ಆ್ಯಪ್ನಗರ

ಗ್ಯಾರೇಜ್ ಮೇಲ್ಛಾವಣಿ ಮೇಲೆ ಕಾಣಿಸಿಕೊಂಡ 18 ಅಡಿ ಉದ್ದದ ಹಾವು ನೋಡಿದ ಜನತೆ ಶಾಕ್ ( ವೀಡಿಯೋ ನೋಡಿ )

ಜೂಲಿಯೆಟ್‌ ಎಂಬ 8 ವರ್ಷ ವಯಸ್ಸಿನ 18 ಅಡಿ ಉದ್ದದ ಹಾವು ನೋಡಲು ಸುತ್ತಲೂ ಅನೇಕ ಜನರು ಸೇರಿದ್ದು, ಬೃಹತ್ ಗಾತ್ರದ ಹಾವಿನ ಫೋಟೋ, ವೀಡಿಯೋಗಳನ್ನು ಸೆರೆ ಹಿಡಿಯುತ್ತಿದ್ದರು. ಡೆಟ್ರಾಯ್ಟ್‌ನ ಮಧ್ಯಭಾಗಕ್ಕೆ ಇಷ್ಟು ದೊಡ್ಡ ಗಾತ್ರದ ಹಾವು ಬಂದಿದ್ದೇಕೆ ಎಂದು ಹಲವರು ತಲೆ ಕೆಡಿಸಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.

Times Now 20 Apr 2019, 4:29 pm
ಡೆಟ್ರಾಯ್ಟ್‌: ಅಮೆರಿಕದ ಡೆಟ್ರಾಯ್ಟ್‌ನ ಪೂರ್ವ ಏಳನೇ ಮೈಲಿ ನೆರೆಹೊರೆಯ ಪ್ರದೇಶದಲ್ಲಿ 18 ಅಡಿ ಉದ್ದದ ದೊಡ್ಡ ಹಾವು ಕಾಣಿಸಿಕೊಂಡಿದೆ. ಅದನ್ನು ನೋಡಿ ಸುತ್ತಮುತ್ತಲ ಜನತೆ ಗಾಬರಿಯಾಗಿದ್ದಾರೆ.
Vijaya Karnataka Web 18 foot long snake


ಆದರೆ, ಜೂಲಿಯೆಟ್‌ ಎಂಬ 8 ವರ್ಷ ವಯಸ್ಸಿನ 18 ಅಡಿ ಉದ್ದದ ಹಾವು, ನಾಯಿ ಬೊಗಳಿದ್ದನ್ನು ನೋಡಿ ಅದನ್ನು ನುಂಗಬಹುದಾಗಿದ್ದ ಹಾವು, ಶ್ವಾನಕ್ಕೆ ಹೆದರಿಕೊಂಡು ಗ್ಯಾರೇಜ್‌ನ ಮೇಲ್ಛಾವಣಿ ಮೇಲೆ ಹೋಗಿದೆ.

ಇನ್ನು, ಜೂಲಿಯೆಟ್‌ ನೋಡಲು ಸುತ್ತಲೂ ಅನೇಕ ಜನರು ಸೇರಿದ್ದು, ಬೃಹತ್ ಗಾತ್ರದ ಹಾವಿನ ಫೋಟೋ, ವೀಡಿಯೋಗಳನ್ನು ಸೆರೆ ಹಿಡಿಯುತ್ತಿದ್ದರು. ಡೆಟ್ರಾಯ್ಟ್‌ನ ಮಧ್ಯಭಾಗಕ್ಕೆ ಇಷ್ಟು ದೊಡ್ಡ ಗಾತ್ರದ ಹಾವು ಬಂದಿದ್ದೇಕೆ ಎಂದು ಹಲವರು ತಲೆ ಕೆಡಿಸಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.

ಇನ್ನು, ಹಾವಿನ ದೃಶ್ಯವನ್ನು ಫೇಸ್‌ಬುಕ್‌ನಲ್ಲಿ ಲೈವ್ ಮಾಡಿದ ನೆಟ್ಟಿಗನೊಬ್ಬ, ''ಇದು ಚಲಿಸುತ್ತಿದೆ, ಎಷ್ಟು ದೊಡ್ಡದಿದೆ ನೋಡಿ'' ಎಂದು ಸ್ಥಳೀಯ ನಿವಾಸಿ ಫೇಸ್‌ಬುಕ್‌ ಲೈವ್‌ ಮಾಡುತ್ತಲೇ ಕಿರುಚಿಕೊಂಡಿದ್ದಾನೆ.

ಇನ್ನು, ಇದು ಸಾಕು ಹಾವು ಎನ್ನಲಾಗಿದ್ದು ಡೆವಿನ್ ಜೋನ್ಸ್ ವೈಟ್ ಅದರ ಮಾಲೀಕ ಎಂದು ತಿಳಿದುಬಂದಿದೆ. ಹಾವು ಬೋನಿನೊಳಗಿತ್ತು. ಆದರೆ, ಅದಕ್ಕೆ ಸರಿಯಾಗಿ ಬೀಗ ಹಾಕಿರಲಿಲ್ಲ. ಈ ಹಿನ್ನೆಲೆ ಅವರ ಮನೆಯಿಂದ ಹೊರಗೆ ಹಾವು ಬಂದಿದೆ. ಅಲ್ಲದೆ, ಸುರಕ್ಷತೆಗಾಗಿ ಗ್ಯಾರೇಜ್‌ನ ಮೇಲ್ಛಾವಣಿ ಹತ್ತಿತ್ತು ಎನ್ನಲಾಗಿದೆ.

ಆದರೆ, ಆ ಹಾವು ಸಾಮಾನ್ಯವಾಗಿ ಯಾರ ಕಣ್ಣಿಗೂ ಕಾಣಿಸಿಕೊಳ್ಳುವುದದಿಲ್ಲ. ಹೀಗಾಗಿ, ಗ್ಯಾರೇಜ್‌ನ ರೂಫ್‌ ಹತ್ತಿದ್ದನ್ನು ನೋಡಿ ಜನರು ಗಾಬರಿಯಾಗಿದ್ದು, ಆಶ್ಚರ್ಯಚಕಿತರಾಗಿದ್ದಾರೆ ಎಂದು 25 ವರ್ಷದ ಹಾವಿನ ಮಾಲೀಕ ತಿಳಿಸಿದ್ದಾರೆ.

ವಿಷಕಾರಿಯಲ್ಲದ ಜೂಲಿಯೆಟ್‌ ಅನ್ನು ಐದು ವರ್ಷಗಳಿಂದ ಜೋನ್ಸ್ ವೈಟ್‌ ಸಾಕುತ್ತಿದ್ದು, ಅದನ್ನು ಸಾಕಲು ಅನುಮತಿ ಪಡೆದುಕೊಂಡಿದ್ದಾರೆ ಎಂದೂ ತಿಳಿದುಬಂದಿದೆ. ರೆಟಿಕ್ಯುಲೇಟೆಡ್ ಪೈಥಾನ್‌ ಎಂಬ ಜಾತಿಗೆ ಸೇರಿದ ಈ ಹಾವು ದಕ್ಷಿಣ ಹಾಗೂ ಆಗ್ನೇಯ ಏಷ್ಯಾ ಮೂಲದ ಈ ಹಾವು ಮೊಲಗಳನ್ನು ತಿನ್ನುತ್ತದೆ ಮನುಷ್ಯರನ್ನಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ