ಆ್ಯಪ್ನಗರ

ಸಿಗರೇಟ್ ಸೇದಲು ರೈಲನ್ನೇ ನಿಲ್ಲಿಸಿದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಿಗರೇಟ್ ಸೇದುತ್ತಿದ್ದ ವೀಡಿಯೋವೊಂದು ಸೆರೆಯಾಗಿದೆ. ಅಲ್ಲದೆ, ಉತ್ತರ ಕೊರಿಯಾದಿಂದ ವಿಯೆಟ್ನಾಂಗೆ ರೈಲಿನಲ್ಲಿ ಹೋಗುವಾಗ ಚೀನಾದ ರೈಲು ನಿಲ್ದಾಣದಲ್ಲಿ ರೈಲನ್ನು ನಿಲ್ಲಿಸಿ ಸಿಗರೇಟ್ ಹೊಡೆಯುತ್ತಿದ್ದರು ಎಂದು ತಿಳಿದುಬಂದಿದೆ.

Times Now 27 Feb 2019, 6:05 pm
ಪ್ಯಾಂಗ್‌ಯಾಂಗ್: ಇತ್ತೀಚೆಗೆ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಶಸ್ತ್ರಸಜ್ಜಿತ ರೈಲಿನಲ್ಲಿ ವಿಯೆಟ್ನಾಂನ ಹನಾಯಿಗೆ ಚಲಾಯಿಸಿದ್ದರು. ಹನೋಯ್‌ನಲ್ಲಿ ನಡೆದ ಸಭೆಯಲ್ಲಿ ಕಿಮ್ ಜಾಂಗ್ ಉನ್ ಪಾಲ್ಗೊಂಡಿದ್ದರು. ಆದರೆ, 4000 ಕಿ.ಮೀಗಳ ಹಾಗೂ 70 ಗಂಟೆಗಳ ಈ ಪ್ರಯಾಣ ಕೆಲ ಕಾಲ ವಿಳಂಬವಾಯಿತಂತೆ. ಇದರಲ್ಲಿ ವಿಶೇಷವೇನು ಅಂತೀರಾ?
Vijaya Karnataka Web kim jong un cigarette


ಈ ರೈಲು ವಿಳಂಬವಾಗಿದ್ದಕ್ಕೆ ಕಾರಣ ಕಿಮ್ ಜಾಂಗ್ ಉನ್ ಸಿಗರೇಟ್‌ ಹೊಡೆದಿದ್ದಕ್ಕಂತೆ. ದಕ್ಷಿಣ ಚೀನಾದ ನ್ಯಾನ್ನಿಂಗ್ ರೈಲು ನಿಲ್ದಾಣದಲ್ಲಿ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ರೈಲನ್ನು ಕೆಲ ಕಾಲ ನಿಲ್ಲಿಸಿ ಸಿಗರೇಟ್‌ ಹೊಡೆಯುತ್ತಿದ್ದರಂತೆ. ಜಪಾನ್ ಖಾಸಗಿ ಸುದ್ದಿ ಮಾಧ್ಯಮದ ಕ್ಯಾಮರಾಮನ್‌ ಒಬ್ಬರು ಈ ಫೋಟೋಗಳು ಹಾಗೂ ವೀಡಿಯೋಗಳನ್ನು ಸೆರೆ ಹಿಡಿದಿದ್ದಾರೆ. ಆ ವೇಳೆ ಕಿಮ್ ಜಾಂಗ್ ಉನ್ ಧೂಮಪಾನ ಮಾಡುತ್ತಿದ್ದರು ಎಂಬುದು ಬಯಲಾಗಿದೆ.


ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಿಮ್ ಜಾಂಗ್ ಉನ್‌ಗೆ ಧೂಮಪಾನ ಮಾಡುವ ಚಟವಿದೆ ಎಂದೂ ತಿಳಿದುಬಂದಿದೆ. ಇನ್ನು, ವೀಡಿಯೋದಲ್ಲಿ ಕಿಮ್ ಜಾಂಗ್ ಉನ್ ಸಹೋದರಿ ಸಹ ಇದ್ದು, ಆಕೆ ಆ್ಯಶ್‌ ಟ್ರೇ ಇಟ್ಟುಕೊಂಡಿರುವುದು ಸಹ ಸೆರೆಯಾಗಿದೆ. ಜತೆಗೆ, ಕಿಮ್ ಜಾಂಗ್ ಉನ್ ಪತ್ನಿ ನಿಯೋಗದ ಸದಸ್ಯರ ಜತೆ ಮಾತನಾಡುತ್ತಿದ್ದದ್ದು ವೀಡಿಯೋದಲ್ಲಿ ಸೆರೆಯಾಗಿದೆ. ಅಲ್ಲದೆ, ಉತ್ತರ ಕೊರಿಯಾದ ಆಡಳಿತ ಪಕ್ಷದ ನಾಯಕರೊಬ್ಬರು ಸಹ ಈ ವೀಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನು, ಸಾರ್ವಜನಿಕ ಸ್ಥಳಗಳಲ್ಲಿ ಕಿಮ್ ಜಾಂಗ್‌ ಉನ್‌ ಸಿಗರೇಟ್‌ ಸೇದಿ ಸಿಕ್ಕಿಬಿದ್ದಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಹಲವು ಬಾರಿ ಅವರು ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್‌ ಸೇದಿ ಸುದ್ದಿಯಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ