ಆ್ಯಪ್ನಗರ

ಮಹತ್ವದ ಸಂದೇಶ ತಿಳಿಸಲಿದ್ದೇನೆ ಎಂಬ ಮೋದಿ ಟ್ವೀಟ್‌ಗೆ ನೆಟ್ಟಿಗರ ಪ್ರತಿಕ್ರಿಯೆ ಹೇಗಿತ್ತು ನೀವೇ ನೋಡಿ..!

ಬೆಳಗ್ಗೆ 11.45 ರಿಂದ ಮಧ್ಯಾಹ್ನ 12.00ಗಂಟೆಯ ವೇಳೆಯಲ್ಲಿ ನಾನು ಒಂದು ಮಹತ್ವಪೂರ್ಣವಾದ ಸಂದೇಶವನ್ನು ಹೊತ್ತು ನಿಮ್ಮ ನಡುವೆ ಬರಲಿದ್ದೇನೆ ಎಂದು ಮೋದಿ ಟ್ವೀಟ್‌ ಮಾಡುತ್ತಿದ್ದಂತೆ ನೆಟ್ಟಿಗರು ಫುಲ್ ಅಲರ್ಟ್ ಆಗಿದ್ದರು. ಹಲವರು ಏನಿರಬಹುದೆಂದು ಕುತೂಹಲ ವ್ಯಕ್ತಪಡಿಸಿಸಿದರೆ, ಇನ್ನು ಹಲವರು ಟ್ರೋಲ್ ಮಾಡಿದ್ದಾರೆ.

Vijaya Karnataka Web 27 Mar 2019, 3:34 pm
ಹೊಸದಿಲ್ಲಿ: ''ಮೇರೇ ಪ್ಯಾರೇ ದೇಶ್‌ವಾಸಿಯೋ'', ಈ ಮಾತನ್ನು ಕೇಳಿದರೆ ಈಗಲೂ ದೇಶದ ಹಲವರು ನಡುಗುತ್ತಾರೆ, ಅಥವಾ ತಮ್ಮ ಕಿವಿಯನ್ನು ನೇರವಾಗಿಟ್ಟುಕೊಂಡು ಪ್ರಧಾನಿ ಏನು ಹೇಳುತ್ತಾರೋ ಎಂದು ಕುತೂಹಲದಿಂದ ಕೇಳಿದ್ದರು. ಅದೇ ನೋಟ್‌ ಬ್ಯಾನ್‌. ನವೆಂಬರ್ 8, 2016ರಂದು ರಾತ್ರಿ 8 ಗಂಟೆಯ ವೇಳೆಗೆ ಪ್ರಧಾನಿ ಮೋದಿ ಹಳೆಯ 500 ಹಾಗೂ 1000 ನೋಟನ್ನು ನಿಷೇಧಿಸಿದ್ದರು.
Vijaya Karnataka Web modi


ಇದೇ ರೀತಿ, ಇಂದು ( ಮಾರ್ಚ್ 27,2019)ರಂದು ಬೆಳಗ್ಗೆ 11.45 ರಿಂದ ಮಧ್ಯಾಹ್ನ 12.00ಗಂಟೆಯ ವೇಳೆಯಲ್ಲಿ ನಾನು ಒಂದು ಮಹತ್ವಪೂರ್ಣವಾದ ಸಂದೇಶವನ್ನು ಹೊತ್ತು ನಿಮ್ಮ ನಡುವೆ ಬರಲಿದ್ದೇನೆ ಎಂದು ಪ್ರಧಾನಿ ಮೋದಿ ಬೆಳಗ್ಗೆ 11.23ಕ್ಕೆ ಟ್ವೀಟ್‌ ಮಾಡಿದ್ದರು. ಅಲ್ಲದೆ, ತನ್ನ ಭಾಷಣವನ್ನು ಟಿವಿ, ರೇಡಿಯೋ ಅಥವಾ ಸಾಮಾಜಿಕ ಜಾಲತಾಣದಲ್ಲಿ ನೋಡಿ ಎಂದೂ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮೋದಿ ಕೇಳಿಕೊಂಡಿದ್ದರು.

ಮೋದಿ ಟ್ವೀಟ್‌ ಮಾಡಿದ ಬೆನ್ನಲ್ಲೇ ಇಡೀ ದೇಶದ ಜನತೆ ಮತ್ತೆ ನೋಟ್‌ ಬ್ಯಾನ್‌ನಂತಹದ್ದೇ ಸುದ್ದಿಯೇನಾದ್ರೂ ಬರುತ್ತಾ, ಪಾಕ್ ವಿರುದ್ಧ ಯುದ್ಧ ಘೋಷಣೆಯಾಗುತ್ತಾ ಎಂದೆಲ್ಲ ಲೆಕ್ಕ ಹಾಕಿದ್ದರು. ಈ ಹಿನ್ನೆಲೆ ಪ್ರಧಾನಿ ಮೋದಿ ಟ್ವೀಟ್‌ಗೆ 16 ಸಾವಿರ ಮಂದಿ ಇದುವರೆಗೆ ಪ್ರತಿಕ್ರಿಯೆ ನೀಡಿದ್ದು, ನೆಟ್ಟಿಗರು ತಮ್ಮ ಮನಬಂದಂತೆ ಟ್ವೀಟ್‌ ಮಾಡಿದ್ದಾರೆ.

ಪ್ರಧಾನಿ ಮೋದಿ ಟ್ವೀಟ್‌ ಫುಲ್ ವೈರಲ್‌ ಆಗಿದ್ದು, ಅದನ್ನು 26 ಸಾವಿರಕ್ಕೂ ಅಧಿಕ ಮಂದಿ ರೀ ಟ್ವೀಟ್‌ ಮಾಡಿದ್ದು, ಸುಮಾರು 83 ಸಾವಿರ ನೆಟ್ಟಿಗರು ಇದುವರೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮೋದಿ ಏನು ಮಾತನಾಡಲಿದ್ದಾರೋ, ಹೊಸದು ಏನು ಘೋಷಣೆ ಮಾಡಲಿದ್ದಾರೋ ಎಂದು ವಿಪಕ್ಷಗಳ ನಾಯಕರು ಯಾವ ರೀತಿ ಚಿಂತಿಸಬಹುದು ಎಂದು ಹಲವರು ಟ್ರೋಲ್ ಮಾಡಿದ್ದಾರೆ. ದಿಲ್ಲಿ ಸಿಎಂ ಕೇಜ್ರಿವಾಲ್ ಇತ್ತೀಚೆಗೆ ಆರೋಪಿಸಿದಂತೆ ಮೋದಿ ಚುನಾವಣೆಯನ್ನೇ ಬ್ಯಾನ್ ಮಾಡುತ್ತಿದ್ದಾರೋ ಎಂದೂ ಸಹ ಕೆಲವರು ಟ್ವೀಟ್ ಮಾಡಿ ಟ್ರೋಲ್ ಮಾಡಿದ್ದರು.

ಇನ್ನು, ಪ್ರಧಾನಿ ಮೋದಿ ಭಾಷಣ ಮಾಡುವುದು ಸ್ವಲ್ಪ ತಡವಾದ ಕಾರಣ ಅವರ ಭಾಷಣ ಕೇಳಲು ಹಲವರು ತುದಿಗಾಲಲ್ಲಿ ನಿತಿದ್ದರಿಂದ ಯಾಕೆ ವಿಳಂಬವಾಯಿತು ಎಂದೂ ಟ್ವೀಟ್‌ ಮಾಡಿದ್ದಾರೆ. ಇದಕ್ಕೂ ಸಹ ಹಲವು ರೀತಿಯ ಟ್ರೋಲ್‌ಗಳ ಸುರಿಮಳೆ ಕಂಡುಬಂದಿದೆ.

ಇನ್ನು, ಮೋದಿ ಟ್ವೀಟ್‌ಗೆ ನೆಟ್ಟಿಗರ ಪ್ರತಿಕ್ರಿಯೆಗಳನ್ನು ನೀವೇ ನೋಡಿ..













ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ