ಆ್ಯಪ್ನಗರ

ರಾಜ್ಯ ರಾಜಕಾರಣದಲ್ಲಿ ರಾಸಲೀಲೆಗಳು

ನೋಡಲಾಗಿದೆ- ಜhaಠಿa್ಞava್ಝಜಿ್ಟಠ್ಛಿ ರಾಜ್ಯ ರಾಜಕಾರಣದಲ್ಲಿ ರಾಸಲೀಲೆಗಳು - ಆರ್‌ಡಿ ಕಿತ್ತೂರ್‌ ಪ್ರಕರಣ ದಿ ದೇವರಾಜ ಅರಸು ಸಚಿವ ಸಂಪುಟದಲ್ಲಿ ಆರ್‌ಡಿ...

ವಿಕ ಸುದ್ದಿಲೋಕ 15 Dec 2016, 4:08 pm

ಆರ್‌.ಡಿ. ಕಿತ್ತೂರ್‌ ಪ್ರಕರಣ

Vijaya Karnataka Web sex scandals rocks in karnataka state politics
ರಾಜ್ಯ ರಾಜಕಾರಣದಲ್ಲಿ ರಾಸಲೀಲೆಗಳು

ದಿ. ದೇವರಾಜ ಅರಸು ಸಚಿವ ಸಂಪುಟದಲ್ಲಿ ಆರ್‌.ಡಿ.ಕಿತ್ತೂರು ಅವರು ಸಮಾಜ ಕಲ್ಯಾಣ ಸಚಿವರಾಗಿದ್ದರು. ಬೆಂಗಳೂರಿನ ಜಯಮಹಲ್‌ನಲ್ಲಿದ್ದ ಸಚಿವರ ಬಂಗಲೆಯಿಂದ ಮುಂಜಾನೆ ಮಹಿಳೆಯೊಬ್ಬಳು ಹೊರ ಬಂದ ವಿಷಯ ಮಾಧ್ಯಮ-ರಾಜಕಾರಣಿಗಳ ಕಿವಿಗೆ ಬಿತ್ತು. ಈ ಪ್ರಕರಣ ವಿಧಾನಸಭೆಯಲ್ಲಿ ಪ್ರತಿಧ್ವನಿಸಿ ಅದನ್ನು ಲೈಂಗಿಕ ಹಗರಣವೆಂದೇ ಚರ್ಚಿಸಲಾಯಿತು. ಬಳಿಕ ಆಕೆ ದಿಢೀರ್‌ ನಾಪತ್ತೆಯಾಗಿದ್ದು ದೊಡ್ಡ ವಿವಾದ ಸೃಷ್ಟಿಸಿತು. ಆ ನಂತರ ಮುಖ್ಯಮಂತ್ರಿ ಅರಸು ಅವರು ಕಿತ್ತೂರ್‌ ಅವರನ್ನು ಕರೆಸಿ ಮಾತನಾಡಿದಾಗ ಆಕೆಯೊಂದಿಗೆ ಸಂಬಂಧವಿದೆ ಎಂಬ ವಿಷಯನ್ನು ಕಿತ್ತೂರು ಒಪ್ಪಿಕೊಂಡರು. ಅಂತಿಮವಾಗಿ ರಾಜೀನಾಮೆ ಪಡೆದು ಮನೆಗೆ ಕಳುಹಿಸಿದರು.

ದೇವೇಂದ್ರಪ್ಪ ಗಾಳಪ್ಪ ಪ್ರಕರಣ
70ರ ದಶಕದಲ್ಲಿ ದಿ. ದೇವರಾಜ ಅರಸು ಸಂಪುಟದಲ್ಲಿ ಆರೋಗ್ಯ ಸಚಿವರಾಗಿದ್ದ ದೇವೇಂದ್ರಪ್ಪ ಗಾಳಪ್ಪ ಅವರ ವಿರುದ್ಧವೂ ಲೈಂಗಿಕ ಹಗರಣದ ಆರೋಪ ಕೇಳಿಬಂದಿತ್ತು. ಆರೋಗ್ಯ ಸಚಿವರಾಗಿ ಇಲಾಖೆಯ ನರ್ಸ್‌ ಒಬ್ಬರ ಜತೆ ಸಂಬಂಧ ಹೊಂದಿದ್ದಾರೆ ಎಂಬುದು ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿಸಿತ್ತು. ಈ ಪ್ರಕರಣದಲ್ಲಿ ಸಚಿವರಿಂದ ಅರಸು ರಾಜೀನಾಮೆ ಪಡೆದುಕೊಂಡಿದ್ದರು.

ಹರತಾಳು ಹಾಲಪ್ಪ ಪ್ರಕರಣ
ಬಿ.ಎಸ್‌.ಯಡಿಯೂರಪ್ಪ ಅವರ ಸಂಪುಟದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿದ್ದ ಹರತಾಳು ಹಾಲಪ್ಪ ಅವರು ಮೇ 2010ರಲ್ಲಿ ಶಿವಮೊಗ್ಗದಲ್ಲಿ ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಗುರಿಯಾದರು. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆ ಮತ್ತು ಆಕೆ ಪತಿಯೇ ದೂರು ನೀಡಿದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ಹಾಲಪ್ಪ ರಾಜೀನಾಮೆ ನೀಡುವುದು ಅನಿವಾರ್ಯವಾಯಿತು. ಪ್ರಕರಣದಲ್ಲಿ ಅವರು ಬಂಧನಕ್ಕೂ ಒಳಗಾಗಿದರು.

ತ್ರಿಮೂರ್ತಿಗಳ ಪೋಲಿಯಾಟ
ಫೆಬ್ರವರಿ 2012ರಲ್ಲಿ ವಿಧಾನಸಭೆಯಲ್ಲಿ ಬರ ಪರಿಸ್ಥಿತಿ ಕುರಿತಂತೆ ಗಂಭೀರ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಅಂದಿನ ಬಿಜೆಪಿ ಸರಕಾರದಲ್ಲಿ ಸಚಿವರಾಗಿದ್ದ ಲಕ್ಷ್ಮಣ ಸವದಿ, ಸಿ.ಸಿ.ಪಾಟೀಲ ಹಾಗೂ ಜೆ.ಕೃಷ್ಣ ಪಾಲೇಮಾರ್‌ ಮೊಬೈಲ್‌ಗಳಲ್ಲಿ ಅಶ್ಲೀಲ ವಿಡಿಯೋ ವೀಕ್ಷಣೆಯಲ್ಲಿ ತೊಡಗಿದ್ದು ಮಾಧ್ಯಮ ಕ್ಯಾಮೆರಾಗಳಲ್ಲಿ ಸೆರೆಯಾಗಿ ಪ್ರಸಾರ ಕಂಡು, ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಯಿತು. ಪ್ರಕರಣದಲ್ಲಿ ಮೂವರೂ ಸಚಿವ ಸ್ಥಾನ ಕಳೆದುಕೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ