ಆ್ಯಪ್ನಗರ

ಇಬ್ಬರು ಪತ್ನಿಯರನ್ನು ಸಾಕಲು ನಕಲಿ ನೋಟುಗಳ ವ್ಯವಹಾರ ನಡೆಸುತ್ತಿದ್ದ ಧಾರಾವಾಹಿ ಕಥೆಗಾರ ಬಂಧನ

ಈಗಿನ ಕಾಲದಲ್ಲಿ ಒಂದು ಕುಟುಂಬವನ್ನು ಸಾಕುವುದೇ ಕಷ್ಟ ಎನ್ನುತ್ತಾರೆ. ಆದರೆ, ಮುಂಬಯಿಯ ಧಾರಾವಾಹಿಯ ಚಿತ್ರಕಥೆಗಾರನೊಬ್ಬ ಇಬ್ಬರು ಪತ್ನಿಯರನ್ನು ಸಾಕಲು ನಕಲಿ ನೋಟುಗಳ ದಂಧೆ ನಡೆಸುತ್ತಿದ್ದ. ಕೊನೆಗೂ ಈತ ಮುಂಬಯಿ ಅಪರಾಧ ದಳ ಪೊಲೀಸರ ಬಲೆಗೆ ಬಿದ್ದಿದ್ದಾನೆ.

Indiatimes 20 Mar 2019, 6:49 pm
[This story originally published in Indiatimes on March 20, 2019]
Vijaya Karnataka Web fake currency note

ಮುಂಬಯಿ
: ಮಹಾರಾಷ್ಟ್ರ ರಾಜಧಾನಿ ಮುಂಬಯಿಯ ಟಿವಿ ಸೀರಿಯಲ್ ಚಿತ್ರಕಥೆಗಾರರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇದಕ್ಕೆ ಕಾರಣ ಅವರು 5 ಲಕ್ಷಕ್ಕೂ ಅಧಿಕ ನಕಲಿ ಕರೆನ್ಸಿ ನೋಟುಗಳನ್ನು ಬ್ಯಾಗ್‌ನಲ್ಲಿ ಸಾಗಿಸುತ್ತಿದ್ದರು ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಮಹಾರಾಷ್ಟ್ರದ ನಲಸೋಪಾರಾದಲ್ಲಿರುವ ದಿಯೋಕುಮಾರ್ ಪಟೇಲ್‌ ಎಂಬ ಚಿತ್ರಕಥೆಗಾರರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಆರೋಪಿ ನಕಲಿ ನೋಟುಗಳ ವ್ಯವಹಾರ ಮಾಡುತ್ತಿದ್ದಾರೆ ಎಂದು ಮುಂಬಯಿ ಅಪರಾಧ ದಳಕ್ಕೆ ಮಾಹಿತಿ ಬಂದ ಬಳಿಕ ಆತನ ವಿರುದ್ದ ಪೊಲೀಸರು ಕಣ್ಣಿಟ್ಟಿದ್ದರು. ನಂತರ, ಮುಂಬಯಿಯ ಜೋಗೇಶ್ವರಿ ಪ್ರದೇಶದಲ್ಲಿ ನಕಲಿ ನೋಟುಗಳೊಂದಿಗೆ ಆತ ಧಾವಿಸಿದಾಗ ರೆಡ್‌ ಹ್ಯಾಂಡಾಗಿ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಮುಂಬಯಿ ಅಪರಾಧ ದಳ, ''ಆತ ಭಾರತದ ಕರೆನ್ಸಿ ನೋಟುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಎಂಬ ಅನುಮಾನವಿದೆ. ಆತನ ಬ್ಯಾಗ್‌ನಲ್ಲಿ 5.78 ಲಕ್ಷ ರೂ. ಹಣ ಪತ್ತೆಯಾಗಿದ್ದು, ಎಲ್ಲವೂ ನಕಲಿ ನೋಟುಗಳು. ನಾಶಿಕ್ ಲ್ಯಾಬೊರೇಟರೀಸ್‌ಗೆ ನೋಟುಗಳ ಸ್ಯಾಂಪಲ್‌ಗಳನ್ನು ಕಳಿಸಲಾಗಿದೆ. ಇನ್ನು, 2000 ರೂ., 500 ರೂ., 200 ರೂ. ಹಾಗೂ 100 ರೂ. ನಕಲಿ ನೋಟುಗಳ ಕಂತೆಗಳು ಬ್ಯಾಗ್‌ನಲ್ಲಿದ್ದವು'' ಎಂದು ಮಾಧ್ಯಮಕ್ಕೆ ಪೊಲೀಸರು ತಿಳಿಸಿದ್ದಾರೆ.

ಪಟೇಲ್‌ಗೆ ಇಬ್ಬರು ಪತ್ನಿಯರಿದ್ದು, ಒಬ್ಬರು ಮಾಡೆಲ್ ಹಾಗೂ ಮತ್ತೊಬ್ಬರು ಗೃಹಿಣಿಯಾಗಿದ್ದಾರೆ. ಅವರಿಬ್ಬರನ್ನು ಸಾಕಲು ಈ ಅಕ್ರಮ ವ್ಯವಹಾರ ದಂಧೆ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಮಧ್ಯಪ್ರದೇಶದ ಗ್ರಾಮೀಣ ಪ್ರದೇಶಗಳಲ್ಲಿ ಈ ನಕಲಿ ನೋಟುಗಳನ್ನು ಹಂಚುತ್ತಿದ್ದ ಎಂದೂ ಹೇಳಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ