ಆ್ಯಪ್ನಗರ

'ಅನುದಾನ ಕೊಟ್ಟರೆ ಬಿಜೆಪಿ ಸೇರುವ ಬಗ್ಗೆ ನಿರ್ಧಾರ'! ಜೆಡಿಎಸ್ ಶಾಸಕ ದೇವಾನಂದ್ ಹೊಸ ವರಸೆ!

'ಕ್ಷೇತ್ರದ ಅಭಿವೃದ್ಧಿಗೆ ಅಗತ್ಯ ಅನುದಾನ ಒದಗಿಸಿದರೆ ಬಿಜೆಪಿ ಸೇರಬೇಕೇ, ಬೇಡವೇ ಎಂಬುದರ ಬಗ್ಗೆ ನಂತರ ವಿಚಾರ ಮಾಡುತ್ತೇನೆ. ಅವರು ಮೊದಲು ಅನುದಾನ ಕೊಡಲಿ' - ನಾಗಠಾಣಾ ಕ್ಷೇತ್ರದ ಜೆಡಿಎಸ್ ಶಾಸಕ ದೇವಾನಂದ ಚೌಹಾಣ್

Vijaya Karnataka Web 26 Nov 2019, 7:14 pm
ವಿಜಯಪುರ: 'ಸದ್ಯಕ್ಕಂತೂ ಜೆಡಿಎಸ್‌ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಒಂದು ವೇಳೆ ಅಂಥ ಪ್ರಸಂಗ ಎದುರಾದರೆ ಕ್ಷೇತ್ರದ ಜನತೆ ಅಭಿಪ್ರಾಯ ಆಧರಿಸಿ ಮುಂದಿನ ನಡೆ ಇಡಲಾಗುವುದು. ಕ್ಷೇತ್ರದ ಅಭಿವೃದ್ಧಿ ನನ್ನ ಆದ್ಯತೆ' ಇದು ನಾಗಠಾಣಾ ಕ್ಷೇತ್ರದ ಜೆಡಿಎಸ್ ಶಾಸಕ ದೇವಾನಂದ ಚೌಹಾಣ್‌ ನಿಲುವು.
Vijaya Karnataka Web vijayapura jds mla devanand chouhan on operation bjp
'ಅನುದಾನ ಕೊಟ್ಟರೆ ಬಿಜೆಪಿ ಸೇರುವ ಬಗ್ಗೆ ನಿರ್ಧಾರ'! ಜೆಡಿಎಸ್ ಶಾಸಕ ದೇವಾನಂದ್ ಹೊಸ ವರಸೆ!


'ಕ್ಷೇತ್ರದ ಅಭಿವೃದ್ಧಿಗೆ ಸರಕಾರ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಒಂದು ವೇಳೆ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯ ಅನುದಾನ ಒದಗಿಸಿದರೆ ಬಿಜೆಪಿ ಸೇರಬೇಕೇ, ಬೇಡವೇ ಎಂಬುದರ ಬಗ್ಗೆ ನಂತರ ವಿಚಾರ ಮಾಡುತ್ತೇನೆ. ಅವರು ಮೊದಲು ಅನುದಾನ ಕೊಡಲಿ' ಈ ರೀತಿ ಹೊಸ ವರಸೆಯಲ್ಲಿ ವಾದ ಮಂಡಿಸಿದ್ದಾರೆ ದೇವಾನಂದ ಚೌಹಾಣ್!

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚೌಹಾಣ್, 'ವಿಜಯಪುರ ನಗರದ ಕೆಲ ವಾರ್ಡ್‌ಗಳು ನನ್ನ ಕ್ಷೇತ್ರದ ವ್ಯಾಪ್ತಿಗೆ ಸೇರಿದ್ದರಿಂದ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರೊಂದಿಗೆ ಆಶ್ರಯ ಮನೆ ಹಂಚಿಕೆ ವಿಷಯವಾಗಿ ಚರ್ಚಿಸಿದ್ದೇನೆ. ಯತ್ನಾಳರು ಹಿರಿಯ ನಾಯಕರು, ಅವರು ಜೆಡಿಎಸ್‌ನಲ್ಲಿದ್ದಾಗಿನಿಂದಲೂ ನನ್ನ ಜೊತೆಗೆ ಉತ್ತಮ ಬಾಂಧವ್ಯವಿದೆ. ಅವರು ನನಗೆ ಮಾರ್ಗದರ್ಶಕರು ಕೂಡ ಆಗಿದ್ದಾರೆ' ಎಂದು ದೇವಾನಂದ ಹೇಳಿದ್ದಾರೆ.

ಬೈ ಎಲೆಕ್ಷನ್‌ ಬಳಿಕ ಮತ್ತೊಮ್ಮೆ ಆಪರೇಷನ್ ಕಮಲ! ಬಿಜೆಪಿಗೆ ಜಿಗಿಯಲು ಆ ಇಬ್ಬರು ಜೆಡಿಎಸ್ ಶಾಸಕರು ರೆಡಿ?

ಈ ಹಿಂದೆ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕೇಳಲೆಂದು ಮೈಸೂರಿನಲ್ಲಿ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದೆ. ಅದು ತಪ್ಪೇ? ಎಂದು ನಾಗಠಾಣಾ ಕ್ಷೇತ್ರದ ಜೆಡಿಎಸ್ ಶಾಸಕ ದೇವಾನಂದ ಚೌಹಾಣ್‌ ಪ್ರಶ್ನಿಸಿದ್ದಾರೆ.

'ಮಿಸ್ಟರ್‌ ಯಡಿಯೂರಪ್ಪ ನಿಮ್ಮದೇನಪ್ಪ'? ಸಿಎಂಗೆ ಸಿದ್ದು ಟಾಂಗ್! ಹೆಬ್ಬಾರ್ ಮಾರಾಟವಾಗಿದ್ದು ಸತ್ಯವಂತೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ