ಆ್ಯಪ್ನಗರ

ಫೇಸ್‌ಬುಕ್‌ ಅನ್ನೇ ಮದುವೆ ಬ್ರೋಕರ್‌ ಮಾಡಿದ ಕೇರಳದ ಯುವಕ

ಕೇರಳದ ಯುವಕನೊಬ್ಬ ಫೇಸ್‌ಬುಕ್ ನಲ್ಲಿ ಹುಡುಗಿ ಬೇಕೆಂದು ಪೋಸ್ಟ್‌ ಹಾಕುವ ಮೂಲಕ ಫೇಸ್‌ಬುಕ್‌ ಅನ್ನು ವರ/ವಧು ಹುಡುಕಲೂ ಬಳಸಬಹುದೆಂದು ತೋರಿಸಿಕೊಟ್ಟಿದ್ದಾನೆ.

ವಿಕ ಸುದ್ದಿಲೋಕ 8 Aug 2017, 11:42 am
ಮದುವೆಗೆ ವರ/ವಧು ಅನ್ವೇಷಣೆ ಮಾಡುವವರು ಬ್ರೋಕರ್‌ ಹಾಗೂ ಮ್ಯಾಟ್ರಿಮೋನಿಯಲ್‌ ಮೊರೆ ಹೋಗುವುದು ಸಹಜ.
Vijaya Karnataka Web kerala boy used facebook to find his life partner
ಫೇಸ್‌ಬುಕ್‌ ಅನ್ನೇ ಮದುವೆ ಬ್ರೋಕರ್‌ ಮಾಡಿದ ಕೇರಳದ ಯುವಕ


ಆದರೆ ಕೇರಳದ ಯುವಕನೊಬ್ಬ ಫೇಸ್‌ಬುಕ್ ನಲ್ಲಿ ಹುಡುಗಿ ಬೇಕೆಂದು ಪೋಸ್ಟ್‌ ಹಾಕುವ ಮೂಲಕ ಫೇಸ್‌ಬುಕ್‌ ಅನ್ನು ವರ/ವಧು ಹುಡುಕಲೂ ಬಳಸಬಹುದೆಂದು ತೋರಿಸಿಕೊಟ್ಟಿದ್ದಾನೆ. ಇದೀಗ ವಧು ಬೇಕೆಂಬ ಆತನ ಪೋಸ್ಟ್ ವೈರಲ್ ಆಗಿದೆ.

ವೃತ್ತಿಯಲ್ಲಿ ಫೋಟೊಗ್ರಾಫರ್‌ ಆಗಿರುವ ಆತನ ಹೆಸರು ರಂಜೀಶ್ ಮಂಜೇರಿ. ವಯಸ್ಸು 34. ಹಲವು ವರ್ಷಗಳಿಂದ ಬಾಳ ಸಂಗಾತಿಗಾಗಿ ಹುಡುಕುತ್ತಿದ್ದ. ಮ್ಯಾಟ್ರಿಮೋನಿಯಲ್‌, ಬ್ರೋಕರ್‌ , ಫ್ರೆಂಡ್ಸ್‌, ಮನೆಯವರ ಬಳಿ ನನಗೊಂದು ಜೋಡಿ ಹುಡುಕಿಕೊಡಿ ಎಂದು ಕೇಳಿದ. ಆದರೆ ಯಾವ ಸಂಬಂಧವೂ ಕೂಡಿ ಬರಲಿಲ್ಲ. ಕೊನೆಗೆ ಫೇಸ್‌ಬುಕ್‌ನಲ್ಲಿ ಅವನ ಬಗ್ಗೆ ವಿವರಗಳನ್ನು ನೀಡಿ, ತಂದೆ-ತಾಯಿ ಜತೆ ಮನೆ ಮುಂದೆ ಫೋಟೊ ತೆಗೆಸಿ ಫೇಸ್‌ ಬುಕ್‌ಗೆ ಹಾಕಿದ. ಇದೀಗ ಆತನ ಪೋಸ್ಟ್‌ ತುಂಬಾ ಶೇರ್ ಆಗಿದ್ದು ಹಲವಾರು ಪ್ರಪೋಸಲ್ ಕೂಡ ಬಂದಿದೆ ಅಂತೆ.

ಅಂದ ಹಾಗೆ ಹೀಗೂ ಹುಡುಕಬಹುದೆಂದು ಆತನಿಗೆ ಐಡಿಯಾ ಕೊಟ್ಟಿದ್ದು ಆತನೊಬ್ಬ ಸ್ನೇಹಿತನಂತೆ.

ಬ್ರೋಕರ್‌, ಮ್ಯಾಟ್ರಿಮೋನಿಗಾದರೆ ಒಂದಿಷ್ಟು ಹಣ ಸುರಿಯಬೇಕು. ಆದರೆ ಯಾವುದೇ ಖರ್ಚು ಇಲ್ಲದೆ ಫೇಸ್‌ಬುಕ್‌ ಮೂಲಕ ಹುಡುಗಿ ಹುಡುಕುತ್ತಿರುವ ರಜನೀಶ್‌ ನೋಡಿ ಇದೊಂದು ಸೂಪರ್‌ ಐಡಿಯಾ ಎಂತಿದ್ದಾರೆ ನೆಟ್ಟಿಗರು.

.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ