ಆ್ಯಪ್ನಗರ

ಪ್ರಭುಗೆ ಹಂಗಾಮಿ ಯೋಗ

ಜಿಪಂ ಅಧ್ಯಕ್ಷ ಸ್ಥಾನಕ್ಕೆ ಶಿವಯೋಗಿ ನೇದಲಗಿ ನೀಡಿದ ರಾಜೀನಾಮೆ ಅಂಗೀಕಾರಗೊಂಡಿದ್ದು , ಹೊಸ ಅಧ್ಯಕ್ಷರ ಆಯ್ಕೆ ತನಕ ಉಪಾಧ್ಯಕ್ಷ ಪ್ರಭು ದೇಸಾಯಿ ಅವರಿಗೆ ಹಂಗಾಮಿ ಅಧ್ಯಕ್ಷರಾಗುವ ಯೋಗ ಒದಗಿಬಂದಿದೆ.

Vijaya Karnataka Web 16 Jun 2020, 5:00 am
ವಿಜಯಪುರ : ಜಿಪಂ ಅಧ್ಯಕ್ಷ ಸ್ಥಾನಕ್ಕೆ ಶಿವಯೋಗಿ ನೇದಲಗಿ ನೀಡಿದ ರಾಜೀನಾಮೆ ಅಂಗೀಕಾರಗೊಂಡಿದ್ದು , ಹೊಸ ಅಧ್ಯಕ್ಷರ ಆಯ್ಕೆ ತನಕ ಉಪಾಧ್ಯಕ್ಷ ಪ್ರಭು ದೇಸಾಯಿ ಅವರಿಗೆ ಹಂಗಾಮಿ ಅಧ್ಯಕ್ಷರಾಗುವ ಯೋಗ ಒದಗಿಬಂದಿದೆ.
Vijaya Karnataka Web PRABHU DESAI-BJP15073612


ಈ ಹಿಂದೆ ಅಧ್ಯಕ್ಷೆಯಾಗಿದ್ದ ನೀಲಮ್ಮ ಮೇಟಿ ಅವರ ರಾಜೀನಾಮೆ 2018ರ ಡಿ.19ರಂದು ಅಂಗೀಕಾರಗೊಂಡಿದ್ದರಿಂದ ಆ ಸಮಯದಲ್ಲಿ ಉಪಾಧ್ಯಕ್ಷ ಪ್ರಭು ದೇಸಾಯಿ ಹಂಗಾಮಿ ಅಧ್ಯಕ್ಷರಾಗಿ 25 ದಿನಗಳ ಕಾಲ ಅಧಿಕಾರ ಅನುಭವಿಸಿದ್ದರು. ಈಗ ಶಿವಯೋಗಿ ನೇದಲಗಿ ಅವರ ರಾಜೀನಾಮೆಯಿಂದಾಗಿ 2ನೇ ಬಾರಿ ಹಂಗಾಮಿ ಅಧ್ಯಕ್ಷರಾಗುವ ಅವಕಾಶ ಅವರಿಗೆ ಬಂದೊದಗಿದೆ.

ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಅಧಿನಿಯಮ 1993ರ ಪ್ರಕರಣ 194(ಎ) ಅನ್ವಯ ಅಧ್ಯಕ್ಷರ ಅಧಿಕಾರ ಮತ್ತು ಕರ್ತವ್ಯಗಳನ್ನು ಉಪಾಧ್ಯಕ್ಷ ಅಥವಾ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಚಲಾಯಿಸುವ ಅವಕಾಶವಿದೆ. ಶಿವಯೋಗಿ ನೇದಲಗಿ ಅವರ ರಾಜೀನಾಮೆ ಸೋಮವಾರ ಅಂಗೀಕಾರಗೊಂಡಿದ್ದು , ನಿಯಮ ಪ್ರಕಾರ ತಕ್ಷಣದಿಂದ ಉಪಾಧ್ಯಕ್ಷರಿಗೆ ಹಂಗಾಮಿ ಅಧ್ಯಕ್ಷರಾಗುವ ಅವಕಾಶವಿದೆ.

ಅಧ್ಯಕ್ಷರ ರಾಜೀನಾಮೆ ಅಂಗೀಕಾರಗೊಂಡ ಮಾಹಿತಿ ಸೋಮವಾರ ಸಂಜೆ ನನಗೆ ಬಂದಿದೆ. ನಿಯಮ ಪ್ರಕಾರ ಜೂ.16ರಂದು ರಿಜಿಸ್ಟರ್‌ಗೆ ಸಹಿ ಮಾಡಿ ಹಂಗಾಮಿ ಅಧ್ಯಕ್ಷನಾಗುತ್ತೇನೆ ಎಂದು ಪ್ರಭು ದೇಸಾಯಿ ತಿಳಿಸಿದರು.

ಪ್ರಭು ದೇಸಾಯಿ ಅವರಿಗೆ ಉಪಾಧ್ಯಕ್ಷ ಸ್ಥಾನ ಕೂಡ ಲಾಟರಿ ಅದೃಷ್ಟದ ಮೂಲಕ ಒಲಿದಿತ್ತು. ಸಾಮಾನ್ಯವಾಗಿರುವ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿಬಿಜೆಪಿಯ ಪ್ರಭು ದೇಸಾಯಿ, ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಬಸನಗೌಡ ವಣಕಿಹಾಳ ತಲಾ 21 ಮತ ಮತ ಪಡೆದು ಸಮಬಲ ಸಾಧಿಸಿದ್ದರು. ಕೊನೆಗೆ ಲಾಟರಿ ಮೂಲಕ ಉಪಾಧ್ಯಕ್ಷರನ್ನು ಆಯ್ಕೆಗೊಳಿಸಿದಾಗ ಪ್ರಭು ದೇಸಾಯಿ ಅವರಿಗೆ ಅದೃಷ್ಟ ಲಕ್ಷ್ಮಿ ಒಲಿದಿದ್ದಳು. ಜತೆಗೆ 2 ಬಾರಿ ಹಂಗಾಮಿ ಅಧ್ಯಕ್ಷರಾಗುವ ಅವಕಾಶವೂ ಸಿಕ್ಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ