ಆ್ಯಪ್ನಗರ

ಮಹಿಳೆ ಸಾವು, ನಾಲ್ವರಿಗೆ ಗಾಯ

ವಿಜಯಪುರ : ಗೃಹ ಬಳಕೆಯ ಸಿಲಿಂಡರ್‌ ಸ್ಫೋಟಗೊಂಡಿದ್ದರಿಂದ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಐವರು ಗಾಯಗೊಂಡ ಘಟನೆ ತಾಳಿಕೋಟೆ ತಾಲೂಕಿನ ಬಂಡೆಪ್ಪನಸಾಲವಾಡಗಿ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.

Vijaya Karnataka 1 Jun 2019, 5:00 am
ವಿಜಯಪುರ : ಗೃಹ ಬಳಕೆಯ ಸಿಲಿಂಡರ್‌ ಸ್ಫೋಟಗೊಂಡಿದ್ದರಿಂದ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಐವರು ಗಾಯಗೊಂಡ ಘಟನೆ ತಾಳಿಕೋಟೆ ತಾಲೂಕಿನ ಬಂಡೆಪ್ಪನಸಾಲವಾಡಗಿ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.
Vijaya Karnataka Web woman deaths four injured
ಮಹಿಳೆ ಸಾವು, ನಾಲ್ವರಿಗೆ ಗಾಯ


ಗ್ರಾಮದ ಸರ್ವಮಂಗಳಾ ಮಲ್ಲಿಕಾರ್ಜುನ ಜಾಗೀರದಾರ (53) ಸ್ಥಳದಲ್ಲೇ ಮೃತಪಟ್ಟ ಗೃಹಿಣಿ. ಘಟನೆಯಲ್ಲಿ ತೀವ್ರ ಗಾಯಗೊಂಡಿರುವ ಚೆನಸಂಗಯ್ಯ ರುದ್ರಸ್ವಾಮಿ ಜಾಗೀರದಾರ (50), ಪಂಡಿತಾರಾಧ್ಯ ಚೆನಸಂಗಯ್ಯ ಜಾಗೀರಾದಾರ (55), ಶರಣು ಜಾಗೀರದಾರ (27) ಹಾಗೂ ರುದ್ರಸ್ವಾಮಿ ಚೆನಸಂಗಯ್ಯ ಜಾಗೀರದಾರ (75) ಅವರನ್ನು ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರೆಲ್ಲ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಾಳಿಕೋಟೆ ಠಾಣೆ ಪೊಲೀಸರು ತಿಳಿಸಿದ್ದಾರೆ.

ಹೇಗಾಯಿತು ಘಟನೆ:

ಸರ್ವಮಂಗಳಾ ಎಂದಿನಂತೆ ಗೃಹಬಳಕೆಯ ಸಿಲಿಂಡರ್‌ ಮೇಲೆ ಅಡುಗೆ ಮಾಡುತ್ತಿದ್ದರು. ಆದರೆ ಏಕಾಏಕಿ ಗ್ಯಾಸ್‌ ಖಾಲಿಯಾಯಿತು. ತಕ್ಷಣವೇ ಮನೆಯಲ್ಲಿ ಸಂಗ್ರಹವಿದ್ದ ಸಿಲಿಂಡರ್‌ ಅಳವಡಿಸಲು ಮಹಿಳೆ ಮುಂದಾದರು. ಹೊಸ ಸಿಲಿಂಡರ್‌ ಅಳವಡಿಸುತ್ತಿದ್ದ ವೇಳೆ ರೆಗ್ಯೂಲೇಟರ್‌ ಚೆನ್ನಾಗಿ ಕೂಡ್ರಿಸದೇ ಮಹಿಳೆ ಗ್ಯಾಸ್‌ ಆನ್‌ ಮಾಡಿದ್ದಾಳೆ ಎನ್ನಲಾಗುತ್ತಿದೆ. ಅದು ಲೀಕ್‌ ಆಗಿದ್ದರಿಂದ ಮನೆಯ ಪರಿಸರದಲ್ಲಿ ಪಸರಿಸಿದೆ. ಆಗ ಅಡುಗೆ ಮನೆಯಲ್ಲಿ ಹಚ್ಚಿಟ್ಟಿದ್ದ ದೀಪಕ್ಕೆ ತಾಗಿದ್ದರಿಂದಾಗಿ ಇದ್ದಕ್ಕಿದ್ದಂತೆಯೇ ಗ್ಯಾಸ್‌ ಸ್ಫೋಟಗೊಂಡಿದೆ. ಸರ್ವಮಂಗಳಾ ಸ್ಥಳದಲ್ಲೇ ಅಸುನೀಗಿದರೆ, ಮನೆಯಲ್ಲಿದ್ದ ನಾಲ್ವರು ಗಾಯಗೊಂಡಿದ್ದಾರೆ.

ನೆಲಕ್ಕಚ್ಚಿದ ಗೋಡೆ :

ಸಿಲಿಂಡರ್‌ ಸ್ಫೋಟದ ರಭಸಕ್ಕೆ ಮನೆಯ ಗೋಡೆ ಛಿದ್ರಗೊಳ್ಳುವ ಮೂಲಕ ನೆಲಕ್ಕಚ್ಚಿದೆ. ಆದರೆ ಕುಟುಂಬ ಇತರೆ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತಾಳಿಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ