ಆ್ಯಪ್ನಗರ

ಮೂಲ ಸೌಕರ್ಯದಲ್ಲೂ ಮೇಲುಗೈ

ಯಾವುದೇ ದೇಶ ಅಭಿವೃದ್ಧಿಯಾಗಿದೆ ಎಂದು ಗುರುತಿಸಿಕೊಳ್ಳಬೇಕಿದ್ದರೆ ಅದರ ಮೂಲಸೌಕರ್ಯ ಕ್ಷೇತ್ರ ಅಭಿವೃದ್ಧಿಯಾಗಿರಬೇಕು. ಈ ವಿಷಯದಲ್ಲಿ ಭಾರತ ಕಳೆದ 70 ವರ್ಷದಲ್ಲಿ ಸತತ ಆಶಾದಾಯಕ ಬೆಳವಣಿಗೆ ದಾಖಲಿಸಿದೆ.

Vijaya Karnataka 15 Aug 2018, 3:16 pm
ಯಾವುದೇ ದೇಶ ಅಭಿವೃದ್ಧಿಯಾಗಿದೆ ಎಂದು ಗುರುತಿಸಿಕೊಳ್ಳಬೇಕಿದ್ದರೆ ಅದರ ಮೂಲಸೌಕರ್ಯ ಕ್ಷೇತ್ರ ಅಭಿವೃದ್ಧಿಯಾಗಿರಬೇಕು. ಈ ವಿಷಯದಲ್ಲಿ ಭಾರತ ಕಳೆದ 70 ವರ್ಷದಲ್ಲಿ ಸತತ ಆಶಾದಾಯಕ ಬೆಳವಣಿಗೆ ದಾಖಲಿಸಿದೆ. ಸ್ವಾತಂತ್ರ್ಯ ಸಂದರ್ಭದಲ್ಲಿ ನಮ್ಮ ಸಾರಿಗೆ ಸಂಪರ್ಕ ವ್ಯವಸ್ಥೆ ತುಂಬ ಕಡಿಮೆ ಇತ್ತು. ಆದರೆ, ಇದೀಗ ದಟ್ಟ ಕಾನನದ ಮಧ್ಯೆ ಇರುವ ಹಳ್ಳಿಗೂ ರಸ್ತೆಗಳಾಗಿವೆ, ವಿದ್ಯುತ್‌ ಸಂಪರ್ಕ ದೊರೆತಿದೆ. ಸುವರ್ಣ ಚತಷ್ಪಥ, ನಾನಾ ಕಾರಿಡಾರ್‌ಗಳು, ಅತ್ಯಾಧುನಿಕ ರೈಲು ವ್ಯವಸ್ಥೆ, ಅಗ್ಗದ ವಿಮಾನ ಪ್ರಯಾಣ, ಎಲ್ಲರಿಗೂ ವಿದ್ಯುತ್‌ ಸೇವೆ ದೊರೆಯತ್ತಿದೆ. ಇದೆಲ್ಲವೂ ಕೆಲವೇ ದಿನಗಳಲ್ಲಿ ಆಗಿರುಂಥದ್ದಲ್ಲ, ನಿಧಾನವಾಗಿ ಮತ್ತು ನಿರಂತರವಾದ ಪ್ರಕ್ರಿಯೆ ಇದೆ.
Vijaya Karnataka Web road1


- 1947ರಲ್ಲಿ ನಾಲ್ಕು ಮಾರ್ಗಗಳ 200 ಕಿ.ಮೀ.ಗೂ ಕಡಿಮೆ ಇದ್ದ ರಾಷ್ಟ್ರೀಯ ಹೆದ್ದಾರಿ ಇದೀಗ 5,472,144 ಕಿ.ಮೀ.ಗೂ ಹೆಚ್ಚಿನ ಪ್ರಮಾಣದಲ್ಲಿದೆ.

- ಭಾರತೀಯ ರೈಲ್ವೆಗೆ ಈಗ 173 ವರ್ಷ. 121407 ಕಿ.ಮೀ. ರೈಲುಮಾರ್ಗವಿದೆ. ಈ ಪೈಕಿ ಅರ್ಧದಷ್ಟು ಮಾರ್ಗ ವಿದ್ಯುತೀಕರಣ ಮಾರ್ಗವಿದೆ. 13 ಲಕ್ಷ ಜನರಿಗೆ ಉದ್ಯೋಗ ನೀಡಿದೆ. ಜಗತ್ತಿನ ನಾಲ್ಕನೇ ಅತಿದೊಡ್ಡ ರೈಲಜಾಲವಿದೆ.

- 1947ರ ಹೊತ್ತಿಗೆ ನ್ಯಾರೋಗೇಜ್‌ ಇದ್ದ ದೇಶದಲ್ಲಿ ಇದೀಗ ಅಹಮದಾಬಾದ್‌- ಮುಂಬಯಿ ನಡುವೆ ಬುಲೇಟ್‌ ಟ್ರೈನ್‌ ಓಡುವ ಹಂತದಲ್ಲಿದೆ.

- ಹವಾಯಿ ಚಪ್ಪಲಿ ಹಾಕಿಕೊಂಡವರು ಹವಾಯಿಜಹಾಜ್‌(ವಿಮಾನ)ದಲ್ಲಿ ಸಂಚರಿಸುವ ಉಡಾನ್‌ ಯೋಜನೆ ಜಾರಿಯಾಗಿದೆ. ಏರ್‌ ಇಂಡಿಯಾ ಸೇರಿ ದೇಶ-ವಿದೇಶದ ಅನೇಕ ಕಂಪನಿಗಳು ವಿಮಾನಯಾನ ಸೇವೆ ಒದಗಿಸುತ್ತಿವೆ.

- ವಿದ್ಯುತ್‌ ಉತ್ಪಾದನೆಯಲ್ಲಿ ಭಾರತ ಇದೀಗ ಜಗತ್ತಿನ ಮೂರನೇ ಅತಿದೊಡ್ಡ ರಾಷ್ಟ್ರವಾಗಿದೆ. 1,160 ಶತಕೋಟಿ ಯುನಿಟ್‌ ಉತ್ಪಾದಿಸುತ್ತದೆ. 1947ರಲ್ಲಿ 1132 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಯಾಗುತ್ತಿತ್ತು.

- 1947ರ ಸಂದರ್ಭದಲ್ಲಿ ಶ್ರೀಮಂತರಗಿಂತ ಬಡವರು, ನಿರ್ಗತಿಕರೇ ಹೆಚ್ಚಾಗಿದ್ದರು. ಇಷ್ಟು ವರ್ಷಗಳಲ್ಲಿ ಆಶ್ರಯ ಕಲ್ಪಿಸುವ ಸರಕಾರಿ ಯೋಜನೆಗಳು ಬಹುತೇಕ ಯಶಸ್ವಿಯಾಗಿವೆ. 2022ರ ಹೊತ್ತಿಗೆ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ 2 ಕೋಟಿ ಮನೆ ನಿರ್ಮಾಣದ ಗುರಿಯಿದೆ. ಹಾಗೆಯೇ ಭಾರತ ಇದೀಗ ಬಯಲು ಶೌಚ ಮುಕ್ತ ರಾಷ್ಟ್ರವಾಗುತ್ತ ಪ್ರಯತ್ನದಲ್ಲಿದೆ.

- 70 ವರ್ಷದ ಹಿಂದೆ ಕೇವಲ 9 ವಿಮಾನಯಾನ ಸಂಸ್ಥೆಗಳು ಕಾರ್ಯನಿರ್ವಹಣೆ ಇತ್ತು. ಇದೀಗ 1.1ಕೋಟಿಯಷ್ಟು ಜನರು ವಿಮಾನಯಾನ ಬಳಸುತ್ತಿದ್ದಾರೆ.

- ಗ್ರಾಮೀಣ ರಸ್ತೆಗಳ ಮೂಲಕ ಪ್ರತಿಹಳ್ಳಿಯನ್ನೂ ಸಂಪರ್ಕ ಕಲ್ಪಿಸುವಲ್ಲಿ ಭಾರತ ಬಹುತೇಕ ಯಶಸ್ವಿಯಾಗಿದೆ.

- ದೇಶದಲ್ಲೀಗ 22 ಎಕ್ಸ್‌ಪ್ರೆಸ್‌ ಹೈವೇ ಕಾರಿಡಾರ್‌ಗಳಿವೆ. 7 ನಿರ್ಮಾಣ ಹಂತದಲ್ಲಿದ್ದರೆ, 32 ಕಾರಿಡಾರ್‌ಗ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ