ಆ್ಯಪ್ನಗರ

ರಾಹುಲ್‌ ಗಾಂಧಿ ಅಯೋಗ್ಯ ಎಂದ ರಮೇಶ್‌ ಜಿಗಜಿಣಗಿ

ಕೇಂದ್ರ ಸಚಿವ ರಮೇಶ್‌ ಜಿಗಜಿಣಗಿ ಟೀಕೆ

Vijaya Karnataka Web 27 Aug 2018, 4:31 pm
ವಿಜಯಪುರ: ರಾಹುಲ್‌ ಗಾಂಧಿ ಅಯೋಗ್ಯ. ರಾಷ್ಟ್ರೀಯ ಪಕ್ಷದ ಅಧ್ಯಕ್ಷನಾಗುವ ಯೋಗ್ಯತೆ ಇಲ್ಲ ಎಂದು ಕೇಂದ್ರ ಸಚಿವ ರಮೇಶ ಜಿಗಜಿಣಗಿ ಟೀಕಿಸಿದರು.
Vijaya Karnataka Web ರಮೇಶ್‌ ಜಿಗಜಿಣಗಿ
ರಮೇಶ್‌ ಜಿಗಜಿಣಗಿ


ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್‌ ಜಿಗಜಿಣಗಿ, ಪರದೇಶಕ್ಕೆ ಹೋಗಿ ರಾಹುಲ್ ಗಾಂಧಿ ಅವಹೇಳನಕಾರಿ ಹೇಳಿಕೆ ನೀಡಿದ್ದು ನಾಚಿಕೆಗೇಡಿನ ಕೆಲಸ. ನಮ್ಮ ದೇಶದವರೇ ಹೀಗೆ ಮಾತನಾಡುವುದು ಸೂಕ್ತವಲ್ಲ ಎಂದರು.

ವಾಜಪೇಯಿ ಅಸ್ಥಿಯಿಂದ ಬಿಜೆಪಿ ರಾಜಕೀಯ ಮಾಡ್ತಿದೆ ಎನ್ನುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವರು. ವಾಜಪೇಯಿ ನದಿಜೋಡಣೆಗೆ ಬಹಳ ಶ್ರಮಿಸಿದ್ದಾರೆ. ಅವರ ಕನಸಿಗೆ ನಾವು ಕೈ ಜೋಡಿಸಿದ್ದೇವೆ. ರಾಜೀವ್ ಗಾಂಧಿ ಅಸ್ಥಿ ಹಿಡಿದುಕೊಂಡು ಕಾಂಗ್ರೆಸ್ ನವರು ರಾಜಕೀಯ ಮಾಡಿದ್ದರು ಎಂದು ತಿರುಗೇಟು ನೀಡಿದರು.

2019 ರ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ವತಿಯಿಂದ ಯಾರಿಗೆ ಟಿಕೆಟ್ ಸಿಗುತ್ತೋ ಅವರೇ ಸ್ಪರ್ಧಿಸ್ತಾರೆ. ಎಂಪಿ ಟೆಕೆಟ್ ಏನೂ ನಮ್ಮ ಮುತ್ತಜ್ಜನ ಆಸ್ತಿ ಅಲ್ಲ. ಹೈಕಮಾಂಡ್ ಯಾರಿಗೇ ಟಿಕೆಟ್ ಕೊಟ್ರೂ ಅವರ ಪರ ನಾನು ವೋಟು ಕೇಳ್ತೇನೆ ಎಂದು ರಮೇಶ್‌ ಜಿಗಜಿಣಗಿ ಹೇಳಿದರು.

ವಿಜಯಪುರ-ಬಾಗಲಕೋಟ ಪರಿಷತ್ ಮರು ಚುನಾವಣಾ ಹಿನ್ನೆಲೆ, ಬಿಜೆಪಿ ಅಭ್ಯರ್ಥಿ ಡಮ್ಮಿ ಕ್ಯಾಂಡಿಡೇಟ್ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ಗೆ ತಿರುಗೇಟು ನೀಡಿದ ರಮೇಶ ಜಿಗಜಿಣಗಿ, ಟೀಕೆ ಮಾಡುವುದು ಕಾಂಗ್ರೆಸ್ ನವರ ಕೆಟ್ಟ ಚಾಳಿಯಾಗಿದೆ ಎಂದರು.

ಪ್ರತಿ ಬಾರಿಯ ಎಲೆಕ್ಷನ್ ನಲ್ಲಿ‌ ಕಾಂಗ್ರೆಸ್ ಹಣ ಹಂಚುತ್ತದೆ. ಅವರು ಎಷ್ಟೇ ಹಣ ಹಂಚಿದರೂ ಗೆಲುವು ಮಾತ್ರ ನಮಗೆ ಎಂದು ಕೇಂದ್ರ ಸಚಿವರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ