ಆ್ಯಪ್ನಗರ

ಮೃಗಾಲಯದಿಂದ ತಪ್ಪಿಸಿಕೊಳ್ಳಲು ಈ ಚತುರ ಮಂಗ ಮಾಡಿದ್ದೇನು ಗೊತ್ತಾ?

ಮಂಗನಿಂದಲೇ ಮಾನವ ಎನ್ನುತ್ತಾರೆ. ಈ ಮಂಗ ಅದನ್ನು ಸಾಬೀತು ಪಡಿಸಿದೆ. ಮನುಷ್ಯನಷ್ಟೇ ಬುದ್ಧಿವಂತಿಕೆಯಿಂದ ವರ್ತಿಸಿ ಎಲ್ಲರನ್ನು ದಂಗಾಗಿಸಿದೆ.

Times Now 28 Aug 2019, 11:53 am
ಬೀಜಿಂಗ್: ಮನುಷ್ಯ ಅತಿ ಹೆಚ್ಚು ಬುದ್ಧಿ ಇರುವ ಪ್ರಾಣಿ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಪ್ರಾಣಿಗಳು ಸಹ ಒಮ್ಮೊಮ್ಮೆ ಮನುಷ್ಯನಷ್ಟೇ ಬುದ್ಧಿವಂತಿಕೆಯನ್ನು ತೋರಿಸುತ್ತವೆ. ಇದಕ್ಕೊಂದು ನಿದರ್ಶನ ಚೀನಾದ ಮೃಗಾಲಯವೊಂದರಲ್ಲಿ ನಡೆದ ಈ ಘಟನೆ.
Vijaya Karnataka Web ಮಂಗ


ಚೀನಾದ ಝೆಂಝ್ಜೌ ಮೃಗಾಲಯದಲ್ಲಿ ಈ ಆಶ್ಚರ್ಯಕಾರಿ ಘಟನೆ ನಡೆದಿದೆ. ಇತ್ತೀಚಿಗೆ ಮಂಗವೊಂದು ಗಾಜಿನ ಕಿಟಕಿ ಪಕ್ಕ ನಿಂತಿತ್ತು. ಅದರ ಕೈಯಲ್ಲಿ ಚೂಪಾದ ಕಲ್ಲಿತ್ತು. ಕೆಲ ನಿಮಿಷದ ನಂತರ ಅದು ಆ ಕಲ್ಲಿನಿಂದ ಗಾಜನ್ನು ಒಡೆಯಲು ಆರಂಭಿಸಿತು. ಕಿಟಕಿ ಗಾಜು ಒಡೆದು ಚೂರಾದ ಬಳಿಕ ಅಲ್ಲಿಂದ ಓಡಿ ಹೋಯಿತು. ಮೃಗಾಲಯಕ್ಕೆ ಬಂದಿದ್ದ ಪ್ರವಾಸಿಗರೆಲ್ಲರು ನಾವು ನೋಡುತ್ತಿರುವುದೋ ಸಿನಿಮಾವೋ ಅಥವಾ ನಿಜವೋ ಎಂದು ನಿರ್ಣಯಿಸಲಾಗದೆ ದಂಗಾಗಿ ಹೋದರು.


ಬಳಿಕ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಮಂಗ ಹಲವು ದಿನಗಳಿಂದ ಕಲ್ಲನ್ನು ಮಸೆದು ಅಸ್ತ್ರವಾಗಿ ಬಳಸಲು ತಯಾರಿ ನಡೆಸುತ್ತಿರುವುದು ಪತ್ತೆಯಾಗಿತ್ತು. ಮತ್ತೂ ಆಶ್ಚರ್ಯಕಾರಿ ಸಂಗತಿಯೆಂದರೆ ಅದು ಹಲವು ದಿನಗಳಿಂದ ಈ ಕಾರ್ಯದಲ್ಲಿ ಮಗ್ನವಾಗಿದ್ದು , ಕಿಟಕಿ ಗಾಜು ಒಡೆದು ಅಲ್ಲಿಂದ ತಪ್ಪಿಸಿಕೊಂಡು ಹೋಗುವುದು ಅದರ ಯೋಜನೆಯಾಗಿತ್ತು. ಥೇಟ್ ಮನುಷ್ಯನಂತೆ ಯೋಚಿಸಿರುವ ಈ ಮಂಗನ ಬುದ್ಧಿವಂತಿಕೆಗೆ ಎಲ್ಲರು ತಲೆದೂಗಿದ್ದಾರೆ.

ಈ ಘಟನೆಯ ಬಳಿಕ ಮೃಗಾಯಲಯದಲ್ಲಿ ಪ್ರಾಣಿಗಳನ್ನು ಕೂಡಿ ಹಾಕಿದ್ದ ಸ್ಥಳದಲ್ಲಿದ್ದ ಕಲ್ಲುಗಳನ್ನೆಲ್ಲ ಎತ್ತಿ ಹಾಕಲಾಯಿತು.

ಈ ಮಂಗ ಮೃಗಾಲಯದಲ್ಲಿದ್ದ ಇತರ ಮಂಗಗಳಿಗಿಂತ ಹೆಚ್ಚು ಚತುರತೆ ಹೊಂದಿತ್ತು ಎಂದು ಅಲ್ಲಿ ಕೆಲಸ ಮಾಡುತ್ತಿರುವ ಕೆಲಸಗಾರರೊಬ್ಬರು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ