ಆ್ಯಪ್ನಗರ

ಉರಿಯುತ್ತಿದ್ದ ಬೆಂಕಿಯನ್ನು ಲೆಕ್ಕಿಸದೆ ತನ್ನ ಜೀವ ಪಣಕ್ಕಿಟ್ಟು ಸಾಕುನಾಯಿ ಪಾರು ಮಾಡಿದ ಪುಣ್ಯಾತ್ಮ! ( ವೀಡಿಯೋ )

ಅಮೆರಿಕದ ವ್ಯಕ್ತಿಯೊಬ್ಬರು ತನ್ನ ಜೀವವನ್ನೇ ಪಣಕ್ಕಿಟ್ಟು ತಾನು ಸಾಕಿದ ಶ್ವಾನವನ್ನು ರಕ್ಷಣೆ ಮಾಡಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅವರ ಈ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Times Now 16 Mar 2019, 2:54 pm
ವಾಷಿಂಗ್ಟನ್: ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಜೋಸ್‌ ಗುಜ್‌ಮನ್ ಎಂಬ ವ್ಯಕ್ತಿಯ ಪಕ್ಕದ ಮನೆಗೆ ಬೆಂಕಿ ಬಿದ್ದಿರುವ ಬಗ್ಗೆ ಅವರಿಗೆ ಮಾಹಿತಿ ನೀಡಲಾಗುತ್ತೆ. ನಂತರ, ಆ ಬೆಂಕಿ ಅವರ ಮನೆಗೂ ತಗುಲುತ್ತದೆ. ಆ ವೇಳೆ ತನ್ನ ಪೋಷಕರ ಮನೆಯಲ್ಲಿದ್ದ ಜೋಸ್‌, ಮನೆಯಲ್ಲಿ ತನ್ನ ಸಾಕು ನಾಯಿ ಪಿಟ್‌ ಬುಲ್‌ ಇರುವುದನ್ನು ನೆನೆಸಿಕೊಂಡು ಮನೆಗೆ ದೌಡಾಯಿಸುತ್ತಾರೆ.
Vijaya Karnataka Web man saves pet dog


ಮನೆಗೆ ಬೆಂಕಿ ಹೊತ್ತಿಕೊಂಡಿದ್ದರೂ ಸಹ ಮನೆಯೊಳಗೆ ಹೋಗಿ 2 ವರ್ಷದ ಸಾಕುನಾಯಿಗಾಗಿ ಹುಡುಕಾಟ ನಡೆಸುತ್ತಾರೆ. ಬೆಂಕಿಯನ್ನು ಕಂಡು ಶ್ವಾನ ಬಚ್ಚಲು ಮನೆಯಲ್ಲಿ ಬಚ್ಚಿಟ್ಟುಕೊಂಡಿರುವುದನ್ನು ಗಮನಿಸಿದ ಆತ, ಮನೆ ಉರಿಯುತ್ತಿದ್ದರೂ ಲೆಕ್ಕಿಸದೆ ಅದನ್ನು ರಕ್ಷಣೆ ಮಾಡುತ್ತಾನೆ. ಈ ಇಡೀ ಘಟನೆಯನ್ನು ಅವರ ನೆರೆಮನೆಯ ವ್ಯಕ್ತೊಯೊಬ್ಬರು ವೀಡಿಯೋ ರೆಕಾರ್ಡ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ ಜೋಸ್‌ ಗುಜ್‌ಮನ್, ''ನನ್ನ ಮನೆಗೆ ಬೆಂಕಿ ಬಿದ್ದಿದ್ದರೂ, ತನ್ನ ಎರಡು ವರ್ಷದ ಪಿಟ್‌ಬುಲ್‌ ಮನೆಯೊಳಗೆ ಸಿಲುಕಿದ್ದ ಕಾರಣ ರಕ್ಷಿಸಿದೆ. ಅದು ನನ್ನ ಕುಟುಂಬದ ಭಾಗ. ನನ್ನ ಜೀವನದ ಏಳುಬೀಳುಗಳ ಭಾಗವಾಗಿದ್ದ ಶ್ವಾನವನ್ನು ಬಿಡಲು ಸಾಧ್ಯವಿಲ್ಲ ಎಂದು ಜೋಸ್ ಗುಜ್‌ಮನ್ ಹೇಳಿದ್ದಾರೆ. ಅಲ್ಲದೆ, ಅಗತ್ಯ ಬಿದ್ದರೆ ಮತ್ತೊಮ್ಮೆ ಹೀಗೇ ಮಾಡುತ್ತೇನೆ. ನನ್ನ ಕುಟುಂಬದ ಯಾರಾದರೂ ಈ ಪರಿಸ್ಥಿತಿಗೆ ಬಂದರೆ ಅವರಿಗೂ ಇದನ್ನೇ ಮಾಡುತ್ತೇನೆ'' ಎಂದೂ ಗುಜ್‌ಮನ್ ಹೇಳಿಕೊಂಡಿದ್ದಾರೆ.

ಘಟನೆಯಲ್ಲಿ ಜೋಸ್‌ ಮುಖ, ಕೈ ಹಾಗೂ ಎಡ ಕಾಲಿನಲ್ಲಿ ಸುಟ್ಟ ಗಾಯಗಳಾಗಿದೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.

ಇನ್ನೊಂದೆಡೆ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದ್ದು, ಪ್ರಪಂಚದಾದ್ಯಂತ ಪ್ರಾಣಿ ಪ್ರಿಯರು ಜೋಸ್‌ ಕಾರ್ಯವನ್ನು ಮೆಚ್ಚಿಕೊಂಡು, ಅವರನ್ನು ಹೊಗಳಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ