ಆ್ಯಪ್ನಗರ

ಪತ್ನಿಗೆ ಕಾರ್ಗಿಲ್ ವೀರ ಬರೆದ ಪತ್ರ, ಆತನ ಮೃತದೇಹ ಬಂದ 3 ದಿನದ ಬಳಿಕ ಬಂತು

ವೀರ ಯೋಧ ನಾಯಕ್ ಕುಲ್‌ದೀಪ್‌ ಸಿಂಗ್‌ ಮೃತದೇಹ ಲೂಧಿಯಾನದಲ್ಲಿದ್ದ ಅವರ ಮನೆಗೆ ಬಂದ ಮೂರು ದಿನದ ಬಳಿಕ ಪತ್ನಿ ಮಂದೀಪ್‌ ಕೌರ್‌ಗೆ ಗಂಡ ತನಗೆ ಬರೆದ ಕೆಂಪು ಬಣ್ಣದ ಸೈನಿಕ ಪತ್ರ ಕೈ ಸೇರುತ್ತದೆ. ಈ ಮನಕಲಕುವ ಘಟನೆ ನಡೆದು 18 ವರ್ಷಗಳೇ ಕಳೆದಿವೆ.

TIMESOFINDIA.COM 26 Jul 2018, 11:35 am
ನಥೋವಾಲ್: ವೀರ ಯೋಧ ನಾಯಕ್ ಕುಲ್‌ದೀಪ್‌ ಸಿಂಗ್‌ ಮೃತದೇಹ ಲೂಧಿಯಾನದಲ್ಲಿದ್ದ ಅವರ ಮನೆಗೆ ಬಂದ ಮೂರು ದಿನದ ಬಳಿಕ ಪತ್ನಿ ಮಂದೀಪ್‌ ಕೌರ್‌ಗೆ ಗಂಡ ತನಗೆ ಬರೆದ ಕೆಂಪು ಬಣ್ಣದ ಸೈನಿಕ ಪತ್ರ ಕೈ ಸೇರುತ್ತದೆ. ಈ ಮನಕಲಕುವ ಘಟನೆ ನಡೆದು 18 ವರ್ಷಗಳೇ ಕಳೆದಿವೆ.
Vijaya Karnataka Web sainik patr


ಕಾರ್ಗಿಲ್‌ ಯುದ್ಧದ ಬಳಿಕ 2000ನೇ ಇಸವಿಯಲ್ಲಿ ಜಮ್ಮು-ಕಾಶ್ಮೀರದಲ್ಲಿ ನಡೆದ 'ಆಪರೇಷನ್‌ ರಕ್ಷಕ್‌' ಕಾರ್ಯಾಚರಣೆಯಲ್ಲಿ ಜುಲೈ 13ರಂದು ಕುಲ್‌ದೀಪ್‌ ವೀರ ಮರಣವನ್ನಪ್ಪುತ್ತಾರೆ. ಅವರ ಮೃತದೇಹ ಜುಲೈ 16ಕ್ಕೆ ಮನೆಗೆ ತಲುಪುತ್ತದೆ. ಇದಾಗಿ ಮೂರು ದಿನದ ಬಳಿಕ ಅಂದರೆ ಜುಲೈ 19ಕ್ಕೆ ಅವರು ತಮ್ಮ ಪ್ರೀತಿಯ ಮಡದಿ ಮತ್ತು ಮಕ್ಕಳ ಯೋಗಕ್ಷೇಮ ವಿಚಾರಿಸಿ ಬರೆದ ಪತ್ರ ಪತ್ನಿಯ ಕೈ ಸೇರುತ್ತದೆ.

ಮಂದೀಪ್ ಗಂಡನ ಮರಣ ಪ್ರಮಾಣ ಪತ್ರದ ಜತೆಗೆ ಆ ಪತ್ರವನ್ನು ಭದ್ರವಾಗಿ ಇಟ್ಟಿದ್ದಾರೆ. 'ನನ್ನ ಬಗ್ಗೆ ನೀನೇನು ಯೋಚಿಸಬೇಡ, ನಾನು ಕ್ಷೇಮವಾಗಿದ್ದೇನೆ' ಎಂದು ಬರೆದಿರುವ ಆ ಪತ್ರವನ್ನು ನೋಡುವಾಗ ಆಕೆಯ ಕಣ್ಣಾಲಿಗಳು ತಂಬಿ ಹರಿಯುತ್ತವೆ.

ಯೋಧ ಬರೆದ ಪತ್ರ...
'ನಾನು ಕ್ಷೇಮವಾಗಿದ್ದೇನೆ, ನೀವೆಲ್ಲ ಕ್ಷೇಮವೆಂದು ಭಾವಿಸುತ್ತೇನೆ, ನಮ್ಮ ಇಬ್ಬರು ಪುತ್ರರು ಕ್ಷೇಮವಾಗಿದ್ದಾರೆ ತಾನೆ? ಎಂದು ಮನೆಯವರ ಯೋಗ ಕ್ಷೇಮ ವಿಚಾರಿಸಿ 'ನೀವು ನನ್ನ ಬಗ್ಗೆ ಚಿಂತೆ ಮಾಡಬೇಡಿ , ನಾನು ಕ್ಷೇಮವಾಗಿದ್ದೇನೆ' ಎಂದು ಮನೆಯವರಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ.

ನಂತರ ನಾನು ಕಳುಹಿಸಿರುವ ರೂ. 2000 ಮನಿ ಆರ್ಡರ್‌ ಕೈ ಸೇರಿತೇ? ನನ್ನ ತಂಗಿಗೆ ಒಳ್ಳೆಯ ಸಂಬಂಧ ಕೂಡಿ ಬಂದಿದೆಯೇ? ಎಂದು ಕೇಳಿ ನಂತರ ಮಕ್ಕಳಿಬ್ಬರಿಗೆ ನನ್ನ ಪ್ರೀತಿ ತಿಳಿಸು ಎಂದು ಬರೆದಿದ್ದಾರೆ.

ಅವರು ತೀರಿ ಹೋದಾಗ ಮಕ್ಕಳಿಬ್ಬರು ತುಂಬಾ ಚಿಕ್ಕವರಿದ್ದರು, ಚಿಕ್ಕ ಮಗನಿಗೆ ಅಪ್ಪನಿಗೆ ಏನಾಯಿತು ಎಂದು ಅರೆಯದ ವಯಸ್ಸಾಗಿತ್ತು. ಈಗ ಮಕ್ಕಳಿಬ್ಬರು ಓದಿ, ಉತ್ತಮ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದಾರೆ.

'ನನ್ನ ಗಂಡ ನವೆಂಬರ್‌ನಲ್ಲಿ ಎರಡು ತಿಂಗಳ ರಜೆಯಲ್ಲಿ ಬಂದಿದ್ದರು, ಜನವರಿ 5ಕ್ಕೆ ಕೆಲಸಕ್ಕೆ ಮರಳಿದರು, ಜುಲೈ 16ರಿಂದ ರಜೆ ಸಿಗುತ್ತದೆ ಬರುತ್ತೇನೆ ಅಂದಿದ್ದರು, ಆದರೆ ಜುಲೈ 13ಕ್ಕೆ ನನ್ನ ಅಂಕಲ್‌ ಕರೆ ಮಾಡಿ ಅವರ ಸಾವಿನ ಸುದ್ದಿ ಮುಟ್ಟಸಿದರು'ಅಂತಾರೆ ಮಂದೀಪ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ