ಆ್ಯಪ್ನಗರ

ಅಪ್ಪನಾದ ಖೈದಿ: ಪೊಲೀಸರ ಭ್ರಷ್ಟಾಚಾರ ಬಯಲು

ವಿಚಾರಣಾಧೀನ ಭೂಗತ ಪಾತಕಿಯೊಬ್ಬ 2013ರಿಂದ ಜೈಲಿನಲ್ಲಿಯೇ ಇದ್ದಾನೆ. ಆದರೆ ಈತ ಇದೀಗ ಒಂದು ವರ್ಷ 5 ತಿಂಗಳ ಹೆಣ್ಣು ಮಗುವಿನ ತಂದೆ.

ಟೈಮ್ಸ್ ಆಫ್ ಇಂಡಿಯಾ 15 Aug 2017, 2:44 pm
ಮುಂಬಯಿ: ವಿಚಾರಣಾಧೀನ ಭೂಗತ ಪಾತಕಿಯೊಬ್ಬ 2013ರಿಂದ ಜೈಲಿನಲ್ಲಿಯೇ ಇದ್ದಾನೆ. ಆದರೆ ಈತ ಇದೀಗ ಒಂದು ವರ್ಷ 5 ತಿಂಗಳ ಹೆಣ್ಣು ಮಗುವಿನ ತಂದೆ!
Vijaya Karnataka Web jailed gangsters wife bribes police for private time husband flees hotel
ಅಪ್ಪನಾದ ಖೈದಿ: ಪೊಲೀಸರ ಭ್ರಷ್ಟಾಚಾರ ಬಯಲು


ಜೈಲಿನಲ್ಲಿ ಒಂದು ದಿನವೂ ಹೊರಗೆ ಹೋಗದಿದ್ದ ಈತ ತಂದೆಯಾಗಿದ್ದು ಹೇಗೆ ಎಂಬುದರ ಬಗ್ಗೆ ಸಾಕಷ್ಟು ಚರ್ಚೆ ನಡೆಯಿತು (ಜೈಲಿನಲ್ಲಿ ಇದ್ದುಕೊಂಡೇ ಅಪ್ಪನಾದ ಭೂಗತ ಡಾನ್). ಈತ ತಂದೆಯಾದ ಸೀಕ್ರೆಟ್ ಇದೀಗ ಬಯಲಾಗಿದೆ. ವಿಪರ್ಯಾಸವೆಂದರೆ ಇದರೊಂದಿಗೆ ಪೊಲೀಸ್‌ ಭ್ರಷ್ಟಾಚಾರವೂ ಬಹಿರಂಗಗೊಂಡಿದೆ.

ಹನುಮಾನ್‌ ಪಟೇಲ್‌ ಎಂಬ ಈ ಖೈದಿಯನ್ನು ವಿಚಾರಣೆಗೆ ಕರೆದೊಯ್ಯುವಾಗ 10 ಪೊಲೀಸರ ಬಿಗಿ ಕಾವಲಿನಲ್ಲಿ ಕರೆದುಕೊಂಡು ಹೋಗುತ್ತಿದ್ದರು.

ಪೊಲೀಸರು ಕಾವಲು ಕಾಯುತ್ತಿರುವಾಗ ಅವರ ಕಣ್ಣಿಗೆ ಮಣ್ಣೆರೆಚಿ, ಹೆಂಡತಿ ಜತೆ ಹೋಟೆಲ್‌ ರೂಮ್‌ನಲ್ಲಿ ರೊಮ್ಯಾನ್ಸ್‌ ಮಾಡಲು ಇಬ್ಬರು ಪೊಲೀಸರು ಸಹಾಯ ಮಾಡಿದ್ದಾರೆ. ಇದಕ್ಕಾಗಿ ಒಂದು ಲಕ್ಷ ಹಣವನ್ನೂ ತೆಗೆದುಕೊಂಡಿದ್ದಾರೆ. ಇದೀಗ ಆ ಇಬ್ಬರು ಪೊಲೀಸರು ಕರ್ತವ್ಯ ಲೋಪ ಎಸಗಿದ್ದಕ್ಕೆ ಕೆಲಸದಿಂದ ವಜಾ ಮಾಡಲಾಗಿದೆ.

jailed gangster's wife bribes police for 'private time', husband flees hotel

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ