ಆ್ಯಪ್ನಗರ

ಮರಿಗಳ ರಕ್ಷಣೆಗೆ ಹುಲಿಗಳ ಜತೆ ಕಾದಾಡಿದ ತಾಯಿ ಕರಡಿ - ವೀಡಿಯೋ ನೋಡಿ

ರಣಥಂಬೂರ್‌ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿ ಸಫಾರಿಗೆ ತೆರಳಲು ನವೆಂಬರ್‌ ನಿಂದ ಮೇ ತಿಂಗಳು ಸೂಕ್ತ ಸಮಯ

Agencies 19 Oct 2018, 10:31 am
ರಣಥಂಬೂರ್‌: ರಾಜಸ್ಥಾನದ ರಣಥಂಬೂರ್‌ ರಾಷ್ಟ್ರೀಯ ಉದ್ಯಾನದಲ್ಲಿ ತಾಯಿ ಕರಡಿಯೊಂದು ತನ್ನ ಮರಿಗಳ ರಕ್ಷಣೆಗೆ ದೈತ್ಯ ಹುಲಿಗಳ ಜತೆ ಕಾದಾಡುವ ರೋಚಕ ವೀಡಿಯೋ ಫೂಟೇಜ್‌ ಪ್ರವಾಸಿಗರ ಕ್ಯಾಮರಾಗೆ ಸೆರೆಯಾಗಿದೆ.
Vijaya Karnataka Web ಕರಡಿ ಹುಲಿ ಕಾಳಗ, photo credit: YouTube


ಎರಡು ಮರಿಗಳ ಜತೆ ಪೊದೆಯತ್ತ ಹೋಗುತ್ತಿದ್ದ ತಾಯಿ ಕರಡಿಯನ್ನು ಎರಡು ದೈತ್ಯ ಹುಲಿಗಳು ಅಡ್ಡ ಗಟ್ಟುತ್ತವೆ. ಓಡಿ ಹೋದರೆ ಮರಿಗಳು ಬಲಿಯಾಗುತ್ತವೆ. ಆದ್ದರಿಂದ ತಾಯಿ ಕರಡಿ ಹುಲಿಗಳ ವಿರುದ್ಧ ಹೋರಾಡಲು ನಿರ್ಧರಿಸುತ್ತದೆ.

ಗಂಡು ಹುಲಿಯನ್ನು ಬೆದರಿಸುವಲ್ಲಿ ತಾಯಿ ಕರಡಿ ಯಶಸ್ವಿಯಾಗುತ್ತದೆ. ಆದರೆ ಹೆಣ್ಣು ಹುಲಿ ಕರಡಿ ಜತೆ ಭೀಕರ ಕಾಳಗಕ್ಕೆ ಇಳಿಯುತ್ತದೆ. ಕರಡಿಯನ್ನು ಕೆಡವಲು ಯಶಸ್ವಿಯಾದರೂ, ಪಟ್ಟು ಬಿಡದ ತಾಯಿ ಕರಡಿಯ ಎದಿರೇಟಿನಿಂದ ಕೊನೆಗೆ ಹುಲಿ ಪರಾರಿಯಾಗುತ್ತದೆ.

ರಣಥಂಬೂರ್‌ ಬಂಗಾಳ ಹುಲಿಗಳಿಗೆ ಪ್ರಸಿದ್ಧಿ ಪಡೆದಿದೆ. ಹಗಲು ಹೊತ್ತಿನಲ್ಲಿ ಹುಲಿಗಳು ಕಾಣಿಸುವುದು ಸರ್ವೇ ಸಾಮಾನ್ಯ. ಇಲ್ಲಿ ಹುಲಿ ಸಫಾರಿಗೆ ಉತ್ತಮ ಸಮಯ ಎಂದರೆ ನವೆಂಬರ್‌ ನಿಂದ ಮೇ ತಿಂಗಳು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ