ಆ್ಯಪ್ನಗರ

ಬಾನಗಲ ಹಾರುವ ಭಾರತದ ತ್ರಿವರ್ಣ ಧ್ವಜದಲ್ಲಿರುವ ಬಣ್ಣಗಳ ಅರ್ಥವೇನು ಗೊತ್ತೇ?

‘ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ, ತೋರುತಿಹುದು ಹೊಡೆದು ಹೊಡೆದು ಬಾನಿನಗಲ ಪಟಪಟ, ಕೇಸರಿ ಬಿಳಿ ಹಸಿರು ಮೂರು ಬಣ್ಣ ನಡುವೆ ಚಕ್ರವು, ಸತ್ಯ ಶಾಂತಿ ತ್ಯಾಗ ಮೂರ್ತಿ ಗಾಂಧಿ ಹಿಡಿದ ಚರಕವು’ ಇದು ಕಯ್ಯಾರ ಕಿಂಞ್ಞಣ್ಣ ರೈ ಅವರು ಬರೆದ ದೇಶಭಕ್ತಿಗೀತೆ. ಕೇವಲ ನಾಲ್ಕೇ ಸಾಲಿನಲ್ಲಿ ತ್ರಿವರ್ಣ ಧ್ವಜದ ಅರ್ಥವನ್ನು ವಿವರಿಸಿದ ಕವಿ ರಾ‍ಷ್ಟ್ರಧ್ವಜಕ್ಕಿರುವ ಶಕ್ತಿ ಮತ್ತು ಮೌಲ್ಯವನ್ನು ವಿವರಿಸಿದ್ದಾರೆ.

Vijaya Karnataka Web 17 Aug 2020, 3:09 pm
ಬೆಂಗಳೂರು: ‘ಭಾರತವೆಂದರೆ ತ್ರಿವರ್ಣ ಧ್ವಜವು, ಗಡಿಯೂ ಗಡಿಯೊಳಗಿನ ನೆಲವು, ನೆಲ ಜಲ ಜನ ಸಂಬಂಧವ ಬೆಸೆವ ಸಂವಿಧಾನದ ಆಶಯವು..’ ಇದು ಕವಿ ಜನಾರ್ದನ ಕೆಸರುಗದ್ದೆ ಅವರು ಬರೆದಿರುವ ರಾಷ್ಟ್ರಪ್ರೇಮ ಬಿಂಬಿಸುವ ಹಾಡಿನ ಸಾಲುಗಳು.
Vijaya Karnataka Web INDIAN FLAG


ಭಾರತ ದೇಶ ಬ್ರಿಟೀಷರಿಂದ ಸ್ವತಂತ್ರಗೊಂಡು 73 ವರ್ಷಗಳು ತುಂಬಿದೆ. 74ನೆಯ ಸ್ವಾತಂತ್ರ್ಯೋತ್ಸದ ಸಂಭ್ರಮದ ಹೊಸ್ತಿಲಲ್ಲಿರುವ ಭಾರತ ನೂರಾರು ವೈವಿಧ್ಯತೆಗಳ ಮಧ್ಯೆಯೂ ಏಕತೆ ಮತ್ತು ಬಹುತ್ವವನ್ನು ಪ್ರತಿಪಾದಿಸುವ ರಾಷ್ಟ್ರ. ಸ್ವಾತಂತ್ರ್ಯೋತ್ಸವ ಅಂದಾಕ್ಷಣ ಸ್ವಾತಂತ್ರ್ಯ ಹೋರಾಟಗಾರರ ಸೇವೆ, ಹೋರಾಟವನ್ನು ನೆನೆಯುವುದು ಎಷ್ಟು ಅರ್ಥಪೂರ್ಣವೋ, ಮುಗಿಲೆತ್ತರದಿ ಹಾರುವ ತ್ರಿವರ್ಣ ಧ್ವಜದ ಅರ್ಥವನ್ನು ತಿಳಿದುಕೊಳ್ಳುವುದು ಕೂಡ ಅಷ್ಟೇ ಅಗತ್ಯವಾದುದು.

74ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ..! ದೇಶಭಕ್ತಿ ಬೀರುವ ಸಂದೇಶ, ಶುಭಾಶಯಗಳು

‘ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ, ತೋರುತಿಹುದು ಹೊಡೆದು ಹೊಡೆದು ಬಾನಿನಗಲ ಪಟಪಟ, ಕೇಸರಿ ಬಿಳಿ ಹಸಿರು ಮೂರು ಬಣ್ಣ ನಡುವೆ ಚಕ್ರವು, ಸತ್ಯ ಶಾಂತಿ ತ್ಯಾಗ ಮೂರ್ತಿ ಗಾಂಧಿ ಹಿಡಿದ ಚರಕವು’ ಇದು ಕಯ್ಯಾರ ಕಿಂಞ್ಞಣ್ಣ ರೈ ಅವರು ಬರೆದ ದೇಶಭಕ್ತಿಗೀತೆ. ಕೇವಲ ನಾಲ್ಕೇ ಸಾಲಿನಲ್ಲಿ ತ್ರಿವರ್ಣ ಧ್ವಜದ ಅರ್ಥವನ್ನು ವಿವರಿಸಿದ ಕವಿ ರಾ‍ಷ್ಟ್ರಧ್ವಜಕ್ಕಿರುವ ಶಕ್ತಿ ಮತ್ತು ಮೌಲ್ಯವನ್ನು ವಿವರಿಸಿದ್ದಾರೆ. ಹಾಗಿದ್ದರೆ ನಮ್ಮ ಧ್ವಜದಲ್ಲಿರುವ ಮೂರು ಬಣ್ಣಗಳಾದ ಕೇಸರಿ, ಬಿಳಿ, ಹಸಿರು ಏನನ್ನು ಸೂಚಿಸುತ್ತದೆ? ಬಣ್ಣಗಳ ನಡುವೆ ಇರುವ ಚಕ್ರ ಏನನ್ನು ಹೇಳುತ್ತೆ ಅನ್ನೋದು ಇಲ್ಲಿದೆ.

ಕೇಸರಿ
ತ್ರಿವರ್ಣ ಧ್ವಜದಲ್ಲಿ ಮೇಲೆ ಇರುವ ಕೇಸರಿ ಬಣ್ಣ ಧೈರ್ಯ, ಪರಿತ್ಯಾಗ ಮತ್ತು ದೇಶದ ಒಳಿತಿಗಾಗಿ ನಡೆಯುವ ಬಲಿದಾನಗಳ ಸಂಕೇತವಾಗಿದೆ.

ಬಿಳಿ
ಧ್ವಜದ ಮಧ್ಯೆ ಇರುವ ಬಿಳಿ ಬಣ್ಣ ಸತ್ಯ, ಶಾಂತಿ ಮತ್ತು ಶುದ್ಧತೆಯ ಸಂಕೇತವಾಗಿದೆ. ಆ ಮೂಲಕ ಶುದ್ಧ ಮನಸ್ಸಿನವರೊಡನೆ ನಿತ್ಯವೂ ಸತ್ಯ ಶಾಂತಿಗಳೊಂದಿಗೆ ನಮ್ಮನ್ನು ಬೆಳಕಿನೆಡೆಗೆ ಕೊಂಡೊಯ್ಯುವ ಸತ್ಯ ಮಾರ್ಗದ ಸಂಕೇತ ಬಿಳಿ.

ಹಸಿರು
ಕೆಳಗೆ ಇರುವ ಹಸಿರು ಬಣ್ಣ ಪ್ರಗತಿಯ ಸಂಕೇತವೂ ಹೌದು. ಜೊತೆಗೆ ಮನುಷ್ಯ ಮತ್ತು ಪ್ರಕೃತಿಯ ನಡುವಿನ ಅವಿನಾಭಾವ ಸಂಬಂಧವನ್ನು ತಿಳಿಸುತ್ತದೆ. ವಿಶಾಲವಾದ ಈ ಪ್ರಕೃತಿಯಲ್ಲಿ ಮನುಷ್ಯ ಅತಿಥಿಯಷ್ಟೇ. ಹಾಗಾಗಿ ಪ್ರಕೃತಿಯೊಡನೆ ಬೆರೆತು ಹಚ್ಚ ಹಸಿರಿನ ಒಡಲಿಗೆ ತೊಂದರೆ ಉಂಟು ಮಾಡದೆ ಅದರ ಅಸ್ತಿತ್ವವನ್ನು ಕಾಪಾಡಿಕೊಂಡು ಬರಬೇಕು. ಜೊತೆಗೆ ಪ್ರಕೃತಿಯಲ್ಲಿರುವ ಸಕಲ ಜೀವರಾಶಿಯ ಜೊತೆ ಮನುಷ್ಯ ಬಾಂಧವ್ಯದಿಂದ ಇರಬೇಕು ಎನ್ನುವುದನ್ನು ಸೂಚಿಸುತ್ತದೆ.

ಅಶೋಕ ಚಕ್ರಅಂದಹಾಗೆ, ನಮ್ಮ ತ್ರಿವರ್ಣಧ್ವಜ ರೂಪುಗೊಂಡಿದ್ದು 1931ರಲ್ಲಿ. ಸ್ವಾತಂತ್ರ್ಯ ಪೂರ್ವದಲ್ಲಿ ತ್ರಿವರ್ಣ ಧ್ವಜದ ಮಧ್ಯೆ ಮಹಾತ್ಮ ಗಾಂಧೀಜಿ ಅವರ ಚರಕವನ್ನು ಅಳವಡಿಸಲಾಗಿತ್ತು. ಆದರೆ ನಂತರ ಜುಲೈ 22, 1947ರಲ್ಲಿ ಚರಕದ ಬದಲಾಗಿ ವೃತ್ತಾಕಾರದಲ್ಲಿರುವ ಅಶೋಕ ಚಕ್ರವನ್ನು ಬಳಸಿ, ಕೇಸರಿ ಬಿಳಿ ಹಸಿರು ಬಣ್ಣದ ಧ್ವಜದ ಮಧ್ಯೆ ಅಶೋಕಚಕ್ರ ಇರುವ ರಾಷ್ಟ್ರಧ್ವಜವನ್ನು ಸಂವಿಧಾನಬದ್ಧವಾಗಿ ಅಂಗೀಕರಿಸಲಾಯಿತು. ಅಶೋಕ ಚಕ್ರವು ಬೌದ್ಧ ದೊರೆ ಸಾಮ್ರಾಟ್ ಅಶೋಕನ ಚಿಹ್ನೆಯಾಗಿದ್ದು, ರಾಷ್ಟ್ರಧ್ವಜದಲ್ಲಿರುವ ಈ ಚಕ್ರವು ಧರ್ಮವನ್ನು ಪ್ರತಿನಿಧಿಸಿದರೆ ಆ ಚಕ್ರದ ಮಧ್ಯೆ ಇರುವ 24 ಗೆರೆಗಳು ವಿವಿಧ ಆಚರಣೆ, ಸಂಸ್ಕೃತಿ, ವಿವಿಧತೆಯಂತಹ ಬಹುತ್ವವನ್ನು ಪ್ರತಿನಿಧಿಸುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ