ಅನುಕೂಲ ಕಲ್ಪಿಸಬೇಕೆಂದು ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ಇಲ್ಲಿನ ಡಾ. ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿಪ್ರತಿಭಟನೆ ನಡೆಸಿ, ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

Vijaya Karnataka Web 8 Mar 2020, 5:00 am
ವಿಜಯಪುರ: ಮುಳವಾಡ ಏತ ನೀರಾವರಿ ಕಾಲುವೆಗಳಿಗೆ ನೀರು ಹರಿಸಲು ಅನುಕೂಲ ಕಲ್ಪಿಸಬೇಕೆಂದು ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ಇಲ್ಲಿನ ಡಾ. ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿಪ್ರತಿಭಟನೆ ನಡೆಸಿ, ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
Vijaya Karnataka Web PROTEST-BJP7025323
ಮುಳವಾಡ ಏತ ನೀರಾವರಿ ಕಾಲುವೆಗಳಿಗೆ ನೀರು ಹರಿಸಲು ಅನುಕೂಲ ಕಲ್ಪಿಸಬೇಕೆಂದು ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ವಿಜಯಪುರದಲ್ಲಿಪ್ರತಿಭಟನಾ ಮೆರವಣಿಗೆ ನಡೆಸಿದರು.


ಸಂಘಟನೆಯ ನೂರಾರು ರೈತರು ಹಾಗೂ ರೈತ ಮುಖಂಡರು ಅಂಬೇಡ್ಕರ್‌ ವೃತ್ತದಲ್ಲಿಜಮಾಯಿಸಿ, ಕಾಲುವೆಗೆ ನೀರು ಹರಿಸಲು ಅನಾನುಕೂಲತೆಯನ್ನುಂಟು ಮಾಡಿದ ರೈಲ್ವೆ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿದರು.

ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹಾಗೂ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ ಮಾತನಾಡಿ, ಕೂಡಗಿ ಬಳಿ ಹಾಯ್ದು ಹೋಗಿರುವ ಮುಳವಾಡ ಏತ ನೀರಾವರಿ ಕಾಲುವೆಯಲ್ಲಿರೇಲ್ವೆ ಬ್ರಿಡ್ಜ್‌ ಕೆಳಗಡೆ ಕಾಮಗಾರಿ ನಡೆಯುತ್ತಿದೆ. ರೈಲ್ವೆ ಇಲಾಖೆಯ ಆಮೆಗತಿಯ ಕೆಲಸದಿಂದಾಗಿ ಕಾಲುವೆಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲಎಂದರು.

ನೀರಾವರಿ ಇಲಾಖೆ ಅಧಿಕಾರಿಗಳು ಮಾ. 20ರೊಳಗಾಗಿ ರೈಲ್ವೆ ಕಾಮಗಾರಿ ಮುಗಿದರೆ, 20ರೊಳಗಾಗಿ ನೀರು ಹರಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ರೈಲ್ವೆ ಇಲಾಖೆಯವರು ವೃಥಾ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಇದರಿಂದಾಗಿ ಈ ತಿಂಗಳು ಕಾಲುವೆಗೆ ನೀರು ಹರಿಸುವುದು ಅನುಮಾನವಾಗಿವೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು. ಬೇಸಿಗೆ ಪ್ರಾರಂಭವಾಗಿದ್ದರಿಂದ ಹಳ್ಳಿಗಳಲ್ಲಿಜನ ಹಾಗೂ ಜಾನುವಾರುಗಳಿಗೆ ಕುಡಿಯಲು ನೀರಿನ ಹಾಹಾಕಾರ ಉಂಟಾಗಿದೆ ಎಂದರು.

ಜಿಲ್ಲಾಸಂಘಟನಾ ಕಾರ್ಯದರ್ಶಿ ಸದಾಶಿವ ಬರಟಗಿ, ತಾಲೂಕು ಅಧ್ಯಕ್ಷ ಸಿದ್ಧರಾಮ ಅಂಗಡಗೇರಿ, ತಾಲೂಕು ಪ್ರಧಾನ ಕಾರ್ಯದರ್ಶಿ ರೇವಣೆಪ್ಪ ಕಡಗೋಲ, ಗಂಗಯ್ಯ ಚಿಕ್ಕಮಠ, ಅಣ್ಣುಗೌಡ ಪಾಟೀಲ, ವಿಠ್ಠಲ ಬಿರಾದಾರ, ಕಾಸಪ್ಪ ಬಡಿಗೇರ, ರವಿ ಕೊಲ್ಲೂರ, ದೇವೇಂದ್ರ ಕೊಡೇಕಲ, ಜನವಾದಿ ಮಹಿಳಾ ಸಂಘದ ಮುಖಂಡರಾದ ಸುರೇಖಾ ರಜಪೂತ, ರಾಮಣ್ಣ ಶಿರಮಗೋಳ, ಖಾಜೇಸಾಬ ಕೋಲಾರ, ಮಳಸಿದ್ದ ನಾಯ್ಕೋಡಿ, ಗಂಗಯ್ಯ ಚಿಕ್ಕಮಠ, ಮಹಮ್ಮದ ಅಲಿ ಕೊಲಾರ, ಭೂತಾಳಿ ಪೂಜೇರಿ, ರಮೇಶ ತೋಟದ, ಜಿ.ಎಸ್‌. ಇಂಗಳಗಿ, ಸಂಗಮೇಶ ಬಾಗಿ, ಮಳಿಸಿದ್ದ ನಾಯ್ಕೋಡಿ, ನಾಗಪ್ಪ ಹಡಪದ, ಮೈಬೂಸಾಬ ಮುಲ್ಲಾ, ಬಸವರಾಜ ಅಗಸರ, ಕಾಸಪ್ಪ ಬಡಿಗೇರ, ಸಿದ್ದಪ್ಪ ಕೊರಬು, ಲಾಲಸಾಬ ಹಳ್ಳುರ, ಈರಣ್ಣ ಮಠಪತಿ, ಕೃಷ್ಣಪ್ಪ ಬಮ್ಮರಡ್ಡಿ, ಧರೆಪ್ಪ ಅವಟಿ, ಚಂದ್ರಾಮ ತೆಗ್ಗಿ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.


ಕೂಡಗಿ ಬಳಿ ಹಾಯ್ದು ಹೋಗಿರುವ ಕಾಲುವೆಯಲ್ಲಿರೈಲ್ವೆ ಬ್ರಿಜ್‌ ಕೆಳಗಡೆ ನಡೆದಿರುವ ಕಾಮಗಾರಿಯನ್ನು ತಕ್ಷಣ ಪೂರ್ಣಗೊಳಿಸಿ, ನೀರು ಹರಿಸಲು ಅನುಕೂಲ ಮಾಡಿಕೊಡದಿದ್ದಲ್ಲಿಕಾಮಗಾರಿ ನಡೆದಿರುವ ರೈಲ್ವೆ ಬ್ರಿಜ್ಡ್‌ ಮೇಲೆ ಅಹೋರಾತ್ರಿ ಧರಣಿ ನಡೆಸಲಾಗುವುದು. ಅಲ್ಲದೇ, ರೈಲ್ವೆ ಸಂಚಾರ ಸ್ಥಗಿತಗೊಳಿಸಬೇಕಾಗುತ್ತದೆ.
-ಅರವಿಂದ ಕುಲಕರ್ಣಿ ಹೋರಾಟಗಾರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ