ಆ್ಯಪ್ನಗರ

ಆಲಮಟ್ಟಿ ಡ್ಯಾಂನಿಂದ ನೀರು ಬಿಡುಗಡೆ: ಎಚ್ಚರಿಕೆಯಿಂದಿರಲು ಸಾರ್ವಜನಿಕರಿಗೆ ಮನವಿ

ಆಲಮಟ್ಟಿ ಅಣೆಕಟ್ಟಿನ ಜಲಾನಯನ ಪ್ರದೇಶಗಳಲ್ಲಿ ಮುಂಗಾರು ಮಳೆಯು ಪ್ರಾರಂಭವಾಗಿದ್ದು, ವಾಡಿಕೆಯಂತೆ ಪ್ರಸ್ತುತ ಸಾಲಿನಕಲ್ಲೂ ಜಲಾಶಯದಲ್ಲಿ 519.60 ಮೀ.ವರೆಗೆ ನೀರನ್ನು ಸಂಗ್ರಹ ಮಾಡಲಾಗುವುದು.

Vijaya Karnataka 7 Jul 2019, 7:45 am
ವಿಜಯಪುರ: ಆಲಮಟ್ಟಿ ಜಲಾಶಯದಿಂದ ಯಾವುದೇ ಸಮಯದಲ್ಲಿ ನದಿಯ ಭಾಗಕ್ಕೆ ನೀರು ಬಿಡುಗಡೆಗೊಳಿಸುವುದರಿಂದ ಕೆಳಭಾಗದಲ್ಲಿ ಬರುವ ನದಿ ಪಕ್ಕದಲ್ಲಿರುವ ಹಳ್ಳಿಗಳ ಜನರು ಎಚ್ಚರಿಕೆಯಿಂದಿರಲು ಕೃಷ್ಣಾ ಭಾಗ್ಯ ಜಲನಿಗಮದ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಮನವಿ ಮಾಡಿಕೊಂಡಿದ್ದಾರೆ.
Vijaya Karnataka Web dam


ಆಲಮಟ್ಟಿ ಅಣೆಕಟ್ಟಿನ ಜಲಾನಯನ ಪ್ರದೇಶಗಳಲ್ಲಿ ಮುಂಗಾರು ಮಳೆಯು ಪ್ರಾರಂಭವಾಗಿದ್ದು, ವಾಡಿಕೆಯಂತೆ ಪ್ರಸ್ತುತ ಸಾಲಿನಕಲ್ಲೂ ಜಲಾಶಯದಲ್ಲಿ 519.60 ಮೀ.ವರೆಗೆ ನೀರನ್ನು ಸಂಗ್ರಹ ಮಾಡಲಾಗುವುದು. ಆದ್ದರಿಂದ ಅಣೆಕಟ್ಟಿನ ಮೇಲ್ಭಾಗದ ಪ್ರದೇಶಗಳಲ್ಲಿ ಮುಳುಗಡೆಯಾಗಲಿರುವ ಎಲ್ಲ ಹಳ್ಳಗಳ ಹಾಗೂ ನಗರಗಳ ಸಾರ್ವಜನಿಕರು ತಮ್ಮ ಜನ-ಜಾನುವಾರು ಹಾಗೂ ಆಸ್ತಿ-ಪಾಸ್ತಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಿಕೊಳ್ಳಬೇಕು. ಈ ಮುನ್ಸೂಚನೆಯನ್ನು ನಿರ್ಲಕ್ಷಿಸಿದ್ದಲ್ಲಿ ಉಂಟಾಗುವ ಅನಾಹುತ ಮತ್ತು ನಷ್ಟಗಳಿಗೆ ನಿಗಮ ಜವಾಬ್ದಾರಿಯಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಲಾಶಯ ಮಟ್ಟ

ಶನಿವಾರ ಜಲಾಶಯಕ್ಕೆ 32,190 ಕ್ಯೂಸೆಕ್‌ ನೀರು ಒಳ ಹರಿವಿದ್ದು, 519.60 ಮೀ. ಗರಿಷ್ಠ ಮಟ್ಟದಲ್ಲಿ 510.48 ಮೀ. ನೀರಿನ ಮಟ್ಟ ಇದ್ದರೆ, 123.081 ಟಿಎಂಸಿ ಗರಿಷ್ಠ ನೀರು ಸಂಗ್ರಹದ ಎದುರು ಸದ್ಯ 32.302 ಟಿಎಂಸಿ ನೀರು ಸಂಗ್ರಹವಾಗಿದೆ.

ಮಹಾರಾಷ್ಟ್ರದಲ್ಲಿ ಸದ್ಯ ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ ಕಳೆದೆರಡು ದಿನಗಳಿಂದ ಒಳ ಹರಿವು 40 ಸಾವಿರ ಕ್ಯೂಸೆಕ್‌ನಿಂದ 32 ಸಾವಿರ ಕ್ಯೂಸೆಕ್‌ಗೆ ತಗ್ಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ