ಆ್ಯಪ್ನಗರ

ಸೆಕೆ ತಡೆಯಲಾಗದೆ ಬೆತ್ತಲೆಯಾಗಿ Scooty ಓಡಿಸಿಕೊಂಡು ರಸ್ತೆಗಿಳಿದ!

ಇದೇನು ನಡೆಯುತ್ತಿದೆ ಎಂದು ಜನ ಕಕ್ಕಾಬಿಕ್ಕಿಯಾಗಿ ನೋಡುತ್ತಿದ್ದಂತೆ, ಆತನ ಮುಂದೆ ಪೊಲೀಸರು ಪ್ರತ್ಯಕ್ಷರಾದರು.

Navbharat Times 28 Jun 2019, 2:21 pm
ಇದು ಜರ್ಮನಿಯಲ್ಲಿ ಕಂಡು ಬಂದ ಪ್ರಸಂಗ. ವ್ಯಕ್ತಿಯೊಬ್ಬ ಕೆಲಸದ ನಿಮಿತ್ತ ಹೊರ ಹೊರಟಿದ್ದ. ಆದರವನಿಗೆ ಸೆಕೆ ತಡೆಯಲಾಗಲಿಲ್ಲ. ಹೀಗಾಗಿ ಉಟ್ಟ ಬಟ್ಟೆ ಕಿತ್ತೆಸೆದು ಹೆಲ್ಮೆಟ್ ಮತ್ತು ಚಪ್ಪಲಿ ಧರಿಸಿ ಬೆತ್ತಲೆಯಾಗಿ ಸ್ಕೂಟಿ ಚಲಾಯಿಸಿಕೊಂಡು ರಸ್ತೆಗಿಳಿದ.
Vijaya Karnataka Web naked man riding scooter



ಇದೇನು ನಡೆಯುತ್ತಿದೆ ಎಂದು ಜನ ಕಕ್ಕಾಬಿಕ್ಕಿಯಾಗಿ ನೋಡುತ್ತಿದ್ದಂತೆ, ಆತನ ಮುಂದೆ ಪೊಲೀಸರು ಪ್ರತ್ಯಕ್ಷರಾದರು. ನನಗೆ ಸೆಕೆ ತಡೆಯಲಾಗಲಿಲ್ಲ, ಹೀಗಾಗಿ ಬಟ್ಟೆ ಕಿತ್ತೆಸೆದು ಬಂದೆ ಎಂದಾತ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ. ಹೀಗಾಗಿ ಪೊಲೀಸರು ಸಹ ಆತನನ್ನು ತಡೆಯದಾದರು. ಬಳಿಕ ಆತ ಮತ್ತೆ ಅದೇ ರೂಪದಲ್ಲಿ ಸ್ಕೂಟಿ ಚಲಾಯಿಸಿಕೊಂಡು ಹೋದ.


ಜರ್ಮನಿಯಲ್ಲಿ ಉಷ್ಣಾಂಶ ತಾರಕಕ್ಕೇರಿದ್ದು 40 ಡಿಗ್ರಿ ಸೆಲ್ಸಿಯಸ್‌ಗೆ ದಾಟಿದೆ. 1947ರ ಬಳಿಕ ಇದೇ ಮೊದಲ ಬಾರಿಗೆ ಅಲ್ಲಿ ಉಷ್ಣಾಂಶ ಇಷ್ಟೊಂದು ಏರಿಕೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ