ಆ್ಯಪ್ನಗರ

ಮುಳ್ಳು ಹಂದಿಯಂತಿತ್ತು, ಕೆಣಕಿದಾಗ ಎದ್ದು ಸಾವಿರ ಜೇಡಗಳಾದವು! ವೀಡಿಯೋ ನೋಡಿ

ಕೀಟ ಲೋಕವೇ ಹಾಗೆ, ಅಚ್ಚರಿಯನ್ನೇ ಮೈದಳೆದಂತಿರುತ್ತದೆ. ಯಾವುದೋ ಮುಳ್ಳು ಹಂದಿಯಂತಿದ್ದ ಪ್ರಾಣಿಯೊಂದು ನೋಡ ನೋಡುತ್ತಿದ್ದಂತೆ ಸಾವಿರಾರು ಜೇಡಗಳಾಗಿ ರೂಪು ತಳೆದು ಕಣ್ಮರೆಯಾಗುತ್ತಿದ್ದರೆ, ನಮ್ಮ ಪಾಡು 'ಬಿಟ್ಟ ಕಣ್ಣು ಬಿಟ್ಟಂಗಿದ್ದೆ' ಎಂದಾಗಿ ಬಿಡುತ್ತದೆ.

Agencies 6 Jan 2019, 9:40 am
ಮೈತುಂಬಾ ಕೂದಲಿರುವ ಯಾವುದೋ ಪ್ರಾಣಿ ಮಲಗಿದೆ ಎಂದು ಕೊಂಡವರಿಗೆ ಅಚ್ಚರಿ ಕಾದಿತ್ತು. ದೂರದಿಂದ ನೋಡಿದರೆ ಥೇಟ್‌ ಮುಳ್ಳು ಹಂದಿಯಂತೆ ಕಾಣಿಸುತ್ತಿತ್ತು. ಏನೆಂದು ಕೋಲಿನಿಂದ ಮೆಲ್ಲಗೆ ತಾಗಿಸಿದಾಗ ಸಾವಿರಾರು ಜೇಡಗಳು ಎದ್ದು ಕಣ್ಮರೆಯಾದಾಗ ಎಲ್ಲರೂ ಬಿಟ್ಟಕಣ್ಣು ಬಿಟ್ಟಂತೆ ಕುಳಿತಿದ್ದರು. ಇದರ ವೀಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.
Vijaya Karnataka Web Cellar Spider


ಮೆಕ್ಸಿಕೊದ ಅಲಾಮೊಸ್‌ ನಗರದ ಸಮೀಪದ ಗುಹೆಯೊಂದರಲ್ಲಿ ಆ ವೀಡಿಯೋವನ್ನು ಚಿತ್ರೀಕರಿಸಲಾಗಿದೆ. ಇಬ್ಬರು ಟ್ರೆಕ್ಕರ್‌ಗಳು ತೆಗೆದ ವೀಡಿಯೋದಲ್ಲಿ ಕೀಟಲೋಕದ ವಿಸ್ಮಯ ಕಂಡು ನೆಟ್ಟಿಗರು ಮೂಕವಿಸ್ಮಿತಗೊಂಡಿದ್ದಾರೆ.

ಗುಹೆಯ ಮೂಲೆಯಲ್ಲಿ ಯಾವುದೋ ಮೈತುಂಬಾ ದಟ್ಟ ಕಪ್ಪು ಕೂದಲು ಹೊಂದಿದ ಪ್ರಾಣಿ ಮಲಗಿದ್ದಂತೆ ತೋರುತ್ತಿರುವ ಜೇಡಗಳ ಗುಂಪು ಚದುರಿ ಕಣ್ಮರೆಯಾದ ಸಂಪೂರ್ಣ ದೃಶ್ಯ ವೀಡಿಯೋದಲ್ಲಿದೆ.

ಯಾವುದೀ ಜೇಡ?
ವೈಜ್ಞಾನಿಕವಾಗಿ ಫೋಲ್ಸಿಡೆ ಎಂದು ಕರೆಯಲ್ಪಡುವ ಜೇಡವನ್ನು ಸ್ಥಳೀಯವಾಗಿ ಅನೇಕ ಹೆಸರುಗಳಿಂದ ಕರೆಯುತ್ತಾರೆ. ನೆಲಮಾಳಿಗೆಯ ಜೇಡುಗಳು, ಉದ್ದಗಾಲಿನ ಜೇಡಗಳು, ಕಪ್ಪು ಜೇಡಗಳು ಹೀಗೆ ಅನೇಕ ಹೆಸರುಗಳಿಂದ ಗುರುತಿಸುತ್ತಾರೆ. ಇವುಗಳು ವಿಷಕಾರಿಯಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ