ಆ್ಯಪ್ನಗರ

ವಿಜಯಪುರ: ಡಾಕ್ಟರ್ ಪತಿಯ 4ನೇ ಮದುವೆಗೆ ಬ್ರೇಕ್‌ ಹಾಕಲು 3ನೇ ಪತ್ನಿಯಿಂದ ಬಿರುಸುಗೊಂಡ ಹೋರಾಟ

ಆನೇಕಲ್‌ ತಾಲೂಕಿನ ಇಂದಲವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ವಿರುದ್ಧ ಮೂರನೇ ಪತ್ನಿ ಹೋರಾಟ ನಡೆಸುತ್ತಿದ್ದು, 4 ನೇ ಮದುವೆ ತಡೆಯಲು ಎಂದು ನ್ಯಾಯಾಲಯದ ಮೆಟ್ಟಲೇರಿದ್ದಾಳೆ.

Vijaya Karnataka Web 29 Jul 2020, 2:10 pm
ವಿಜಯಪುರ: ಪತಿಯ ವರ್ತನೆಗೆ ಬೇಸತ್ತ ಆತನ 3ನೇ ಪತ್ನಿ ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದು, 4ನೇ ಮದುವೆಗೆ ಬ್ರೇಕ್‌ ನೀಡಬೇಕೆಂದು ಒತ್ತಾಯಿಸಿದ್ದಾರೆ.ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್‌ ತಾಲೂಕಿನ ಇಂದಲವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಂಜುನಾಥ ಎಂಬುವರೇ ತನಗೆ ಮೋಸ ಮಾಡಿದ ಪತಿ ಎಂದು ದೂರಿದ್ದಾರೆ.
Vijaya Karnataka Web marriage


ಈತನ ಮೊದಲ ಪತ್ನಿಗೆ 8 ವರ್ಷದ ಗಂಡು ಮಗುವಿದೆ. ಆಕೆಗೆ ವಿಚ್ಛೇದನೆ ನೀಡದೇ 2ನೇ ಮದುವೆಯಾಗಿದ್ದ. ಆಕೆಯನ್ನು ಬಿಟ್ಟು ವಿಜಯಪುರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ನನ್ನನ್ನು 8 ವರ್ಷದ ಹಿಂದೆ ಮದುವೆಯಾಗಿದ್ದ. ಸಾಲದೆಂಬಂತೆ ಬೆಂಗಳೂರಿನ ವಧು-ವರರ ಕೇಂದ್ರದ ಮೂಲಕ ಧಾರವಾಡ ಮಹಿಳೆಯೊಬ್ಬಳನ್ನು ಮದುವೆಯಾಗಲು ಹೊರಟಿರುವ ಸಂಗತಿ ನನಗೆ ಗೊತ್ತಾಗಿದೆ. ಹೀಗಾಗಿ 4ನೇ ಮದುವೆಯನ್ನು ನಿಲ್ಲಿಸಬೇಕೆಂದು ಆಕ್ರೋಶಗೊಂಡ ಆತನ 3ನೇ ಪತ್ನಿ, ಇಲ್ಲಿನ ಮಹಿಳಾ ಠಾಣೆಗೆ ದೂರು ನೀಡಲು ಆಗಮಿಸಿದ್ದರು.

ದಾಖಲಾಗದ ದೂರು
ಈಗಾಗಲೇ ಪ್ರಕರಣ ನ್ಯಾಯಾಲಯದಲ್ಲಿದೆ. ಹಾಗಾಗಿ ಆರೋಪಿ ಪತಿ ವಿರುದ್ಧ ದೂರು ದಾಖಲಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ. ತೀರಾ ಅಗತ್ಯವಿದ್ದರೆ, ಕುಟುಂಬ ನ್ಯಾಯಾಲಯದ ಮೊರೆ ಹೋಗಬಹುದಾಗಿದೆ ಎಂಬುದಾಗಿ ತಿಳಿಸಿದ್ದಾಗಿ ಮಹಿಳಾ ಠಾಣೆಯ ಸಿಪಿಐ ಶಕೀಲ ಪಿಂಜಾರ ವಿಜಯ ಕರ್ನಾಟಕಕ್ಕೆ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ