ಆ್ಯಪ್ನಗರ

ಶೌಚಾಲಯದ ಕಮೋಡ್‌ನಲ್ಲಿ ಸಿಲುಕಿದ ಬಾಲಕ: ಆತ ಬಚಾವ್ ಆಗಿದ್ದೇಗೆ ಗೊತ್ತಾ?(ವೀಡಿಯೋ ನೋಡಿ)

ಶೌಚಾಲಯದಲ್ಲಿ ಮೊಬೈಲ್ ಫೋನ್‌ನಲ್ಲಿ ವೀಡಿಯೋ ಗೇಮ್‌ ಆಡುತ್ತಿದ್ದ ಬಾಲಕ ಒಂದು ಗಂಟೆಗೂ ಹೆಚ್ಚು ಸಮಯ ಕಳೆದಿದ್ದಾನೆ. ಆದರೆ, ಆತ ಕಮೋಡ್‌ನೊಳಗೆ ಸಿಲುಕಿಕೊಂಡಿದ್ದು, ಆತನನ್ನು ಅಲ್ಲಿಂದ ಬಚಾವ್ ಮಾಡಲು ಅಗ್ನಿಶಾಮಕ ಸಿಬ್ಬಂದಿಯನ್ನೇ ಕರೆಸಿಕೊಳ್ಳಬೇಕಾದ ಘಟನೆ ಚೀನಾದಲ್ಲಿ ನಡೆದಿದೆ.

Times Now 8 Mar 2019, 9:44 am
ಚೀನಾ: ಕೆಲವರಿಗೆ ಟಾಯ್ಲೆಟ್‌ನಲ್ಲಿ ಕುಳಿತು ಮೊಬೈಲ್‌ ನೋಡೋ ಅಭ್ಯಾಸವಿರುತ್ತದೆ. ಇದರಿಂದ ಅನೇಕ ತೊಂದರೆಗಳು ಎದುರಾಗಬಹುದು. ಅದಕ್ಕೆ ಈ ಸ್ಟೋರಿನೇ ಸಾಕ್ಷಿ.
Vijaya Karnataka Web boy toilet seat


ಚೀನಾದ ವುಹಾನ್‌ನ 6 ವರ್ಷದ ಬಾಲಕ ಹಲವು ಸಮಯ ಕಮೋಡ್‌ನಲ್ಲೇ ಕಳೆದಿದ್ದು, ತನ್ನ ಪೃಷ್ಠ ಹಾಗೂ ಸೊಂಟದ ಭಾಗವನ್ನು ಟಾಯ್ಲೆಟ್‌ ಸೀಟ್‌ ಅಥಾ ಕಮೋಡ್‌ಗೆ ಸಿಲುಕಿಸಿಕೊಂಡಿದ್ದಾನೆ. ಬಳಿಕ, ಕಮೋಡ್‌ನಿಂದ ಹೊರಬರಲು ಆತ ಕಷ್ಟ ಪಡುತ್ತಿರುವುದನ್ನು ಗಮನಿಸಿದ ಆತನ ಪೋಷಕರಿಗೆ ತಮ್ಮ ಪುತ್ರ ಮೊಬೈಲ್‌ ಫೋನ್‌ನಲ್ಲಿ ವೀಡಿಯೋ ಗೇಮ್‌ ಆಡುತ್ತಿದ್ದದ್ದು ಗೊತ್ತಾಗಿದೆ.

ಮೊಬೈಲ್ ಫೋನ್‌ನಲ್ಲಿ ವೀಡಿಯೋ ಗೇಮ್‌ ಆಡುತ್ತಿದ್ದ ಬಾಲಕನಿಗೆ ಹೆಚ್ಚು ಸಮಯ ಟಾಯ್ಲೆಟ್‌ನಲ್ಲಿ ಕಳೆದಿದ್ದು ಗೊತ್ತಾಗಿಲ್ಲ. ಬಳಿಕ, ಕಮೋಡ್‌ನಿಂದ ಹೊರಬರಲು ಹೋದಾಗ ಮಾತ್ರ ಆತನಿಗೆ ಸಾಧ್ಯವಾಗಲಿಲ್ಲ. ನಂತರ, ಸಹಾಯಕ್ಕಾಗಿ 6 ವರ್ಷದ ಬಾಲಕ ಕೂಗಿಕೊಂಡಿದ್ದಾನೆ. ಆದರೆ, ಆತನ ಪೋಷಕರಿಗೂ ಸಹ ಅವನನ್ನು ಕಮೋಡ್‌ನಿಂದ ಹೊರಗೆಳೆಯಲು ಸಾಧ್ಯವಾಗಲಿಲ್ಲ. ಏಕೆಂದರೆ ಆತನ ಪೃಷ್ಠ ಹಾಗೂ ಸೊಂಟದ ಭಾಗವನ್ನು ಟಾಯ್ಲೆಟ್‌ ಸೀಟ್‌ ಅಥಾ ಕಮೋಡ್‌ ಒಳಗೆ ಸಿಲುಕಿಸಿಕೊಂಡಿದ್ದ.

ಈ ಹಿನ್ನೆಲೆ ಬಾಲಕನ ಪೋಷಕರು ಅಗ್ನಿಶಾಮಕ ದಳದವರಿಗೆ ಕರೆ ಮಾಡಿ ಸಹಾಯ ಕೇಳುತ್ತಾರೆ. ಈ ವೇಳೆ, ಬಾಲಕ ಶೌಚಾಲಯದಲ್ಲೇ 1 ಗಂಟೆಗೂ ಹೆಚ್ಚು ಸಮಯ ಕಳೆದಿದ್ದ ಎಂದು ತಿಳಿದುಬಂದಿದ್ದು, ಆತನನ್ನು ಬಚಾವ್ ಮಾಡಲು ಅಗ್ನಿಶಾಮಕ ಸಿಬ್ಬಂದಿ ಕಮೋಡ್‌ ಅನ್ನೇ ಒಡೆದುಹಾಕಿದ್ದಾರೆ.


ಈ ಸಂಬಂಧ ಮಾಹಿತಿ ನೀಡಿದ ಸ್ಥಳೀಯ ಅಗ್ನಿಶಾಮಕ ಸಿಬ್ಬಂದಿ, ''ಬಾಲಕನ ಪೃಷ್ಠ ಹಾಗೂ ಸೊಂಟದ ಭಾಗ ಶೌಚಾಲಯದಲ್ಲೇ ಸಿಲುಕಿಕೊಂಡಿತ್ತು. ಆತ 1 ಗಂಟೆಗೂ ಹೆಚ್ಚು ಕಾಲ ಕಮೋಡ್‌ನಲ್ಲೇ ಕಾಲ ಕಳೆದ ಕಾರಣ ಹೀಗಾಗಿದೆ. ಅಲ್ಲದೆ ಬಾಲಕನಿಗೆ ಇತರೆ ಗಾಯಗಳಾಗುವ ಸಾಧ್ಯತೆ ಇದ್ದಿದ್ದರಿಂದ ನಾವು ದೊಡ್ಡ ದೊಡ್ಡ ಉಪಕರಣಗಳನ್ನು ಬಳಸಲಿಲ್ಲ,'' ಎಂದು ಮಾಹಿತಿ ನೀಡಿದ್ದಾರೆ.

ಇನ್ನು, ಚೀನಾದ ಈ ಬಾಲಕನನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿಯ ರಕ್ಷಣಾ ಕಾರ್ಯಾಚರಣೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ಹಲವು ಮಕ್ಕಳ ಪೋಷಕರು ಸಹ ಗಾಬರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ