ಆ್ಯಪ್ನಗರ

ಬರ ಛಾಯೆ, ಬೆಳೆ ನಾಶ

ವಿಕ ವಿಶೇಷ ದೇವರಹಿಪ್ಪರಗಿ ತಾಲೂಕಿನಲ್ಲಿ ಬರದ ಛಾಯೆ ಆವರಿಸಿದ್ದು , ರೈತ ಸಮೂಹದ ಬದುಕು ದುಸ್ತರವಾಗುತ್ತಿದೆ. ಮಳೆರಾಯನ ಮುನಿಸಿನಿಂದ ಬೆಳೆಯೆಲ್ಲ ಸಂಪೂರ್ಣವಾಗಿ ನೆಲಕಚ್ಚಿದೆ. ಎಕರೆಗೆ ಕ್ವಿಂಟಲ್‌ಗಟ್ಟಲೇ ಬರುತ್ತಿದ್ದ ತೊಗರಿ 25 ಕೆಜಿಗೆ ಸೀಮಿತವಾಗಿದ್ದು, ರೈತರು ಮಮ್ಮಲ ಮರುಗುತ್ತಿದ್ದಾರೆ.

Vijaya Karnataka 7 Jan 2019, 5:00 am
ವಿಕ ವಿಶೇಷ ದೇವರಹಿಪ್ಪರಗಿ
Vijaya Karnataka Web shrink drought and destroy the crop
ಬರ ಛಾಯೆ, ಬೆಳೆ ನಾಶ


ತಾಲೂಕಿನಲ್ಲಿ ಬರದ ಛಾಯೆ ಆವರಿಸಿದ್ದು , ರೈತ ಸಮೂಹದ ಬದುಕು ದುಸ್ತರವಾಗುತ್ತಿದೆ. ಮಳೆರಾಯನ ಮುನಿಸಿನಿಂದ ಬೆಳೆಯೆಲ್ಲ ಸಂಪೂರ್ಣವಾಗಿ ನೆಲಕಚ್ಚಿದೆ. ಎಕರೆಗೆ ಕ್ವಿಂಟಲ್‌ಗಟ್ಟಲೇ ಬರುತ್ತಿದ್ದ ತೊಗರಿ 25 ಕೆಜಿಗೆ ಸೀಮಿತವಾಗಿದ್ದು, ರೈತರು ಮಮ್ಮಲ ಮರುಗುತ್ತಿದ್ದಾರೆ.

ಇತ್ತೀಚೆಗೆ ಈ ಭಾಗದಲ್ಲಿ ಪ್ರಮುಖವಾಗಿ ಬೆಳೆಯುತ್ತಿದ್ದ ತೊಗರಿ ಬೆಳೆಯೂ ಮಳೆಯಿಲ್ಲದ ಕಾರಣ ನೆಲಕಚ್ಚಿದೆ. ಕಳೆದ ಸಲ 72 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಬೆಳೆಯಲಾಗಿತ್ತು. ಎಕರೆಗೆ 3ರಿಂದ 4 ಕ್ವಿಂಟಾಲ್‌ ಬೆಳೆ ಬಂದಿತ್ತು. ಆದರೆ ಈ ಸಲ 65 ಸಾವಿರ ಹೆಕ್ಟೇರ್‌ ತೊಗರಿ ಬಿತ್ತನೆ ಮಾಡಿದ್ದು , ಎಕರೆಗೆ 20 ಕೆಜಿಯೂ ಬಾರದಂತಾಗಿದೆ. ಹೀಗಾಗಿ ರೈತನಿಗೆ ಆದಾಯವಾಗಬೇಕಿದ್ದ ತೊಗರಿಬೆಳೆ ಬಿತ್ತಿದ ಖರ್ಚು ಬಾರದೇ ಸಂಕಷ್ಟಕ್ಕೀಡು ಮಾಡಿದೆ.

ಬಿಳಿ ಜೋಳ ಮಾಯ

ವಾಡಿಕೆಗಿಂತ ಈ ಸಲ ಮಳೆ ಇಲ್ಲದ್ದರಿಂದ ಬೆಳೆಯಲ್ಲಾ ನೆಲಕಚ್ಚಿದೆ. ಮುಂಗಾರು ಮಳೆಯನ್ನವಲಂಬಿಸಿ ರೈತರು ಭೂಮಿಗೆ ಬೀಜ ಹಾಕಿ ಕುಳಿತಿದ್ದರು. ಆದರೆ ವರುಣರಾಯ ಕರುಣೆ ತೋರಲಿಲ್ಲ. ಕಳೆದ ಸಲ ಎಕರೆಗೆ ಹತ್ತಾರು ಚೀಲ ಜೋಳ ಬೆಳೆಯುತ್ತಿದ್ದ ರೈತ ಈ ಸಲ 25 ಕೆಜಿಯೂ ಬೆಳೆಯದಂತಾಗಿದೆ. ವಿಜಯಪುರ ಜಿಲ್ಲೆಯ ಜನತೆಗೆ ವಾರದಲ್ಲಿ 7 ದಿನಗಳು ರೊಟ್ಟಿಯೇ ಪ್ರಮುಖ ಆಹಾರವಾಗಿದೆ. ಗೋದಿ ಇದ್ದರೂ ಬಳಕೆ ಪ್ರಮಾಣ ಮಾತ್ರ ಕಡಿಮೆಯಿದೆ. ಜಿಲ್ಲೆಯ ಜನತೆಗೆ ಜೋಳದ ರೊಟ್ಟಿ ಊಟ ಮಾಡದಿದ್ದರೂ ಹೊಟ್ಟೆ ತುಂಬುವುದೇ ಇಲ್ಲ . ಆದರೆ ಈಸಲ ಜೋಳ ಮಾತ್ರ ಬೆಳೆಯಲಾಗಲಿಲ್ಲ. ಇನ್ನೂ ಜೋಳ ಬೆಳೆಯದೆ ಇರುವುದರಿಂದ ಜಾನುವಾರುಗಳಿಗೆ ಮೇವಿನ ಚಿಂತೆಯೂ ಪ್ರಾರಂಭವಾಗಿದೆ.

ಕಳೆದ ಸಲಕ್ಕಿಂತಲೂ ಈ ಸಲ ಜೋಳ ಹಾಗೂ ತೊಗರಿ ಬೆಳೆ ಅತ್ಯಂತ ಕಡಿಮೆ ಫಸಲು ಬಂದಿದೆ. ಕಳೆದ ಸಲ ಎಕರೆಗೆ 3ರಿಂದ 4 ಕ್ವಿಂಟಾಲ್‌ ತೊಗರಿ ಬೆಳೆ ಬಂದರೆ ಈ ಸಲ ಮಾತ್ರ ಎಕರೆಗೆ ಕೇವಲ 25 ಕೆಜಿಯಷ್ಟು ಬಂದಿಲ್ಲ. ಕಳೆದ ಸಲ 72 ಸಾವಿರ ಹೆಕ್ಟೇರ್‌ ತೊಗರಿ ಬಿತ್ತಿದ್ದು , ಈ ಸಲ 65 ಸಾವಿರ ಹೆಕ್ಟೇರ್‌ ಬಿತ್ತನೆಯಾದರೂ ಫಸಲು ತೀರಾ ಕಡಿಮೆ.
ಎಚ್‌ ವೈ. ಸಿಂಗೇಗೋಳ, ಕೃಷಿ ಅಧಿಕಾರಿಗಳು, ಸಿಂದಗಿ

ಸಾಲ ಮಾಡಿ ಭೂಮಿಗೆ ಬೀಜ ಹಾಕಿದ್ದೆವು. ಮಳೆರಾಯನಿಗೆ ಮಾತ್ರ ಕರುಣೆ ಬರಲೇ ಇಲ್ಲ. ಬಿತ್ತಿದ ಖರ್ಚು ಸಹ ಮರಳಿ ಬಾರದಂತಾಗಿದೆ. ಜಾನುವಾರುಗಳಿಗೆ ಮೇವಿಲ್ಲದಂತಾಗಿದೆ.
ನಿಂಗನಗೌಡ ಬಿರಾದಾರ, ಕೃಷಿಕ ಬಮ್ಮನಜೋಗಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ