ಆ್ಯಪ್ನಗರ

ವಿದ್ಯುತ್ ಶಾಕ್‌ ತಗುಲಿ ಸತ್ತವನು ಮತ್ತೆ ಎದ್ದು ಕುಳಿತ

ಹೌದು ಮೈಕಲ್ ಪ್ರುಯಿಟ್ ಎಂಬ ಯುವಕನಿಗೆ ವಿದ್ಯುತ್ ತಗುಲಿ ಆತ ಸಾವನ್ನಪ್ಪಿದ್ದ. 20 ನಿಮಿಷದವರೆಗೆ ಆತ ಉಸಿರಾಡಿರಲಿಲ್ಲ. 20 ನಿಮಿಷದ ಬಳಿಕ ವೈದ್ಯರು ಮತ್ತೆ ವಿದ್ಯುತ್ ಶಾಕ್ ನೀಡಿದಾಗ ಆಶ್ಚರ್ಯವೆಂಬಂತೆ ಆತ ಎದ್ದು ಕುಳಿತಿದ್ದಾನೆ.

Times Now 30 Jun 2019, 10:30 am
ಮಿಚಿಗನ್: ಸತ್ತವರು ಮತ್ತೆ ಬದುಕಲು ಸಾಧ್ಯವೇ? ನಿಮ್ಮ ಉತ್ತರ ಖಚಿತವಾಗಿಯೂ ಇಲ್ಲ ಎಂದಾಗಿರುತ್ತದೆ. ಆದರೆ ವಿದ್ಯುತ್ ತಗುಲಿ ಸಾವನ್ನಪ್ಪಿದ 20 ವರ್ಷದ ಯುವಕ 20 ನಿಮಿಷ ಬಿಟ್ಟು ಮತ್ತೆ ಎದ್ದು ಕುಳಿತ ವಿಸ್ಮಯಕಾರಿ ಘಟನೆ ಅಮೆರಿಕಾದಲ್ಲಿ ನಡೆದಿದೆ.
Vijaya Karnataka Web Death 2


ಹೌದು ಮೈಕಲ್ ಪ್ರುಯಿಟ್ ಎಂಬ ಯುವಕನಿಗೆ ವಿದ್ಯುತ್ ತಗುಲಿ ಆತ ಸಾವನ್ನಪ್ಪಿದ್ದ. 20 ನಿಮಿಷದವರೆಗೆ ಆತ ಉಸಿರಾಡಿರಲಿಲ್ಲ. 20 ನಿಮಿಷದ ಬಳಿಕ ವೈದ್ಯರು ಮತ್ತೆ ವಿದ್ಯುತ್ ಶಾಕ್ ನೀಡಿದಾಗ ಆಶ್ಚರ್ಯವೆಂಬಂತೆ ಆತ ಎದ್ದು ಕುಳಿತಿದ್ದಾನೆ.

ವರದಿಗಳ ಪ್ರಕಾರ, ಮೈಕಲ್ ಲೋಹದ ಏಣಿಯನ್ನೆತ್ತಿಕೊಂಡು ಮೆಟ್ಟಿಲು ಏರಿ ಹೋಗುತ್ತಿದ್ದಾಗ, ಏಣಿ ವಿದ್ಯುತ್ ತಂತಿಗೆ ತಗುಲಿ ಆತನಿಗೆ ಶಾಕ್ ತಾಗಿತು. ಪರಿಣಾಮ ಆತನ ಉಸಿರು ನಿಂತಿತು. ತಕ್ಷಣ ವೈದ್ಯಕೀಯ ಸಹಾಯಕ್ಕಾಗಿ 911ಗೆ ಕರೆ ಮಾಡಲಾಯಿತು. ಅರೆ ವೈದ್ಯಕೀಯ ಸಿಬ್ಬಂದಿ ತಕ್ಷಣ ಅಲ್ಲಿಗೆ ಆಗಮಿಸಿದರು. ಆ್ಯಂಬುಲೆನ್ಸ್‌ನಲ್ಲಿ ಒಂದು ಬಾರಿ ಸಹ ಆತನ ಎದೆ ಬಡಿದುಕೊಳ್ಳಲಿಲ್ಲ.

ಯುವಕನನ್ನು ಆಸ್ಪತ್ರೆಗೆ ಕರೆ ತಂದಾಗ ಆತನಿಗೆ ಜೀವಂತವಿರುವ ಯಾವುದೇ ಲಕ್ಷಣಗಳಿರಲಿಲ್ಲ. ಆದರೂ ವೈದ್ಯರಿಗೆ ಜೀವವಿದೆ ಎನ್ನಿಸಿತು. ಆತನ ಕಿವಿ ಬಳಿ ನೀ ಮರಳಿ ದೀವ ಪಡೆಯಬೇಕು ಎಂದು ಹೇಳಿದ ವೈದ್ಯರು ಆತನಿಗೆ ವಿದ್ಯುತ್ ಶಾಕ್ ನೀಡಿದರು. ಎರಡು ನಿಮಿಷದೊಳಗೆ ಆತನ ಎದೆ ಮತ್ತೆ ಬಡಿಯಲು ಆರಂಭವಾಯಿತು.

ವೈದ್ಯರು ಸಹ ಆತ ಪುನರ್ಜೀವಿತಗೊಂಡಿದ್ದಕ್ಕೆ ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ