ಆ್ಯಪ್ನಗರ

ರಂಗೇರಿದೆ ಪಪಂ ಚುನಾವಣೆ ಕಾವು

ಚಡಚಣ : ರಾಜಕಾರಣದಲ್ಲಿಯಾವುದೇ ಪಕ್ಷವೂ ಶಾಶ್ವತ ಅಲ್ಲಎನ್ನುವುದಕ್ಕೆ ಚಡಚಣ ಪಪಂನ ವಾರ್ಡ್‌ ನಂ.5ರ ಚುನಾವಣೆಯೇ ಸಾಕ್ಷಿ.

Vijaya Karnataka 4 Nov 2019, 5:00 am
ಮನೋಜ ವಿ ಕಟಗೇರಿ, ಚಡಚಣ
Vijaya Karnataka Web pupam election incarnate
ರಂಗೇರಿದೆ ಪಪಂ ಚುನಾವಣೆ ಕಾವು


ರಾಜಕಾರಣದಲ್ಲಿಯಾವುದೇ ಪಕ್ಷವೂ ಶಾಶ್ವತ ಅಲ್ಲಎನ್ನುವುದಕ್ಕೆ ಚಡಚಣ ಪಪಂನ ವಾರ್ಡ್‌ ನಂ.5ರ ಚುನಾವಣೆಯೇ ಸಾಕ್ಷಿ.

ವಾರ್ಡ್‌ ನಂ.5ರ ಪಕ್ಷೇತರ ಅಭ್ಯರ್ಥಿ ನಾಸಿರ ಮುಸ್ತಿ ಮರಣದಿಂದ ತೆರವಾದ ಸ್ಥಾನಕ್ಕೆ ಚುನಾವಣೆ ಆಯೋಗ ಚುನಾವಣೆ ಘೋಷಣೆ ಮಾಡಿದೆ. ನ.2ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿತ್ತು. ಕಾಂಗ್ರೆಸ್‌ ಪಕ್ಷದಲ್ಲಿಟಿಕೆಟ್‌ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಕಾಂಗ್ರೆಸ್‌ ಪಕ್ಷದ ರಾಜು ಕೋಳಿ, ಮೀರಾಸಾಬ ಅತ್ತಾರ ಮತ್ತು ಇಲಾಯಿ ನದಾಫ ನಡುವೆ ಟಿಕೆಟ್‌ ಪೈಪೋಟಿ ಎದುರಾಗಿತ್ತು. ಆದರೆ ಕಾಂಗ್ರೆಸ್‌ ಪಕ್ಷದ ನಾಯಕರು ಅಳೆದು ತೂಗಿ ವಾರ್ಡ್‌ ನಂ.5ರ ಇಲಾಯಿ ನದಾಫ ಅವರಿಗೆ ಟಿಕೆಟ್‌ ಘೋಷಣೆ ಮಾಡಿತ್ತು. ಇದರಿಂದ ಅಸಮಾಧಾನಿತರಾದ ಇಬ್ಬರು ಆಕಾಂಕ್ಷಿಗಳು ಬಿಜೆಪಿ ಮತ್ತು ಜೆಡಿಎಸ್‌ ಸೇರಿ ಟಿಕೆಟ್‌ ಗಿಟ್ಟಿಸಿಕೊಂಡಿದ್ದು ಚುನಾವಣೆ ಕಾವು ರಂಗೇರಿದೆ.

ರಾಜು ಕೋಳಿ ಬಿಜೆಪಿ ಬಿಜೆಪಿ ಟಿಕೆಟ್‌ ಗಿಟ್ಟಿಸಿ ಕಣದಲ್ಲಿದ್ದರೆ, ಮೀರಾಸಾಬ ಅತ್ತಾರ ಜೆಡಿಎಸ್‌ ಸೇರಿ ಟಿಕೆಟ್‌ ಪಡೆದಿದ್ದಾರೆ. ಈಗ ಮೂವರು ಕಣದಲ್ಲಿದ್ದು, ಎಲ್ಲರೂ ಮೂಲ ಕಾಂಗ್ರೆಸಿಗರಾಗಿರುವುದರಿಂದ ಚುನಾವಣೆ ಕಾವು ರಂಗೇರಿದೆ.

ಎಂಎಲ್‌ಎ ಚುನಾವಣೆಯಲ್ಲಿಈ ಮೂವರು ಮುಂದೆ ನಿಂತು ಕಾಂಗ್ರೆಸ್‌ ಪಕ್ಷದ ಪರ ಪ್ರಚಾರ ಮಾಡಿದ್ದಾರೆ. ಆದರೆ ಈಗ ಈ ಮೂವರು ಬೇರೆ ಬೇರೆ ಪಕ್ಷಗಳಿಂದ ಸ್ಪರ್ಧಿಸಿ ಎದುರಾಳಿಗಳಾಗಿದ್ದಾರೆ. ರಾಜಕೀಯದಲ್ಲಿಯಾರು ಶಾಶ್ವತ ಶತ್ರುಗಳಲ್ಲಮತ್ತು ಮಿತ್ರರೂ ಅಲ್ಲಎನ್ನುವುದಕ್ಕೆ ಇದೊಂದು ಉತ್ತಮ ಉದಾರಣೆಯಾಗಿದೆ.

7 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ನಾಮಪತ್ರ ಸಲ್ಲಿಕೆಗೆ ಅ.2 ಕೊನೆಯ ದಿನವಾಗಿತ್ತು. ಒಟ್ಟು 7 ಜನ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿಯಿಂದ ರಾಜು ಕೋಳಿ, ಜೆಡಿಎಸ್‌ ನಿಂದ ಮೀರಾಸಾಬ ಅತ್ತಾರ, ಕಾಂಗ್ರೆಸ್‌ನಿಂದ ಇಲಾಯಿ ನದಾಫ ಮತ್ತು ನಾಲ್ಕು ಜನ ಪಕ್ಷೇತರರು ಕಣದಲ್ಲಿದ್ದಾರೆ. ನ.4 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ ಎಂದು ತಹಸೀಲ್ದಾರ್‌ ಆರ್‌.ಎಸ್‌.ರೇವಡಿಗಾರ ಪ್ರಕಟಣೆಯಲ್ಲಿತಿಳಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ