ಆ್ಯಪ್ನಗರ

ನನ್ನ ಬಳಿ ಹಣವಿಲ್ಲ, ಲಿಫ್ಟ್ ಕೊಡಿ ಎಂದು ಯುಪಿ ಪೊಲೀಸರಿಗೆ ಕರೆ ಮಾಡಿದ ಯುವಕ (ವೀಡಿಯೋ)

ಉತ್ತರ ಪ್ರದೇಶ ಪೊಲೀಸರಿಗೆ ಇತ್ತೀಚೆಗೆ ಮುಜುಗರದ ಸನ್ನಿವೇಶವೊಂದು ಎದುರಾಗಿತ್ತು. ಯುವಕನೊಬ್ಬ ಪೊಲೀಸರಿಗೆ ಕರೆ ಮಾಡಿ ನನ್ನ ಮನೆಗೆ ಲಿಫ್ಟ್‌ ಮಾಡಿ ಎಂದು ಕರೆ ಮಾಡಿದ್ದಾನೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.

Times Now 17 Mar 2019, 7:12 pm
ಲಖನೌ: ಮನೆಗೆ ಹೋಗಲು ದುಡ್ಡು ಇಲ್ಲದಿದ್ದರೆ ನೀವು ಏನು ಮಾಡುತ್ತೀರಾ? ಆದರೆ, ಉತ್ತರಪ್ರದೇಶದ ಯುವಕನೊಬ್ಬ ಪೊಲೀಸರಿಗೆ ಕರೆ ಮಾಡಿ ಲಿಫ್ಟ್‌ ಕೊಡಿಸಿಕೊಂಡಿದ್ದಾನೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
Vijaya Karnataka Web police lift


ಉತ್ತರ ಪ್ರದೇಶ ಪೊಲೀಸರಿಗೆ ಇತ್ತೀಚೆಗೆ ವಿಚಿತ್ರ ಪರಿಸ್ಥಿತಿ ಉಂಟಾಗಿತ್ತು. ಯುವಕನೊಬ್ಬ ಪೊಲೀಸರಿಗೆ ಕರೆ ಮಾಡಿ ಎಮರ್ಜೆನ್ಸಿ ಎಂದು ಹೇಳೀದ್ದಾನೆ. ನಂತರ, ಪೊಲೀಸರು ಆ ಸ್ಥಳಕ್ಕೆ ಬಂದ ಮೇಲೆ, ತನಗೆ ಬಸ್‌ನಲ್ಲಿ ಹೋಗಲು ಹಣವಿಲ್ಲ ಎಂದು ಪೊಲೀಸರಿಗೆ ಲಿಫ್ಟ್ ಕೊಡಿ ಎಂದು ಕೇಳಿದ್ದಾನೆ.

100ಗೆ ಕರೆ ಮಾಡಿದ ಆತ, ಪೊಲೀಸರನ್ನು ತಾನಿರುವ ಪ್ರದೇಶಕ್ಕೆ ಕರೆಸಿಕೊಂಡಿದ್ದಾನೆ. ಬಳಿಕ, ಗುನ್ನೌರ್‌ನಲ್ಲಿರುವ ತನ್ನ ಮನೆಗೆ ಬಿಡಬೇಕೆಂದು ಕೇಳಿಕೊಂಡಿದ್ದಾನೆ. ಇನ್ನು, ಪೊಲೀಸರು ಆತ ಡ್ರಗ್ಸ್ ತೆಗೆದುಕೊಂಡಿದ್ದಾನಾ ಎಂಬ ವಿಚಾರಣೆ ಮಾಡಿದ್ದಾರೆ. ಈ ವಿಚಾರಣೆಯನ್ನು ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದ್ದು, ಇದನ್ನು ಸೌರಭ್‌ ದ್ವಿವೇದಿ ಎಂಬ ನೆಟ್ಟಿಗ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

''ನೀನು ಡ್ರಗ್ಸ್ ತೆಗೆದುಕೊಂಡಿದ್ದೀಯಾ, ನಶೆಯಲ್ಲಿದ್ದೀಯಾ'' ಎಂದು ಪೊಲೀಸರು ಕೇಳಿದರೆ ಆತ, ''ತನ್ನ ಬಳಿ ಹಣವಿಲ್ಲದ ಕಾರಣ ಗುನ್ನೌರ್‌ವರೆಗೆ ಲಿಫ್ಟ್‌ ಬೇಕಿತ್ತು ಅಷ್ಟೇ'' ಎಂದು ಧೈರ್ಯವಾಗಿ ಹೇಳಿದ್ದಾನೆ. ಜತೆಗೆ, ''ತಾನು ಯಾವುದೇ ರೀತಿಯ ಡ್ರಗ್ಸ್ ತೆಗೆದುಕೊಳ್ಳುವುದಿಲ್ಲ. ಕೇವಲ ಚಿಲ್ಲಮ್ (ಹುಕ್ಕಾ) ಸೇದುತ್ತೇನೆ'' ಎಂದು ಹೇಳಿಕೊಂಡಿದ್ದಾನೆ.

ಅಲ್ಲದೆ, ''ನನ್ನ ಬಳಿ ಈ ಖಾಲಿ ಚಿಲ್ಲಮ್ ಇದೆ. ಇದನ್ನು ನಾನು ಸಣ್ಣ ವಯಸ್ಸಿನವನಾಗಿದ್ದಾಗಿನಿಂದಲೂ ಸೇದುತ್ತಿದ್ದೇನೆ'' ಎಂದೂ ಹೇಳಿದ್ದಾನೆ.

ಈ ವೀಡಿಯೋವನ್ನು ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದು, ಸಾವಿರಾರು ನೆಟ್ಟಿಗರು ರೀಟ್ವೀಟ್‌ ಮಾಡಿದ್ದಾರೆ. ಅಲ್ಲದೆ, 5 ಸಾವಿರಕ್ಕೂ ಹೆಚ್ಚು ಪ್ರತಿಕ್ರಿಯೆ ಬಂದಿದ್ದು, ಟ್ವಿಟರ್ ಹಾಗೂ ಫೇಸ್‌ಬುಕ್‌ನಲ್ಲೂ ವೈರಲ್ ಆಗಿದೆ.

ಹಲವು ನೆಟ್ಟಿಗರು ಉತ್ತರ ಪ್ರದೇಶ ಪೊಲೀಸರನ್ನು ಟ್ರೋಲ್ ಮಾಡಿದ್ದು, ಆತನಿಗೆ ಮಾನಸಿಕ ನೆರವು ಬೇಕಿದೆ ಎಂದೂ ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ