ಆ್ಯಪ್ನಗರ

ವಿಜಯಪುರ: 85 ಲಕ್ಷ ರೂ.ಗಳಿಗೂ ಅಧಿಕ ಹಣ ವಂಚಿಸಿದ ವಂಚಕರು

ಬೆಳೆಗಾರರನ್ನು ವಂಚಿಸಿದ ಆರೋಪಿಗಳು ವಿಜಯಪುರದಲ್ಲೇ ಹಲವು ತಿಂಗಳುಗಳಿಂದ ತಂಗಿದ್ದರು. ಇಲ್ಲಿನ ಎಪಿಎಂಸಿಯಲ್ಲಿ ನಡೆಯುವ ಪ್ರತಿ ವಹಿವಾಟಿನಲ್ಲಿ ಭಾಗವಹಿಸಿ, ರೈತರಿಗೆ ಹಣ ಪಾವತಿಸುತ್ತಿದ್ದರು. ಹೀಗಾಗಿ ಜಿಲ್ಲೆಯ ದ್ರಾಕ್ಷಿ ಬೆಳೆಗಾರರು ಆರೋಪಿಗಳನ್ನು ಬಲವಾಗಿ ನಂಬಿದ್ದರು.

Vijaya Karnataka Web 30 Jun 2022, 8:49 pm
ವಿಜಯಪುರ: ಒಣದ್ರಾಕ್ಷಿ ಪಡೆದು ಬ್ಯಾಂಕ್ ಖಾತೆಗೆ ಹಣ ಹಾಕುವುದಾಗಿ ದ್ರಾಕ್ಷಿ ಬೆಳೆಗಾರರನ್ನು ನಂಬಿಸಿದ ಗುಜರಾತ್ ಹಾಗೂ ರಾಜಸ್ಥಾನ ಮೂಲದ ವ್ಯಾಪಾರಿಗಳು 85 ಲಕ್ಷಕ್ಕೂ ಅಧಿಕ ಹಣ ವಂಚಿಸಿ ಪರಾರಿಯಾಗಿದ್ದಾರೆ.
Vijaya Karnataka Web ಪೊಲೀಸ್‌
ಪೊಲೀಸ್‌


ಈ ಘಟನೆ ವಿಜಯಪುರದ ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ಬೆಳಕಿಗೆ ಬಂದಿದೆ. ಇದರಿಂದಾಗಿ ದ್ರಾಕ್ಷಿ ಬೆಳೆಗಾರರು ಕೈ, ಕೈ ಹಿಸುಕಿಕೊಳ್ಳುವಂತಾಗಿದೆ.

ಗುಜರಾತ್ ಮತ್ತು ರಾಜಸ್ಥಾನ ಮೂಲದ ಕಮಲಕುಮಾರ ಸೋಹನಲಾಲ, ಕೃನಾಲಕುಮಾರ ಮಹೇಂದ್ರಕುಮಾರ ಪಟೇಲ, ನೀಲದಿನೇಶ್‌ಬಾಯಿ ಪಟೇಲ, ರೋಹನ್‌ಕುಮಾರ ಪಟೇಲ, ಭರತಬಾಯಿ ಜೇಟಾಬಾಯಿ ಪಟೇಲ, ಪಿಂಕೇಶ ಸುರೇಶಬಾಯಿ ಪಟೇಲ, ಸಚಿನ್, ಸುನೀಲ, ಜಯೇಶ, ಭರತ್ ಜೇಟಾಬಾಯಿ ದ್ರಾಕ್ಷಿ ಬೆಳೆಗಾರರನ್ನು ವಂಚಿಸಿದ ಆರೋಪಿಗಳು.

ಚಾಳಿ ಬಿಡದಿದ್ದರೆ ಎದೆಗೆ ಗುಂಡು ಹಾಕ್ತೇನೆ: ರೌಡಿಗಳ ಚಳಿ ಬಿಡಿಸಿದ ವಿಜಯಪುರ ಪೊಲೀಸ್‌ ವರಿಷ್ಠಾಧಿಕಾರಿ!

ವಿಜಯಪುರ ದ್ರಾಕ್ಷಿ ಬೆಳೆಗಾರರಾದ ಜಾಕೀರ್ ಬಾಗವಾನ್, ತೌಫೀಕ್ ಅಂಗಡಿ, ಅಬ್ದುಲ್ ಖಾದರ್ ತಹಸೀಲ್ದಾರ್ ಹಾಗೂ ಸಂತೋಷಕುಮಾರ ಗುಂಜಟಗಿ ವಂಚನೆಗೀಡಾದವರು.

ಬೆಳೆಗಾರರನ್ನು ವಂಚಿಸಿದ ಆರೋಪಿಗಳು ವಿಜಯಪುರದಲ್ಲೇ ಹಲವು ತಿಂಗಳುಗಳಿಂದ ತಂಗಿದ್ದರು. ಇಲ್ಲಿನ ಎಪಿಎಂಸಿಯಲ್ಲಿ ನಡೆಯುವ ಪ್ರತಿ ವಹಿವಾಟಿನಲ್ಲಿ ಭಾಗವಹಿಸಿ, ರೈತರಿಗೆ ಹಣ ಪಾವತಿಸುತ್ತಿದ್ದರು. ಹೀಗಾಗಿ ಜಿಲ್ಲೆಯ ದ್ರಾಕ್ಷಿ ಬೆಳೆಗಾರರು ಆರೋಪಿಗಳನ್ನು ಬಲವಾಗಿ ನಂಬಿದ್ದರು.

ಅದೇ ವಿಶ್ವಾಸದ ಮೇಲೆ ಒಣದ್ರಾಕ್ಷಿ ಪಡೆದು, ಬ್ಯಾಂಕ್ ಖಾತೆಗೆ ಹಣ ಜಮೆ ಮಾಡುವುದಾಗಿ ನಂಬಿಸಿ, 85 ಲಕ್ಷಕ್ಕೂ ಅಧಿಕ ಹಣವನ್ನು ಬೆಳೆಗಾರರಿಂದ ಯಾಮಾರಿಸಿದ್ದಾರೆ.

ಈ ಪೈಕಿ ಜಾಕೀರ್ ಬಾಗವಾನ್ ಎಂಬುವರಿಂದ 21,59,598 ರೂ.ಮೌಲ್ಯದ 11.54 ಟನ್ ತೂಕದ ಒಣದ್ರಾಕ್ಷಿ ತುಂಬಿದ 746 ಬಾಕ್ಸ್‌ಗಳನ್ನು ಖರೀದಿಸಿ ವಂಚಿಸಿದರೆ, ತೌಫೀಕ್ ಅಂಗಡಿ ಎಂಬುವರಿಂದ 24,29,152 ರೂ. ಮೌಲ್ಯದ 12.755 ಟನ್ ತೂಕದ ಒಣ ದ್ರಾಕ್ಷಿ, ಸಿದ್ದಸಿರಿ ಸಂಸ್ಥೆಯ ಸಿದ್ದಸಿರಿ ಕೋಲ್ಡ್ ಸ್ಟೋರೇಜ್‌ನಿಂದ 20,69,049 ರೂ.ಮೌಲ್ಯದ 10.423 ಟನ್ ಹಾಗೂ ಅಬ್ದುಲ್‌ ಖಾದರ ತಹಸೀಲ್ದಾರ್ ಅವರಿಂದ 18,91,451 ರೂ.ಮೌಲ್ಯದ 9.440 ಟನ್ ಒಣದ್ರಾಕ್ಷಿ ಖರೀದಿಸಿ ವಂಚಿಸಿದ್ದಾರೆ. ವಾರದ ಕೆಲ ದಿನಗಳ ಕಾಲ ಒಣದ್ರಾಕ್ಷಿ ಖರೀದಿಸಿದ ವಂಚಕರು ಈ ದ್ರಾಕ್ಷಿ ಬೆಳೆಗಾರರಿಗೆ ಒಟ್ಟು 85,49,250 ರೂ. ಪಾವತಿಸಬೇಕಿದೆ.

40% ಕಮಿಷನ್ ಹಗರಣದ ಕುರಿತು ಪ್ರಧಾನಿ ಕಚೇರಿ ಬಹಳ ಬೇಗ ವರದಿ ಕೇಳಿದೆ: ಎಂಬಿ ಪಾಟೀಲ ವ್ಯಂಗ್ಯ

ಆದರೆ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡುವುದಾಗಿ ಹೇಳಿದ್ದನ್ನು ನಂಬಿ ಬ್ಯಾಂಕ್ ಖಾತೆ ಚೆಕ್ ಮಾಡಿದರೆ, ವಂಚಕರ ಖಾತೆಯಲ್ಲಿ ಹಣವಿಲ್ಲ ಎಂಬುದನ್ನು ಬ್ಯಾಂಕ್ ಸಿಬ್ಬಂದಿ ತಿಳಿಸಿದಾಗ, ತಾವೆಲ್ಲ ಮೋಸ ಹೋಗಿದ್ದೇವೆ ಎಂಬುದು ದ್ರಾಕ್ಷಿ ಬೆಳೆಗಾರರಿಗೆ ಗೊತ್ತಾಗಿದೆ.

ಬಳಿಕ ಎಪಿಎಂಸಿ ಅಧ್ಯಕ್ಷ ಹಾಗೂ ಪದಾಧಿಕಾರಿಗಳನ್ನು ಭೇಟಿ ಮಾಡಿದ ಬೆಳೆಗಾರರು ಬಳಿಕ, ವಂಚಕರ ವಿರುದ್ಧ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ