ಆ್ಯಪ್ನಗರ

ಇಬ್ಬರಿಗೆ ಸೋಂಕು, 6 ಜನ ಬಿಡುಗಡೆ

ವಿಜಯಪುರ: ಜಿಲ್ಲೆಯಲ್ಲಿ ಗುರುವಾರ ಇಬ್ಬರಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದ್ದು , ಸೋಂಕಿತರ ಸಂಖ್ಯೆ 81ಕ್ಕೆ ಏರಿದೆ. ಇದೇ ದಿನ 6 ಮಂದಿ ಸೋಂಕಿತರು ಗುಣಮುಖರಾಗಿ ಕೋವಿಡ್‌ ಅಸ್ಪತ್ರೆಯಿಂದ ಬಿಡುಗಡೆಗೊಂಡರು.

Vijaya Karnataka 29 May 2020, 5:00 am
ವಿಜಯಪುರ: ಜಿಲ್ಲೆಯಲ್ಲಿ ಗುರುವಾರ ಇಬ್ಬರಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದ್ದು , ಸೋಂಕಿತರ ಸಂಖ್ಯೆ 81ಕ್ಕೆ ಏರಿದೆ. ಇದೇ ದಿನ 6 ಮಂದಿ ಸೋಂಕಿತರು ಗುಣಮುಖರಾಗಿ ಕೋವಿಡ್‌ ಅಸ್ಪತ್ರೆಯಿಂದ ಬಿಡುಗಡೆಗೊಂಡರು.
Vijaya Karnataka Web two infected 6 released
ಇಬ್ಬರಿಗೆ ಸೋಂಕು, 6 ಜನ ಬಿಡುಗಡೆ


32 ವರ್ಷದ (ಪಿ 2420) ಹಾಗೂ 23 ವರ್ಷದ (ಪಿ2421) ಪುರುಷರಿಗೆ ಪಾಸಿಟಿವ್‌ ಬಂದಿದೆ. ಇಬ್ಬರಿಗೂ ಮಹಾರಾಷ್ಟ್ರದ ಸಂಪರ್ಕದಿಂದ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ತಿಳಿಸಿದ್ದಾರೆ.

ಈವರೆಗೆ 81 ಕೊರೊನಾ ಸೋಂಕು ದೃಢವಾಗಿದ್ದು, ಅದರಲ್ಲಿ54 ಜನರು ಗುಣಮುಖರಾಗಿದ್ದು, 22 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. 5 ಸೋಂಕಿತರು ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ

6 ಮಂದಿ ಬಿಡುಗಡೆ :

ಗುರುವಾರ 29 ವರ್ಷ (ಪಿ1728), 30 ವರ್ಷ (ಪಿ 411), 35 ವರ್ಷದ (ಪಿ1122) ಮೂವರು ಹಿಳೆಯರು, 4 ವರ್ಷದ (ಪಿ1091) ಹೆಣ್ಣುಮಗು, 20 ವರ್ಷ (ಪಿ1729) ಹಾಗೂ 30 ವರ್ಷದ (ಪಿ1494) ಇಬ್ಬರು ಪುರುಷರು ಗುಣಮುಖರಾಗಿ ಬಿಡುಗಡೆಯಾದರು.

ಜಿಲ್ಲೆಗೆ ಹೊರಗಿನಿಂದ ಬಂದ 27,383 ಜನರ ಮೇಲೆ ನಿಗಾ ವಹಿಸಲಾಗಿದ್ದು. 5820 ಜನ 28 ದಿನಗಳ ಐಸೋಲೇಶನ್‌ ಅವಧಿ ಪೂರ್ಣಗೊಳಿಸಿದ್ದಾರೆ. 21,510 ಜನ (1 ರಿಂದ 28 ದಿನಗಳ) ರಿಪೋರ್‍ಟಿಂಗ್‌ ಅವಧಿಯಲ್ಲಿದ್ದಾರೆ. ಈವರೆಗೆ 22,065 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿದ್ದು, 10,876 ಜನರ ವರದಿ ನೆಗೆಟಿವ್‌ ಬಂದಿದೆ. 11,108 ಜನರ ಪರೀಕ್ಷಾ ವರದಿ ಬರಬೇಕಾಗಿದೆ ಎಂದು ಡಿಸಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ