ಆ್ಯಪ್ನಗರ

ಐಎಎಸ್‌ ಪರೀಕ್ಷೆಯಲ್ಲಿ ಟಾಪರ್‌ ಆಗಿದ್ದಕ್ಕೆ ಗರ್ಲ್‌ಫ್ರೆಂಡ್‌ಗೆ ಥ್ಯಾಂಕ್ಸ್ ಹೇಳಿದ ಕಾನಿಷ್ಕ್‌ ಕಟಾರಿಯಾ

ಸಾಧಕರು ತಮ್ಮ ಸಾಧನೆಗೆ ನೆರವಾದ ಪೋಷಕರಿಗೆ, ಪತಿ, ಪತ್ನಿಯರಿಗೆ ಅಥವಾ ಸಂಬಂಧಿಕರಿಗೆ ಧನ್ಯವಾದ ಹೇಳುವುದು ಸಹಜ. ಆದರೆ, ಭಾರತದಲ್ಲಿ ಗರ್ಲ್‌ಫ್ರೆಂಡ್‌ಗೆ ಅಥವಾ ಬಾಯ್‌ಫ್ರೆಂಡ್‌ಗೆ ಎಷ್ಟು ಜನ ಧನ್ಯವಾದ ಹೇಳುತ್ತಾರೆ ಹೇಳಿ. ಆದರೆ, ಯುಪಿಎಸ್‌ಸಿ ಟಾಪರ್‌ ರಾಜಸ್ಥಾನ ಮೂಲದ ಕಾನಿಷ್ಕ್‌ ಕಟಾರಿಯಾ ತನ್ನ ನೈತಿಕ ಬೆಂಬಲಕ್ಕೆ ನಿಂತಿದ್ದ ಗರ್ಲ್‌ಫ್ರೆಂಡ್‌ಗೆ ಥ್ಯಾಂಕ್ಸ್ ಹೇಳಿದ್ದಾರೆ.

Vijaya Karnataka Web 7 Apr 2019, 10:08 am
ಹೊಸದಿಲ್ಲಿ: ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವಾ ಪರೀಕ್ಷೆ - 2018ರ ಫಲಿತಾಂಶವನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ. ಐಐಟಿ ಬಾಂಬೆ ವಿದ್ಯಾರ್ಥಿ ಕಾನಿಷ್ಕ್‌ ಕಟಾರಿಯಾ ಇಡೀ ದೇಶಕ್ಕೆ ನಂ. 1 ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು, ಯುಪಿಎಸ್‌ಸಿ ಅಧ್ಯಯನಕ್ಕೆ ನೆರವಾದ ಹಾಗೂ ನೈತಿಕ ಬೆಂಬಲಕ್ಕೆ ನಿಂತಿದ್ದ ಗರ್ಲ್‌ಫ್ರೆಂಡ್‌ಗೆ ಶುಭ ಕೋರಿರುವುದು ಇಡೀ ದೀಶವನ್ನೇ ಅಚ್ಚರಿಗೀಡುಮಾಡಿದೆ.
Vijaya Karnataka Web kanishak kataria


ಸಾಧಕರು ತಮ್ಮ ಸಾಧನೆಗೆ ನೆರವಾದ ಪೋಷಕರಿಗೆ, ಪತಿ, ಪತ್ನಿಯರಿಗೆ ಅಥವಾ ಸಂಬಂಧಿಕರಿಗೆ ಧನ್ಯವಾದ ಹೇಳುವುದು ಸಹಜ. ಆದರೆ, ಭಾರತದಲ್ಲಿ ಗರ್ಲ್‌ಫ್ರೆಂಡ್‌ಗೆ ಅಥವಾ ಬಾಯ್‌ಫ್ರೆಂಡ್‌ಗೆ ಎಷ್ಟು ಜನ ಧನ್ಯವಾದ ಹೇಳುತ್ತಾರೆ ಹೇಳಿ. ಆದರೆ, ಯುಪಿಎಸ್‌ಸಿ ಟಾಪರ್‌ ರಾಜಸ್ಥಾನ ಮೂಲದ ಕಾನಿಷ್ಕ್‌ ಕಟಾರಿಯಾ ತನ್ನ ನೈತಿಕ ಬೆಂಬಲಕ್ಕೆ ನಿಂತಿದ್ದ ಗರ್ಲ್‌ಫ್ರೆಂಡ್‌ಗೆ ಥ್ಯಾಂಕ್ಸ್ ಹೇಳಿದ್ದಾರೆ.

ಫಲಿತಾಂಶ ಬಂದ ಬಳಿಕ ಸುದ್ದಿಸಂಸ್ಥೆ ಎಎನ್‌ಐಗೆ ಸಂದರ್ಶನ ನೀಡಿದ್ದ ಕಾನಿಷ್ಕ್‌, '' ಇದು ನನಗೆ ಅತ್ಯಂತ ಆಶ್ಚರ್ಯಕರ ಕ್ಷಣ. ನಾನು ಎಂದಿಗೂ ಇಡೀ ದೇಶಕ್ಕೆ ಟಾಪರ್‌ ಆಗಿ ಹೊರಹೊಮ್ಮುವ ಬಗ್ಗೆ ನಿರೀಕ್ಷೆ ಮಾಡಿರಲಿಲ್ಲ'' ಎಂದು ಪ್ರತಿಕ್ರಿಯೆ ನೀಡಿದ್ದರು. ಅಲ್ಲದೆ, ಯುಪಿಎಸ್‌ಸಿ ಅಧ್ಯಯನಕ್ಕೆ ನೆರವಾದ ಹಾಗೂ ನೈತಿಕ ಬೆಂಬಲ ನೀಡಿದ ಪೋಷಕರು, ಸಹೋದರಿ ಹಾಗೂ ಗರ್ಲ್‌ಫ್ರೆಂಡ್‌ಗೆ ಕಟಾರಿಯಾ ಧನ್ಯವಾದ ತಿಳಿಸಿದ್ದಾರೆ.

ಅಲ್ಲದೆ, ಜನರು ತನ್ನನ್ನು ಒಳ್ಳೆಯ ಆಡಳಿತನಾಗಿರಬೇಕೆಂದು ಬಯಸುತ್ತಾರೆ. ನಾನೂ ಸಹ ಅದೇ ಉದ್ದೇಶ ಹೊಂದಿದ್ದೇನೆ ಎಂದು ಸಹ ಸುದ್ದಿಸಂಸ್ಥೆ ಎಎನ್‌ಐಗೆ ಕಾನಿಷ್ಕ್‌ ಕಟಾರಿಯಾ ಪ್ರತಿಕ್ರಿಯೆ ನೀಡಿದ್ದಾರೆ.

ಸಾರ್ವಜನಿಕವಾಗಿ ಮಾಧ್ಯಮದೆದುರು ತನ್ನ ಗರ್ಲ್‌ಫ್ರೆಂಡ್‌ ಇರುವುದನ್ನು ಒಪ್ಪಿಕೊಂಡಿರುವುದು ಅವನ ಸಂಬಂಧ ಅಷ್ಟು ಗಾಢವಾಗಿದೆ, ಆತ ಸಂಬಂಧದ ವಿಚಾರದಲ್ಲಿ ಸೀರಿಯಸ್‌ ಆಗಿದ್ದಾನೆ ಅನ್ನುವುದು ತಿಳಿಯುತ್ತದೆ.

ಇನ್ನು, ಕಾನಿಷ್ಕ್‌ ಕಟಾರಿಯಾ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಹಲವು ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ತನ್ನ ಹುಡುಗಿಗೂ ಕ್ರೆಡಿಟ್‌ ನೀಡಿರುವುದಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು, ಹಲವರು ಟ್ರೋಲ್‌ ಕೂಡ ಮಾಡಿದ್ದಾರೆ. ಇಲ್ಲಿ ಕೆಲವು ಪ್ರತಿಕ್ರಿಯೆಗಳು ಇವೆ ನೋಡಿ..















ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ