ಆ್ಯಪ್ನಗರ

ಈ ಕಳ್ಳರ ಟಾರ್ಗೆಟ್‌ ಕೇವಲ ದೇವಸ್ಥಾನ!

ದೇವಸ್ಥಾನವ ನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಅಂತರ್‌ ಜಿಲ್ಲಾ ಕಳ್ಳರನ್ನು ಬಂಧಿಸಿರುವ ಪೊಲೀಸರು ಬಂಧಿತರಿಂದ 43 ಲಕ್ಷ ಮೌಲ್ಯದ 76 ಕೆಜಿ ಬೆಳ್ಳಿ ಮೂರ್ತಿ ಹಾಗೂ 417 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

Vijaya Karnataka 20 Nov 2017, 4:49 pm
ವಿಜಯಪುರ: ದೇವಸ್ಥಾನವ ನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಅಂತರ್‌ ಜಿಲ್ಲಾ ಕಳ್ಳರನ್ನು ಬಂಧಿಸಿರುವ ಪೊಲೀಸರು ಬಂಧಿತರಿಂದ 43 ಲಕ್ಷ ಮೌಲ್ಯದ 76 ಕೆಜಿ ಬೆಳ್ಳಿ ಮೂರ್ತಿ ಹಾಗೂ 417 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
Vijaya Karnataka Web these thieves target temple for robbery
ಈ ಕಳ್ಳರ ಟಾರ್ಗೆಟ್‌ ಕೇವಲ ದೇವಸ್ಥಾನ!


ಚಿತ್ರದುರ್ಗ ಜಿಲ್ಲೆಯ 41 ವರ್ಷದ ಮುದ್ದು ರಾಜ್, 57 ವರ್ಷದ ಬಾಗಲಕೋಟೆ ಜಿಲ್ಲೆಯ ಮಲ್ಲನಗೌಡ ಆಕೂರು, 34 ವರ್ಷದ ರವಿ ಮುರನಾಳ ಬಂಧಿತ ಆರೋಪಿಗಳು. ಘಟನೆಗೆ ಸಂಬಂದಿಸಿದಂತೆ ಇನ್ನೂ ಇಬ್ಬರು ಬೈಕ್ ಕಳ್ಳರನ್ನು ಬಂಧಿಸಿರುವ ಪೊಲೀಸರು ಬಂಧಿತ ಆರೋಪಿ ವಸಂತ ಹಾಗೂ ಮಲ್ಲಿಕಾರ್ಜುನ ಎಂಬಾತರಿಂದ ಒಂದು ಲಕ್ಷ ಮೌಲ್ಯದ ಎರಡು ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ.

ಇವರೊಂದಿಗೆ ಲಾರಿಗಳನ್ನೇ ಟಾರ್ಗಿಟ್‌ ಮಾಡಿ ಕಳ್ಳತ ಎಸಗುತ್ತಿದ್ದ ಖತರ್ನಾಕ ಮೂವರು ಕಳ್ಳರನ್ನೂ ಸಹ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಕಳೆದ ಬಾರಿ ಒಂದುವರೆ ಟನ್ ಸಕ್ಕರೆ ಹೊಂದಿದ್ದ ಲಾರಿಯನ್ನೇ ಹೊತ್ತೊಯ್ದಿದ್ದರು.

ಇದರ ತನಿಖೆ ನಡೆಸಿದ್ದ ಪೊಲೀಸರು ವಿಜಯಪುರದ ಮೂಲದ ಭರತ ಅಗರವಾಲ್, ಅಬ್ದುಲ್ ರಜಾಕ ಮಸಳಿ, ಬಾದಷಾ ನದಾಫ್ ಎಂಬವರನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ‌.

ಇನ್ನು ವಸ್ತುಗಳನ್ನು ಕಳೆದುಕೊಂಡಿದ್ದ ಮೂಲ ಮಾಲೀಕರುಗಳಿಗೆ ಪೊಲೀಸರು ಆ ಎಲ್ಲ ವಸ್ತುಗಳನ್ನು ವಾಪಸ್ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ