ಆ್ಯಪ್ನಗರ

ಕಾಟಾಚಾರದ ಬಜೆಟ್‌: ಶಹಾಪುರ ಆರೋಪ

ಸಿಂದಗಿ (ವಿಜಯಪುರ) : ರಾಜ್ಯ ಸರಕಾರ ಮುಂಬರುವ ತಿಂಗಳಲ್ಲಿ ನಡೆಸಲಿರುವ ಜಂಟಿ ಅಧಿವೇಶನ ಹಾಗೂ ಬಜೆಟ್‌ ಮಂಡನೆ ಕೇವಲ ಕಾಟಾಚಾರಕ್ಕೆ ಎಂಬಂತಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಅರುಣ ಶಹಾಪುರ ಆರೋಪಿಸಿದರು.

Vijaya Karnataka 27 Jan 2019, 5:00 am
ಸಿಂದಗಿ (ವಿಜಯಪುರ) : ರಾಜ್ಯ ಸರಕಾರ ಮುಂಬರುವ ತಿಂಗಳಲ್ಲಿ ನಡೆಸಲಿರುವ ಜಂಟಿ ಅಧಿವೇಶನ ಹಾಗೂ ಬಜೆಟ್‌ ಮಂಡನೆ ಕೇವಲ ಕಾಟಾಚಾರಕ್ಕೆ ಎಂಬಂತಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಅರುಣ ಶಹಾಪುರ ಆರೋಪಿಸಿದರು.
Vijaya Karnataka Web shahpur accused
ಕಾಟಾಚಾರದ ಬಜೆಟ್‌: ಶಹಾಪುರ ಆರೋಪ


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.6ರಂದು ಜಂಟಿ ಅಧಿವೇಶನ, ಫೆ.8ರಂದು ಬಜೆಟ್‌ ಮಂಡನೆ ಮಾಡಲಾಗುತ್ತಿದ್ದು, ಕಡಿಮೆ ಅವಧಿಯಲ್ಲಿಯೇ ಜಂಟಿ ಅಧಿವೇಶನ ನಡೆಯುತ್ತಿದ್ದು, ಪ್ರತಿಪಕ್ಷದವರ ಯಾವುದೇ ಚರ್ಚೆಗೆ ಅವಕಾಶವಿಲ್ಲದಂತಾಗಿದೆ ಎಂದು ದೂರಿದರು.

ಬೆಳಗಾವಿ ಅಧಿವೇಶನದಲ್ಲಿ ರೈತರ ಸಾಲಮನ್ನಾದ ವಾಗ್ದಾನ ಮಾಡಿದ್ದ ಸಿಎಂ ಕುಮಾರಸ್ವಾಮಿ ಅದನ್ನು ಉಳಿಸಿಕೊಂಡಿಲ್ಲ. ಭರವಸೆ ಮುಂದುವರಿಯುತ್ತಲೇ ಇದೆ. ಆದರೆ ಮನ್ನಾ ಮಾತ್ರ ಆಗಿಲ್ಲ. ಲೋಕಸಭೆ ಚುನಾವಣೆಯವರೆಗೂ ಅದು ರೈತರ ಖಾತೆಗೆ ಸೇರದೇ ಭರವಸೆಯಾಗಿಯೇ ಮುಂದುವರಿಯಲಿದೆ ಎಂದ ಅವರು, ದೇಶದ ದೇಶಿ ಶಿಕ್ಷಣ ಪದ್ಧತಿಗಾಗಿ ಕೇಂದ್ರದ ಸಮಗ್ರ ಶಿಕ್ಷಣ ಅಭಿಯಾನದ ಮೂಲಕ ಹೋಬಳಿಗೊಂದು ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಜತೆಗೆ ಭಾರತೀಯ ಶಿಕ್ಷಣ ಮಂಡಲ ರಚಿಸಲಾಗಿದೆ. ಈ ಮೂಲಕ ಗುರುಕುಲ ಪದ್ಧತಿಯಂತೆ ಶಿಕ್ಷಣ ನೀಡಲಾಗುತ್ತಿದೆ ಎಂದರು.

ಶಿಕ್ಷಕರ ವರ್ಗಾವಣೆ ನೀತಿಯಲ್ಲಿ ಯಾವುದೇ ಅಧಿಕಾರಿ ಹಾಗೂ ಸರಕಾರ ಹಸ್ತಕ್ಷೇಪ ಮಾಡಬಾರದು ಎಂಬ ನಿಯಮ ಜಾರಿಯಲ್ಲಿದ್ದರೂ ಸರಕಾರ ತನ್ನ ಮೂಗಿನ ನೇರಕ್ಕೆ ವರ್ಗಾವಣೆ ದಂಧೆ ನಡೆಸುತ್ತಿದೆ. ಸರಕಾರ ಶಿಕ್ಷಕರ ಸಂಬಳಕ್ಕಾಗಿ ಅಗತ್ಯ ಅನುದಾನ ನೀಡದೇ ಶಿಕ್ಷಕರನ್ನು ಪರದಾಡುವಂತೆ ಮಾಡುತ್ತಿದೆ. ಕೂಡಲೇ ಸರಕಾರ ತನ್ನ ವರ್ಗಾವಣೆ ನೀತಿಯನ್ನು ಸ್ಪಷ್ಟಪಡಿಸಿ ಪ್ರಕಟಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಶಿವು ರೋಡಗಿ, ವರ್ತಕ ಭೀಮಾಶಂಕರ ತಾರಾಪುರ, ಶಿಕ್ಷಕ ಸಂತೋಷ ಹೂನಳ್ಳಿ, ವಿಜಯಕುಮಾರ ಸಜ್ಜನ, ಮಲ್ಲು ಅಗಸರ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ