ಆ್ಯಪ್ನಗರ

ಗುರುಗಳ ಬಗ್ಗೆ ಜಯಂತ ಕಾಯ್ಕಿಣಿ ಬರೆದ ಕವಿತೆ

ಇಂದು ಶಿಕ್ಷಕರ ದಿನಾಚರಣೆ: ಕತೆಗಾರ, ಕವಿ ಜಯಂತ ಕಾಯ್ಕಿಣಿ ಅವರು ಬರೆದ ಗುರುಗಳ ಬಗೆಗಿನ ಕವಿತೆ ಇಲ್ಲಿದೆ.

Vijaya Karnataka Web 6 Sep 2019, 7:50 am
'ಆಚಾರ್ಯ ದೇವೋಭವ' ಎಂದು ಶಿಕ್ಷಕರನ್ನು ನಮಿಸಿದ ಪರಂಪರೆ ನಮ್ಮದು. ಒಂದು ಅಕ್ಷರವನ್ನು ಕಲಿಸಿದವನೂ ಗುರುಸಮಾನ ಎಂದು ನಂಬಿದವರು ನಾವು. ನಮ್ಮ ಜೀವನ, ಗುಣನಡತೆ, ಮೌಲ್ಯಗಳು, ಚಾರಿತ್ರ್ಯ ಎಲ್ಲವೂ ರೂಪುಗೊಳ್ಳುವುದು ಶಿಕ್ಷಕರು ಹಾಕಿಕೊಡುವ ಅಸ್ತಿವಾರದ ಮೇಲೆ. ಯಶಸ್ಸಿನ ಹಾದಿ ತುಳಿದ ಎಲ್ಲರ ಹಿಂದೆಯೂ ಒಬ್ಬರಲ್ಲ ಒಬ್ಬರು ಶಿಕ್ಷಕರ ಪ್ರಭಾವ ಇದ್ದೇ ಇರುತ್ತದೆ. ಕತೆಗಾರ, ಕವಿ ಜಯಂತ ಕಾಯ್ಕಿಣಿ ಅವರು ಬರೆದ ಗುರುಗಳ ಬಗೆಗಿನ ಕವಿತೆ ಇಲ್ಲಿದೆ.
Vijaya Karnataka Web jayanth kaikini


ಪ್ರತ್ಯಕ್ಷ ಪರೋಕ್ಷ ಗುರುಗಳಿಗೆ ವಂದನೆ

ಗುರುವೆ ನಿಮಗೆ ಶರಣು ನಾವು
ಭಾವಪೂರ್ಣ ವಂದನೆ
ಕರುಣೆಯಿಂದ ಸಹನೆಯಿಂದ
ಸಲಹುತೀರಿ ನಮ್ಮನೆ

ಬೆಳಕು ನಡೆದು ಬಂದ ಹಾಗೆ
ನೀವು ನಮ್ಮ ಶಾಲೆಗೆ
ನೀವೆ ತಾಯಿ ನೀವೆ ತಂದೆ
ನಂಬಿದವರ ಪಾಲಿಗೆ

ತಿಳಿವಿನಿಂದ ತೆರೆದು ನೀವು
ನಮ್ಮ ಮನದ ಬಾಗಿಲು

ಸಿಕ್ಕಿತೀಗ ನಮಗೆ ಬಾನು
ರೆಕ್ಕೆ ಬಿಚ್ಚಿ ಹಾರಲು
ಕಲಿತ ಹಾಗೆ ವಿನಯಶೀಲ
-ರಾದರೇನೆ ಧನ್ಯತೆ
ನೀವು ಕಟ್ಟಿಕೊಟ್ಟ ಬುತ್ತಿ
ಸರಳ ಮಾನವೀಯತೆ

ಮಮತೆ ಮತ್ತು ಸಮತೆಗಿಂತ
ಉಂಟೆ ಬೇರೆ ಪ್ರಾರ್ಥನೆ
ಮಾನವಂತರಾಗಿ ನಡೆದು
ನೆನೆಯುತೇವೆ ನಿಮ್ಮನೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ