ಆ್ಯಪ್ನಗರ

ಎಚ್ಚೆನ್‌ ನನ್ನ ನೆಚ್ಚಿನ ಗುರು: ಇಸ್ರೊ ಅಧ್ಯಕ್ಷ ಕಿರಣ್‌

ಭೌತಶಾಸ್ತ್ರ ಉಪನ್ಯಾಸಕರಾಗಿದ್ದ ಎಚ್‌.ನರಸಿಂಹಯ್ಯ ಅವರು ನನ್ನ ಪಾಲಿನ ನೆಚ್ಚಿನ ಗುರುಗಳು.

ವಿಕ ಸುದ್ದಿಲೋಕ 9 Jul 2017, 9:52 am

ಸಮಾಜದ ಒಳಿತಿಗಾಗಿ ಉತ್ತಮವಾದ ಕೆಲಸ ಮಾಡು ಎಂದು ಮಾರ್ಗದರ್ಶನ ನೀಡಿ ಸಮಾಜದ ಕಡೆ ನನ್ನ ದೃಷ್ಟಿಕೋನವನ್ನೇ ಬದಲಾಯಿಸಿ ಹೊಸ ದಿಕ್ಕನ್ನು ತೋರಿಸಿದ, ಭೌತಶಾಸ್ತ್ರ ಉಪನ್ಯಾಸಕರಾಗಿದ್ದ ಎಚ್‌.ನರಸಿಂಹಯ್ಯ ಅವರು ನನ್ನ ಪಾಲಿನ ನೆಚ್ಚಿನ ಗುರುಗಳು. ಎಚ್‌ಎನ್‌ ಮೇಸ್ಟ್ರು ಹೊಂದಿದ್ದ ವೈಜ್ಞಾನಿಕ ಮನೋಭಾವ, ಸರಳತೆ ಹಾಗೂ ಆದರ್ಶ ಗುಣಗಳು ನನ್ನನ್ನು ಆವರಿಸಿಕೊಂಡಿವೆ. ಅವರು ಕೊಟ್ಟ ಸಲಹೆ, ಹೇಳಿದ ಪಾಠ ಈಗಲೂ ನನ್ನ ಕಿವಿಯಲ್ಲಿ ಗುಂಯ್‌ ಗುಡುತ್ತಿವೆ.

ಭೌತವಿಜ್ಞಾನ ವಿಷಯದಲ್ಲಿ ಪದವಿ ವ್ಯಾಸಂಗಕ್ಕೆ ಬಸವನಗುಡಿ ನ್ಯಾಷನಲ್‌ ಕಾಲೇಜಿಗೆ ನಾನು ಸೇರಿದಾಗ ಪ್ರಾಂಶುಪಾಲರಾಗಿದ್ದ ಅವರು ಭೌತವಿಜ್ಞಾನದ ಪಾಠ ಮಾಡುತ್ತಿದ್ದರು. ಹಾಸ್ಟೆಲ್‌ನಲ್ಲಿ ನೆಲೆಸಿದ್ದ ನಾನು ಅವರಿಂದ ತೀವ್ರ ಪ್ರಭಾವಿತನಾಗಿದ್ದೆ. ಅಮೆರಿಕಾದ ಓಹಿಯೋ ಸ್ಟೇಟ್‌ ವಿವಿಯಲ್ಲಿ 'ನ್ಯೂಕ್ಲಿಯರ್‌ ಭೌತ ವಿಜ್ಞಾನ' ವಿಷಯದಲ್ಲಿ ಪಿಎಚ್‌ಡಿ ಮಾಡಿದ್ದ ಎಚ್‌. ನರಸಿಂಹಯ್ಯನವರು ಆಳ ಜ್ಞಾನ ಹೊಂದಿದ್ದರು. ಅದಾಗಲೇ ವಿಜ್ಞಾನದ ಕಡೆ ಆಸಕ್ತನಾಗಿದ್ದ ನಾನು ಭೌತ ವಿಜ್ಞಾನದಲ್ಲಿ ಹೆಚ್ಚು ಅಧ್ಯಯನ ಮಾಡಲು ಸಾಧ್ಯವಾಯಿತು. 1968ರಿಂದ 1971ರ ಅವಧಿಯಲ್ಲಿ ಪದವಿ ಶಿಕ್ಷಣ ಅವಧಿಯುದ್ದಕ್ಕೂ ಅವರ ಮಾರ್ಗದರ್ಶನ ನನ್ನನ್ನು ಇಸ್ರೋವರೆಗೆ ತಂದು ನಿಲ್ಲಿಸಿತು.

ವಿಜ್ಞಾನದ ಉಪಯೋಗವೂ ಸಮಾಜದ ಒಳಿತಿಗೆ ಬಳಕೆ ಮಾಡಬೇಕು ಎಂದು ಸದಾ ಹೇಳುತ್ತಿದ್ದರು. ಅತ್ಯಂತ ಸರಳ ಜೀವನ ನಡೆಸುತ್ತಿದ್ದ ಎಚ್‌.ನರಸಿಂಹಯ್ಯನವರು ನನ್ನಂಥ ಸಾವಿರಾರು ವಿದ್ಯಾರ್ಥಿಗಳಿಗೆ ಶ್ರೇಷ್ಠ ಮಾರ್ಗದರ್ಶಕರಾಗಿದ್ದರು. ಪ್ರತಿಯೊಬ್ಬ ವಿದ್ಯಾರ್ಥಿಗೂ ಗುರುವಿನ ಸೂಕ್ತ ಮಾರ್ಗದರ್ಶನ ಅಗತ್ಯ. ವಿದ್ಯಾರ್ಥಿಯನ್ನು ಅತ್ಯುತ್ತಮ ಪ್ರಜೆಯಾಗಿ ರೂಪಿಸುವಲ್ಲಿ ಗುರುಗಳ ಪಾತ್ರ ಮಹತ್ವ.

- ಎ.ಎಸ್‌ ಕಿರಣ್‌ ಕುಮಾರ್‌, ಇಸ್ರೋ ಅಧ್ಯಕ್ಷರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ