ಆ್ಯಪ್ನಗರ

ಕಷ್ಟಗಳ ಹೊಳೆಯಲ್ಲಿ ಮಿಂದು, ಕಣ್ಣೀರಲ್ಲಿ ಅರಳಿದ ನಾಯಕ ಜೋ ಬಿಡೆನ್‌

ತಮ್ಮ ಪ್ರತಿಸ್ಪರ್ಧಿ ಡೊನಾಲ್ಡ್‌ ಟ್ರಂಪ್‌ರನ್ನು ಜಯಿಸಿ ಜೋ ಬಿಡೆನ್‌ ಅಮೆರಿಕದ 46ನೇ ಅಧ್ಯಕ್ಷರಾಗಿದ್ದಾರೆ. ತಮ್ಮ 78ನೇ ವಯಸ್ಸಿನಲ್ಲಿ ವಿಶ್ವದ ಅತೀ ಪುರಾತನ ಪ್ರಜಾಪ್ರಭುತ್ವ ರಾಷ್ಟ್ರವೊಂದರ ಅಧ್ಯಕ್ಷರಾಗಿದ್ದಾರೆ. ಆದರೆ ಬಿಡೆನ್‌ಗೆ ಅಧ್ಯಕ್ಷ ಪಟ್ಟ ಸುಲಭವಾಗಿ ಸಿಕ್ಕಿದ್ದು ಅಲ್ಲ.

Vijaya Karnataka Web 22 Jan 2021, 6:51 pm
ಜೋ ಬಿಡೆನ್‌ ತಮ್ಮ 78ನೇ ವಯಸ್ಸಿನಲ್ಲಿ ಅಮೆರಿಕದ 46ನೇ ಅಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿದ್ದಾರೆ. ಆ ಮೂಲಕ ಅಮೆರಿಕದ ಇತಿಹಾಸದಲ್ಲಿ ಅತೀ ಹಿರಿಯ ವಯಸ್ಸಿನಲ್ಲಿ ಅಧ್ಯಕ್ಷರಾದ ವ್ಯಕ್ತಿ ಎಂಬ ಅಭಿದಾನಕ್ಕೆ ಪಾತ್ರರಾಗಿದ್ದಾರೆ.
Vijaya Karnataka Web ಸಾಂದರ್ಭಿಕ ಚಿತ್ರ


ಅಮೆರಿಕ ಅಧ್ಯಕ್ಷರಾಗುವುದಕ್ಕೆ ಬಿಡೆನ್‌ ಅವರು ನಡೆದು ಬಂದ ಹಾದಿ ಕಲ್ಲು ಮುಳ್ಳಿನದ್ದು. ಅಪಾರ ನೋವುಗಳನ್ನು ನುಂಗಿ, ಸವಾಲುಗಳನ್ನು ಎದುರಿಸಿ ಇಂದು ವಿಶ್ವದ ಅತೀ ಬಲಿಷ್ಠ ರಾಷ್ಟ್ರವೊಂದರ ಅಧ್ಯಕ್ಷರಾಗಿದ್ದಾರೆ.

ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಬಿಡೆನ್: 'ಆತ್ಮ ಶುದ್ಧೀಕರಣ'ಕ್ಕೆ ಚಾಲನೆ!
1966 ರಲ್ಲಿ ತನ್ನ 24ನೇ ವಯಸ್ಸಿನಲ್ಲಿ ನೈಲಿಯಾ ಹಂಟರ್‌ ಎಂಬವರನ್ನು ಬೈಡೆನ್‌ ವಿವಾಹವಾದರು. ಮದುವೆಯಾದ ಆರೇ ವರ್ಷಕ್ಕೆ ಬಿಡೆನ್‌ ತನ್ನ ಪತ್ನಿಯನ್ನು ಕಳೆದುಕೊಂಡರು. 1972ರಲ್ಲಿ ನಡೆದ ಅಪಘಾತ ಒಂದರಲ್ಲಿ ಅವರ ಪತ್ನಿ ಹಾಗೂ ಪುತ್ರಿ ಅಸುನೀಗಿದರು. ಇನ್ನಿಬ್ಬರು ಗಂಡು ಮಕ್ಕಳು ತೀವ್ರವಾಗಿ ಗಾಯಗೊಂಡರು.

ಅದೇ ವರ್ಷ ರಾಜಕೀಯಕ್ಕೂ ಪಾದಾರ್ಪಣೆ ಮಾಡಿದ್ದ ಬಿಡೆನ್‌ರನ್ನು ಪತ್ನಿ ಹಾಗೂ ಮಗಳ ಸಾವು ಅಧೀರರನ್ನಾಗಿ ಮಾಡಿತ್ತು. ಡೆಲಾವೇರ್‌ನಿಂದ ಸೆನೆಟರ್‌ ಆಗಿ ಆಯ್ಕೆಯಾಗಿದ್ದರೂ ಈ ಘಟನೆಯಿಂದಾಗಿ ಮುಂದಿನ ವರ್ಷ ಪ್ರಮಾಣ ವಚನ ಸ್ವೀಕಾರ ಮಾಡಬೇಕಾಯ್ತು. ಈ ವೇಳೆಯಲ್ಲಿ ರಾಜಕೀಯ ತೊರೆಯುವುದಾಗಿಯೂ ಬಿಡೆನ್‌ ನಿಶ್ಚಯಿಸಿದ್ದರಂತೆ. ಬಿಡೆನ್‌ ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕಾರ ಮಾಡುವಾಗ ಅವರ ಮಕ್ಕಳಿಬ್ಬರು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು.

1977ರಲ್ಲಿ ಈಗಿನ ಪತ್ನಿ ಜಿಲ್‌ ಜೋಸೆಫ್‌ರನ್ನು ವಿವಾಹವಾದರು. ಇವರಿಗೆ ಓರ್ವ ಪುತ್ರಿ ಇದ್ದಾಳೆ.

ಸಾಮಾನ್ಯ ವಕೀಲನೊಬ್ಬ ಅಮೆರಿಕ ಅಧ್ಯಕ್ಷನಾದ ಕತೆ

1987 ಮತ್ತೆ ಬಿಡೆನ್‌ರನ್ನು ವಿಧಿ ಕಾಡ ತೊಡಗಿತು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಡೆನ್‌ ವಿವಾದಾತ್ಮಕ ಭಾಷಣ ಆರೋಪದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿಯಬೇಕಾಯ್ತು. ಅದೇ ವರ್ಷ ಮೆದುಳಿನ ತೊಂದರೆಗೆ ಒಳಗಾಗಿ ಎರಡೆರಡು ಸರ್ಜರಿ ಮಾಡಿಸಿಕೊಂಡು ಬರೋಬ್ಬರಿ ಎಂಟು ತಿಂಗಳು ಹಾಸಿಗೆಯಲ್ಲೇ ಕಳೆಯಬೇಕಾಯ್ತು.

2009ರಲ್ಲಿ ಡೆಮಾಕ್ರೆಟಿಕ್‌ ಪಕ್ಷದ ಆಂತರಿಕ ಚುನಾವಣೆಯಲ್ಲಿ ಬರಾಕ್‌ ಒಬಾಮ ವಿರುದ್ಧ ಸೋಲುಂಡರು. 2015 ರಲ್ಲಿ ಹಿರಿಯ ಪತ್ನಿಯ ಪುತ್ರನೊಬ್ಬ ಮೆದುಳಿನ ಕ್ಯಾನ್ಸರ್‌ಗೆ ಬಲಿಯಾದರು. ಇಳಿ ವಯಸ್ಸಿನಲ್ಲಿ ಕಾಡಿದ ಪುತ್ರ ಶೋಕದಿಂದಾಗಿ ಬಿಡೆನ್‌ ಕುಗ್ಗಿ ಹೋಗಿದ್ದರು. 2020ರಲ್ಲಿ ತಮ್ಮ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಕಣಕ್ಕಿಳಿದರ ಸವಾಲೆಸೆದರು. ನೂರಾರು ಅವಮಾನ, ಬೆದರಿಕೆಗಳ ನಡುವೆಯೇ ಗೆದ್ದು ಬಂದು ಅಮೆರಿಕದ ಅಧ್ಯಕ್ಷರಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ