ಆ್ಯಪ್ನಗರ

35 ವರ್ಷಗಳ ಬಳಿಕ ಮೃಗಾಲಯದ ಕೀಪರ್ ಭೇಟಿ ಮಾಡಿದ ಹೆಣ್ಣಾನೆಯ ಪ್ರತಿಕ್ರಿಯೆ ಹೇಗಿತ್ತು ನೀವೇ ನೋಡಿ

ಕ್ರಿಸ್ಟಿ ಎಂಬ ಹೆಣ್ಣಾನೆ ಹಾಗೂ ಅದನ್ನು 35 ವರ್ಷಗಳ ಹಿಂದೆ ನೋಡಿಕೊಳ್ಳುತ್ತಿದ್ದ ಪೀಟರ್‌ ಆ್ಯಡಮ್ಸ್‌ ಮರಳಿ ನ್ಯೂನ್‌ಕಿರ್ಚೆನ್‌ ಮೃಗಾಲಯದಲ್ಲಿ ಭೇಟಿಯಾಗಿದ್ದು, ಸುಮಾರು ಮೂರೂವರೆ ದಶಕಗಳ ಹಿಂದೆ ಗ್ಲಾಸ್ಗೋಗೆ ಆನೆ ತೆರಳಿದ್ದ ಬಳಿಕ ಇವರಿಬ್ಬರೂ ಜತೆಯಾಗಿರಲಿಲ್ಲ. ಮೂರೂವರೆ ದಶಕಗಳ ಬಳಿಕ ಭೇಟಿಯಾದಾಗ ಈ ಭಾವನಾತ್ಮಕವಾದ ವೀಡಿಯೋದಲ್ಲಿ ಪೀಟರ್‌ನನ್ನು ಕ್ರಿಸ್ಟಿ ಎಂಬ ಹೆಣ್ಣಾನೆ ತಕ್ಷಣವೇ ತನ್ನ ಸೊಂಡಿಲಿನಿಂದ ಗುರುತು ಹಿಡಿಯುತ್ತದೆ.

Times Now 1 May 2019, 5:28 pm
ಸ್ಕಾಟಿಷ್‌ನ ಮೃಗಾಲಯದ ಕೀಪರ್‌ ತಾನು 35 ವರ್ಷಗಳ ಹಿಂದೆ ನೋಡಿಕೊಳ್ಳುತ್ತಿದ್ದ ಆನೆಯನ್ನು ಮತ್ತೆ ಭೇಟಿ ಮಾಡಿದ್ದಾರೆ. ಆ ಹೃತ್ಪೂರ್ವಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.
Vijaya Karnataka Web elephant zook keeper


ಕ್ರಿಸ್ಟಿ ಎಂಬ ಹೆಣ್ಣಾನೆ ಹಾಗೂ ಅದನ್ನು 35 ವರ್ಷಗಳ ಹಿಂದೆ ನೋಡಿಕೊಳ್ಳುತ್ತಿದ್ದ ಪೀಟರ್‌ ಆ್ಯಡಮ್ಸ್‌ ಮರಳಿ ನ್ಯೂನ್‌ಕಿರ್ಚೆನ್‌ ಮೃಗಾಲಯದಲ್ಲಿ ಭೇಟಿಯಾಗಿದ್ದು, ಸುಮಾರು ಮೂರೂವರೆ ದಶಕಗಳ ಹಿಂದೆ ಗ್ಲಾಸ್ಗೋಗೆ ಆನೆ ತೆರಳಿದ್ದ ಬಳಿಕ ಇವರಿಬ್ಬರೂ ಜತೆಯಾಗಿರಲಿಲ್ಲ. ಮೂರೂವರೆ ದಶಕಗಳ ಬಳಿಕ ಭೇಟಿಯಾದಾಗ ಈ ಭಾವನಾತ್ಮಕವಾದ ವೀಡಿಯೋದಲ್ಲಿ ಪೀಟರ್‌ನನ್ನು ಕ್ರಿಸ್ಟಿ ಎಂಬ ಹೆಣ್ಣಾನೆ ತಕ್ಷಣವೇ ತನ್ನ ಸೊಂಡಿಲಿನಿಂದ ಗುರುತು ಹಿಡಿಯುತ್ತದೆ. ಈ ಪುನರ್ಮಿಲನದ ವೀಡಿಯೋವನ್ನು ನೀವೇ ನೋಡಿ..

ಈ ಭಾವನಾತ್ಮಕವಾದ ವೀಡಿಯೋದಲ್ಲಿ ಪೀಟರ್‌ನನ್ನು ಕ್ರಿಸ್ಟಿ ಎಂಬ ಹೆಣ್ಣಾನೆ ತಕ್ಷಣವೇ ತನ್ನ ಸೊಂಡಿಲಿನಿಂದ ಗುರುತು ಹಿಡಿಯುತ್ತದೆ. ಈ ಪುನರ್ಮಿಲನದ ವೀಡಿಯೋವನ್ನು ನೀವೇ ನೋಡಿ..

1967ರಲ್ಲಿ ಹುಟ್ಟಿದ್ದ ಕ್ರಿಸ್ಟಿಯನ್ನು 1987ರಲ್ಲಿ ಚೆಸ್ಟರ್‌ ಮೃಗಾಲಯಕ್ಕೆ ಕರೆದೊಯ್ಯಲು ಗ್ಲಾಸ್ಗೋಗೆ ತೆಗೆದುಕೊಂಡು ಹೋಗಲಾಗಿತ್ತು. ಇದಕ್ಕೂ ಮೊದಲು 1980ರ ದಶಕದಲ್ಲಿ ಪೀಟರ್‌ ಕ್ರಿಸ್ಟಿಯ ಕೇರ್‌ಟೇಕರ್‌ ಆಗಿ ಕೆಲಸ ಮಾಡುತ್ತಿದ್ದ. ಬಳಿಕ, ಆರ್ಥಿಕ ಸಾಲ ಹೆಚ್ಚಾದ ಕಾರಣದಿಂದಾಗಿ ಮೃಗಾಲಯವನ್ನು ಮುಚ್ಚಲಾಗಿತ್ತು.

ನಂತರ ಕ್ರಿಸ್ಟಿ ಹಾಗೂ ಮತ್ತೊಂದು ಹೆಣ್ಣಾನೆ ಜ್ಯೂಡಿ ಜತೆಗೆ ಡುಬ್ಲಿನ್‌ಗೆ ಕರೆದೊಯ್ಯಲಾಗಿತ್ತು. ಅಲ್ಲಿ 1994 ರಿಂದ 2005ರವರೆಗೆ ಆ ಎರಡೂ ಆನೆಗಳು ಜತೆಯಾಗಿದ್ದವು. ಆ ವೇಳೆಗೆ ಪೀಟರ್‌ ಕ್ರಿಸ್ಟಿಯನ್ನು ಗೂಗಲ್‌ನಲ್ಲಿ ಹುಡುಕಲು ಆರಂಭಿಸಿದ. ನಂತರ, ಜರ್ಮನಿಯ ನ್ಯೂನ್‌ಕಿರ್ಚೆನ್‌ ಮೃಗಾಲಯ ಅಂದರೆ ಕ್ರಿಸ್ಟಿ ಇದ್ದ ಮೊದಲ ಮೃಗಾಲಯಕ್ಕೆ ಕರೆತಂದಿದ್ದಾರೆ ಎಂಬುದನ್ನು ಪೀಟರ್ ಕಂಡುಹಿಡಿದರು.

ಈ ಹಿನ್ನೆಲೆ ನ್ಯೂನ್‌ಕಿರ್ಚೆನ್‌ ಮೃಗಾಲಯವನ್ನು ನೋಡಿಕೊಳ್ಳುವವರು ಹಾಗೂ ಮ್ಯಾನೇಜರ್‌ಗಳ ಮನವೊಲಿಸಿ ಕ್ರಿಸ್ಟಿಯನ್ನು ಭೇಟಿಯಾದರು. ಈ ಸಂಬಂಧ ಮಾಹಿತಿ ನೀಡಿದ ಪೀಟರ್, ''ಅವಳು ತನ್ನನ್ನು ಹತ್ತಿರಕ್ಕೆ ಸೇರಿಸಿಕೊಂಡಳು ಹಾಗೂ ಒಪ್ಪಿಕೊಂಡಳು. ಅದು ತನಗೆ ಅತ್ಯಂತ ಭಾವನಾತ್ಮಕ ಅನುಭವ'' ಎಂದು ಕ್ರಿಸ್ಟಿಯನ್ನು ಭೇಟಿ ಮಾಡಿದ ಬಳಿಕ ಹೇಳಿಕೊಂಡಿದ್ದಾರೆ.

ಜರ್ಮನಿಯ ಮೃಗಾಲಯದಲ್ಲಿ ಸದ್ಯ ನಿವೃತ್ತಿ ಜೀವನವನ್ನು ಕಳೆಯುತ್ತಿರುವ ಆನೆ ಈಗಲೂ ಆರೋಗ್ಯವಾಗಿಯೇ ಇದೆ. ಇನ್ನು, ಕ್ರಿಸ್ಟಿಯನ್ನು ಆಗಾಗ್ಗೆ ಭೇಟಿ ಮಾಡುವುದಾಗಿ ಪೀಟರ್ ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ