ಆ್ಯಪ್ನಗರ

ರೈತರಿಗೆ ಸಮಸ್ಯೆಯಾಗದಂತೆ ಗೊಬ್ಬರ ಪೂರೈಸಿ

ಜಿಲ್ಲೆಯಲ್ಲಿ ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸಿ ರೈತರಿಗೆ ಮೋಸ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಎಚ್ಚರಿಕೆ ನೀಡಿದ್ದಾರೆ.

Vijaya Karnataka Web 23 May 2020, 5:00 am
ವಿಜಯಪುರ : ಜಿಲ್ಲೆಯಲ್ಲಿ ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸಿ ರೈತರಿಗೆ ಮೋಸ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಎಚ್ಚರಿಕೆ ನೀಡಿದ್ದಾರೆ.
Vijaya Karnataka Web KRUSHI-BJP22032752


ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಶುಕ್ರವಾರ ಕೃಷಿ ಪರಿಕರ ಮಾರಾಟಗಾರರ ಸಭೆ ನಡೆಸಿದ ಅವರು, ಮಾರಾಟಗಾರರು ಕಡ್ಡಾಯವಾಗಿ ಪರವಾನಿಗೆ ಹೊಂದಿರಬೇಕು ಹಾಗೂ ನವೀಕರಿಸಿರಬೇಕು. ನಾಮಫಲಕ, ದರಪಟ್ಟಿ, ದಾಸ್ತಾನು ವಹಿ ಹಾಗೂ ಬಿಲ್‌ಬುಕ್‌ಗಳನ್ನು ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ಗೊಬ್ಬರವನ್ನು ಕಡ್ಡಾಯವಾಗಿ ಪಿಒಎಸ್‌ ಮಷಿನ್‌ ಮೂಲಕ ಮಾರಾಟ ಮಾಡಬೇಕು. ಪ್ರಿನ್ಸಿಪಲ್‌ ಸರ್ಟಿಫಿಕೇಟ್‌ ಹಾಗೂ ಓ ಫಾರಂ ಇಲ್ಲದೆ ಕೃಷಿ ಪರಿಕರಗಳನ್ನು ಮಾರಾಟ ಮಾಡಬಾರದು. ಸರಕಾರದ ನಿರ್ದೇಶನದಂತೆ ರೈತರಿಗೆ ಗೊಬ್ಬರದ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.

ಹೆಚ್ಚಿನ ದರ ಪಡೆದರೆ ಕ್ರಮ
ಸರಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರಕ್ಕೆ ಕೃಷಿ ಪರಿಕರಗಳನ್ನು ಮಾರಾಟ ಮಾಡುವಂತಿಲ್ಲ. ಅವಧಿ ಮೀರಿದ ಮತ್ತು ಕಳಪೆ ಪರಿಕರಗಳನ್ನು ಮಾರಾಟ ಮಾಡಬಾರದು. ರೈತರಿಗೆ ಕಡ್ಡಾಯವಾಗಿ ರಶೀದಿಯನ್ನು ನೀಡಬೇಕು ಎಂದು ಸೂಚಿಸಿದರು.

ಪ್ರತಿ ತಿಂಗಳು 5ನೇ ತಾರೀಖಿನೊಳಗೆ ಕೃಷಿ ಪರಿಕರಗಳ ಮಾರಾಟದ ಮಾಹಿತಿಯನ್ನು ಇಲಾಖೆಗೆ ಸಲ್ಲಿಸಬೇಕು. ಮಾರಾಟಗಾರರು ನಿಯಮ ಉಲ್ಲಂಘಿಘಿಸಿದರೆ ಎಸೆನ್ಸಿಯಲ್‌ ಕಮಾಡಿಟಿ ಆ್ಯಕ್ಟ್ 1955, ಫರ್ಟಿಲೈಜರ್‌ ಕಂಟ್ರೋಲ್‌ ಆರ್ಡರ್‌ 1985, ಇನ್‌ಸೆಕ್ಟಿಸೈಡ್‌ ಆ್ಯಕ್ಟ್ 1968 ಹಾಗೂ ಸೀಡ್‌ ಆ್ಯಕ್ಟ್ 1966 ರನ್ವಯ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿಸುಮಾರು 3.42 ಲಕ್ಷ ರೈತರು ಇದ್ದು, ಎಲ್ಲರಿಗೂ ಗುಣಮಟ್ಟದ ಬಿತ್ತನೆಬೀಜ, ಗೊಬ್ಬರ ಹಾಗೂ ಕೀಟನಾಶಕಗಳನ್ನು ಸಕಾಲದಲ್ಲಿಒದಗಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಕೃಷಿ ಪರಿಕರ ಮಾರಾಟಗಾರರ ಜವಾಬ್ದಾರಿ ಹೆಚ್ಚಿದ್ದು, ರೈತರು ಯಾವುದೇ ಶೋಷಣೆಗೆ ಒಳಗಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾರಾಟಗಾರರು ಹಾಗೂ ರೈತರು ಕಡ್ಡಾಯವಾಗಿ ಮಾಸ್ಕ್‌ ಧರಿಸಿರಬೇಕು. ಮಾಸ್ಕ್‌ ಇಲ್ಲದೆ ಬಂದವರಿಗೆ ಮಾರಾಟ ಮಾಡುವಂತಿಲ್ಲ. ಮಾರಾಟಗಾರರು ಮಾಸ್ಕ್‌ ಜೊತೆಗೆ ಕೈಗವಸು ಧರಿಸಬೇಕು, ಮಾರಾಟ ಕೇಂದ್ರದಲ್ಲಿಸ್ಯಾನಿಟೈಸರ್‌ ಬಳಸುವಂತೆ ಸಲಹೆ ನೀಡಿದರು.

ಜಿಪಂ ಸಿಇ ಗೊವಿಂದ ರೆಡ್ಡಿ ಮಾತನಾಡಿ, ರೈತರಿಗೆ ಯಾವುದೇ ನಿಬಂಧನೆ ಹಾಕಿ ಖರೀದಿಗೆ ಒತ್ತಾಯಪಡಿಸಬಾರದು. ಎಂಆರ್‌ಪಿ ದರದಲ್ಲಿ ಕೃಷಿ ಪರಿಕರ ಮಾರಾಟಮಾಡುವಂತೆ ಸೂಚಿಸಿದರು.

ಜಂಟಿ ಕೃಷಿ ನಿರ್ದೇಶಕ ಶಿವಕುಮಾರ್‌ ಮಾತನಾಡಿ, ಜಿಲ್ಲೆಯಲ್ಲಿ 4.80ಲಕ್ಷ ಹೆಕ್ಟೇರ್‌ ಮುಂಗಾರು ಬಿತ್ತದೆ ಗುರಿ ಹೊಂದಲಾಗಿದೆ. ರಸಗೊಬ್ಬರ ಬೇಡಿಕೆ 72,000 ಮೆಟ್ರಿಕ್‌ ಟನ್‌ ಇದ್ದು, ಸದ್ಯ 19,000 ಮೆಟ್ರಿಕ್‌ ಟನ್‌ ದಾಸ್ತಾನೊದೆ ಎಂದರು. ಕೃಷಿ ಪರಿಕರ ಮಾರಾಟಗಾರರು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ