ಆ್ಯಪ್ನಗರ

ತಾಯಿಯ ಗರ್ಭದಲ್ಲೇ ಅವಳಿ ಹೆಣ್ಣುಮಕ್ಕಳಿಂದ ಬಾಕ್ಸಿಂಗ್! ( ವೀಡಿಯೋ ನೋಡಿ )

ತಾಯಿಯ ಗರ್ಭದಲ್ಲಿದ್ದಾಗಲೇ ಮಕ್ಕಳು ಬಾಕ್ಸಿಂಗ್‌ ಆಡಿರುವ ದೃಶ್ಯ ಅಲ್ಟ್ರಾಸೌಂಡ್‌ನಲ್ಲಿ ಸೆರೆಯಾಗಿದೆ. ಚೀನಾದಲ್ಲಿ ಈ ಅಪರೂಪದ ಘಟನೆ ನಡೆದಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Times Now 16 Apr 2019, 2:20 pm
ಬೀಜಿಂಗ್: ಒಡಹುಟ್ಟಿದವರು ಚಿಕ್ಕ ವಯಸ್ಸಿನವರಿದ್ದಾಗ ಕಿತ್ತಾಡುವುದನ್ನು ಅಥವಾ ದೊಡ್ಡವರಾದ ಮೇಲೆ ಕಲಹವಾಡೋದನ್ನು ಕೇಳಿರುತ್ತೀರಾ ಹಾಗೂ ನೋಡಿರುತ್ತೀರಾ? ಆದರೆ, ಹುಟ್ಟುವ ಮುನ್ನವೇ ಅಂದರೆ ತಾಯಿಯ ಗರ್ಭದಲ್ಲಿದ್ದಾಗಲೇ ಮಕ್ಕಳು ಫೈಟಿಂಗ್ ಆಡುವುದನ್ನು ಎಲ್ಲಾದರೂ ಕೇಳಿದ್ದೀರಾ?
Vijaya Karnataka Web identical twins


ಇದು ಅಸಾಧ್ಯ ಅಂತೀರಾ? ಆದರೆ, ಇಂತಹ ಘಟನೆ ನಡೆದಿದೆ. ಅವಳಿಗಳು ತಾಯಿಯ ಹೊಟ್ಟೆಯೊಳಗೆ ಫೈಟಿಂಗ್ ನಡೆಸಿರುವುದು ಅಲ್ಟ್ರಾಸೌಂಡ್‌ನಲ್ಲಿ ಬಯಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಎರಡು ಭ್ರೂಣಗಳು ತಮ್ಮ ತಾಯಿಯ ಗರ್ಭದಲ್ಲಿದ್ದಾಗಲೇ ಪರಸ್ಪರ ಹೊಡೆದಾಡಿಕೊಳ್ಳುತ್ತಿರುವ ರೀತಿ ವೀಡಿಯೋದಲ್ಲಿ ದಾಖಲಾಗಿದೆ.

ಇನ್ನು, ಕಳೆದ ವರ್ಷ ಚೀನಾದಲ್ಲಿ ಈ ವೀಡಿಯೋ ಶೇರ್ ಮಾಡಲಾಗಿತ್ತು ಎನ್ನಲಾಗಿದ್ದು, ಆ ವೇಳೆ ತಾಯಿ 4 ತಿಂಗಳ ಗರ್ಭೀಣಿಯಾಗಿದ್ದರು ಎಂದು ತಿಳಿದುಬಂದಿದೆ. ಚೀನಾದ ಯಿಂಚುವಾನ್‌ನಲ್ಲಿ ಗರ್ಭಿಣಿ ವೈದ್ಯರ ಬಳಿ ಪರೀಕ್ಷೆಗೆ ಹೋದಾಗ ಅಲ್ಟ್ರಾಸೌಂಡ್‌ ಮಾಡಲಾಗಿತ್ತು. ಆ ವೇಳೆ, ಈ ವೀಡಿಯೋವನ್ನು ಅವಳಿ ಮಕ್ಕಳ ತಂದೆ 28 ವರ್ಷದ ಟಾವೋ ತನ್ನ ಮೊಬೈಲ್ ಫೋನ್ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿಕೊಂಡಿದ್ದರು ಎಂದು ಚೀನಾದ ಮಾಧ್ಯಮ ವರದಿ ಮಾಡಿವೆ.

ಹುಟ್ಟುವ ಮುನ್ನವೇ ತನ್ನ ಮಕ್ಕಳು ಬಾಕ್ಸಿಂಗ್ ಆಡುತ್ತಿದ್ದದ್ದು ತನಗೆ ಆಶ್ಚರ್ಯವೆನಿಸಿತು ಎಂದು ಅವರು ಚೀನಾದ ಸ್ಥಳೀಯ ಮಾಧ್ಯಮಕ್ಕೆ ಹೇಳಿಕೊಂಡಿದ್ದಾರೆ. ಬಳಿಕ, ಈ ವೀಡಿಯೋ ಚೀನಾದಲ್ಲಿ ಹಾಗೂ ಪ್ರಪಂಚದಾದ್ಯಂತ ವೈರಲ್‌ ಆಗಿದೆ.


ಈ ವೀಡಿಯೋವನ್ನು 25 ಲಕ್ಷಕ್ಕಿಂತ ಅಧಿಕ ನೆಟ್ಟಿಗರು ನೋಡಿದ್ದು, ಸಾಮಾಜಿಕ ಜಾಲತಾಣದಲ್ಲಿ 80 ಸಾವಿರಕ್ಕೂ ಅಧಿಕ ಮಂದಿ ಕಾಮೆಂಟ್‌ಗಳನ್ನು ಮಾಡಿದ್ದಾರೆ.

ಈಗ, ತಾಯಿಗೆ ಎರಡು ಹೆಣ್ಣು ಮಕ್ಕಳು ಹುಟ್ಟಿದ್ದು, ಚೆರ್ರಿ ಹಾಗೂ ಸ್ಟ್ರಾಬೆರ್ರಿ ಎಂಬ ಅಡ್ಡ ಹೆಸರನ್ನು ಇಡಲಾಗಿದೆ. ಅಲ್ಲದೆ, ತಾಯಿಯ ಗರ್ಭದಲ್ಲಿದ್ದಾಗ ಒಮ್ಮೆ ಇಬ್ಬರೂ ತಬ್ಬಿಕೊಂಡಿದ್ದು ಸಹ ಅಲ್ಟ್ರಾಸೌಂಡ್‌ನಲ್ಲಿ ನೋಡಿದ್ದೆವು ಎಂದು ಅವಳಿ ಮಕ್ಕಳ ತಂದೆ ಹೇಳಿದ್ದಾರೆ. ಜತೆಗೆ, ಅವಳಿ ಮಕ್ಕಳು ಹುಟ್ಟಿದ ಬಳಿಕ ತಾಯಿ ವೈದ್ಯಕೀಯ ಪರೀಕ್ಷೆಗೊಳಪಟ್ಟಾಗಲೂ ಎರಡೂ ಮಕ್ಕಳು ತಬ್ಬಿಕೊಂಡು ಪ್ರೀತಿ ವ್ಯಕ್ತಪಡಿಸುತ್ತಿದ್ದರು ಎಂದೂ ಟಾವೊ ಮಾಹಿತಿ ನೀಡಿದ್ದಾರೆ.

ಅಲ್ಲದೆ, ಈ ದೃಶ್ಯ ನೋಡಿ ನಾವು ಭಾವುಕರಾದೆವು. ಈ ಅವಳಿ ಮಕ್ಕಳು ದೊಡ್ಡವರಾದ ಬಳಿಕ ಪ್ರೀತಿ - ಸಾಮರಸ್ಯದಿಂದ ಬದುಕಲಿವೆ ಎಂಬುದು ನನ್ನ ನಂಬಿಕೆ ಎಂದೂ ಟಾವೋ ಚೀನಾದ ಸ್ಥಳೀಯ ಮಾಧ್ಯಮಕ್ಕೆ ಹೇಳಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ