ಆ್ಯಪ್ನಗರ

ಒಂದು ಎಕರೆ ಭೂಮಿಯನ್ನು ಪ್ರವಾಹ ಸಂತ್ರಸ್ತರಿಗೆ ದಾನ ಮಾಡಿದ ಬಾಲಕಿ

ಕಣ್ಣೂರಿನ ಪಯನೂರಿನ ಬಾಲಕಿಯೊಬ್ಬಳು ತನಗೆ ಸೇರಿದ್ದ ಒಂದು ಎಕರೆ ಜಾಗವನ್ನು ಸಂತ್ರಸ್ತರಿಗೆ ನೀಡುವ ಮೂಲಕ ತನ್ನ ಸಹಾಯ ಹಸ್ತ ಚಾಚಿದ್ದಾರೆ.

Vijaya Karnataka Web 20 Aug 2018, 4:49 pm
ಕಣ್ಣೂರ್‌: ದೇವರ ನಾಡು ಅಕ್ಷರಶಃ ನರಕವಾಗಿದೆ. ಪ್ರವಾಹದ ಏಟಿಗೆ ಸಿಲುಕಿ ಇಡೀ ಕೇರಳವೇ ಛಿದ್ರ-ಛಿದ್ರವಾಗಿರುವ ದೃಶ್ಯ ಮನ ಕಲಕುವಂತಿದೆ. ಸಂತ್ರಸ್ತರ ಕಷ್ಟಕ್ಕೆ ಮಿಡಿದ ಅನೇಕ ಮಾನವೀಯತೆ ಮುಖಗಳು ತಮ್ಮ ಕೈಲಾದ ಸಹಾಯ ಮಾಡಿ ನೆರವಾಗುತ್ತಿದ್ದಾರೆ. ಆದರೆ ಕೆಲವರ ಉದಾರತೆ ಸೆಲೆಬ್ರಿಟಿಗಳನ್ನು ಮೀರಿಸಿದೆ.
Vijaya Karnataka Web kerala girl  donate land


ಕಣ್ಣೂರಿನ ಪಯನೂರಿನ ಬಾಲಕಿಯೊಬ್ಬಳು ತನಗೆ ಸೇರಿದ್ದ ಒಂದು ಎಕರೆ ಜಾಗವನ್ನು ಸಂತ್ರಸ್ತರಿಗೆ ನೀಡುವ ಮೂಲಕ ತನ್ನ ಸಹಾಯ ಹಸ್ತ ಚಾಚಿದ್ದಾರೆ.

ಈ ಬಾಲಕಿ ಹೆಸರು ಸ್ವಾಹಾ, ಪಯನೂರಿನಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ ಸ್ವಾಹಾ ಹಾಗೂ ಆಕೆಯ ಸಹೋದರ ಬ್ರಹ್ಮ ಇಬ್ಬರು ಸೇರಿ ತಮ್ಮ ತಂದೆ ನಮ್ಮ ಭವಿಷ್ಯಕ್ಕಾಗಿ ಮಾಡಿಟ್ಟ ಜಾಗದಲ್ಲಿ ಒಂದು ಎಕರೆ ಜಾಗವನ್ನು ದಾನ ಮಾಡಲು ನಿರ್ಧರಿಸಿರುವುದಾಗಿ ಪತ್ರ ಬರೆದಿದ್ದಾರೆ.

ತುಂಬಾ ಚಿಕ್ಕ ಪ್ರಾಯದಲ್ಲಿಯೇ ಸಂತ್ರಸ್ತರ ಕಷ್ಟಕ್ಕೆ ಸ್ಪಂದಿಸಿದ ಬಾಲಕಿ, ಸಂತ್ರಸ್ತರ ಪಾಲಿಗೆ ದಾನ ದೇವತೆಯೇ ಆಗಿದ್ದಾಳೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ