ಆ್ಯಪ್ನಗರ

ಕೇರಳದ ಮೊತ್ತ ಮೊದಲ ಸಿಸೇರಿಯನ್‌ ಮಗು 98ನೇ ವಯಸ್ಸಿನಲ್ಲಿ ನಿಧನ

ಕೇರಳದಲ್ಲಿ ಮೊತ್ತ ಮೊದಲ ಸಿಸೇರಿಯನ್‌ ಮಗುವಾಗಿದ್ದ ಮೈಕಲ್‌ ಸಾವರಿಮುತ್ತು ತಮ್ಮ 98ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

Vijaya Karnataka Web 11 May 2018, 6:39 pm
ಕೇರಳದಲ್ಲಿ ಮೊತ್ತ ಮೊದಲ ಸಿಸೇರಿಯನ್‌ ಮಗುವಾಗಿದ್ದ ಮೈಕಲ್‌ ಸಾವರಿಮುತ್ತು ತಮ್ಮ 98ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. 1920ರಲ್ಲಿ ತಿರುವನಂತಪುರದ ಪಾಲಯಂನ ಮಹಿಳಾ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿಇವರ ಜನನವಾಗಿತ್ತು.
Vijaya Karnataka Web c section


ಮೈಕಲ್‌ ಹಾಗೂ ಮೇರಿ ದಂಪತಿಗೆ ಮೈಕಲ್‌ ಸಾವರಿಮುತ್ತು ನಾಲ್ಕನೇ ಮಗು. ಮೊದಲ ಮೂರು ಮಕ್ಕಳು ಹೆರಿಗೆಯಲ್ಲೇ ತೀರಿ ಹೋಗಿದ್ದರು. ಈ ಮಗು ಕೂಡ ಸಹಜ ಹೆರಿಗೆಯಾದರೆ ಬದುಕುವುದಿಲ್ಲ, ಸಿಸೇರಿಯನ್‌ ಮಾಡಿದರೆ ಬದುಕಬಹುದು ಎಂದು ವೈದ್ಯರು ಹೇಳಿದರು. ಮೊದಲಿಗೆ ದಂಪತಿ ಒಪ್ಪದಿದ್ದರೂ ಕೊನೆಗೆ ಒಪ್ಪಿಗೆ ನೀಡಿದರು. ಸಿಸೇರಿಯನ್‌ ಮೂಲಕ ಜಗತ್ತಿಗೆ ಬಂದ ಮಗುವನ್ನು ನೋಡಲು ಅಂದು ತುಂಬಾ ಜನರು ಮೈಕಲ್‌-ಮೇರಿ ಮನೆಗೆ ಭೇಟಿ ನೀಡಿದ್ದರು.

ಮೈಕಲ್‌ ಸಾವರಿಮುತ್ತು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು, ಕೇರಳ ಸರ್ಕಾರಿ ಮುದ್ರಣಾಲಯದ ಸದಸ್ಯರಾಗಿ ನಿವೃತ್ತಿ ಹೊಂದಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ