ಆ್ಯಪ್ನಗರ

ಟ್ವಿಟರ್‌ನಲ್ಲಿ ಹವಾ ಸೃಷ್ಟಿಸಿದ 'ಚೌಕಿದಾರ್ ಫಿರ್ ಸೇ' ಹ್ಯಾಶ್‌ಟ್ಯಾಗ್‌: ನಂ. 1 ಟ್ರೆಂಡಿಂಗ್

'ಚೌಕಿದಾರ್‌ ಚೋರ್‌ ಹೈ' ಎಂಬ ಕಾಂಗ್ರೆಸ್‌ ಸ್ಲೋಗನ್‌ಗೆ ತಿರುಗೇಟು ನೀಡಲು ರೂಪಿಸಿರುವ ಈ ತಂತ್ರವನ್ನು ಬಿಜೆಪಿ ಲೋಕಸಭೆ ಚುನಾವಣೆಗೆ ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಂಡಿದೆ. ಈ ಅಭಿಯಾನ ಯಶಸ್ವಿಯಾಗಿದ್ದು, 'ಚೌಕಿದಾರ್' ಎಂಬ ಪದ ಟ್ವಿಟರ್‌ನಲ್ಲಿ ಹವಾ ಸೃಷ್ಟಿಸಿದೆ.

Vijaya Karnataka Web 17 Mar 2019, 4:21 pm
ಕಾಂಗ್ರೆಸ್, ರಾಹುಲ್‌ ಗಾಂಧಿ ತಮಗೆ ಚೌಕಿದಾರ್ ಎಂದು ಜರಿದಿದ್ದನ್ನೇ ಮುಂಬರುವ ಲೋಕಸಭೆ ಚುನಾವಣೆ ಪ್ರಚಾರಕ್ಕೆ ಅಭಿಯಾನವನ್ನಾಗಿ ಬಿಜೆಪಿ ಬಳಸಿಕೊಂಡಿದೆ. ಮೈ ಭೀ ಚೌಕಿದಾರ್ ಅಭಿಯಾನ ಯಶಸ್ಸಿನ ಬಳಿಕ ಪ್ರಧಾನಿ ಮೋದಿ ಹಾಗೂ ಹಲವಾರು ಬಿಜೆಪಿ ನಾಯಕರು ತಮ್ಮ ಟ್ವಿಟರ್ ಖಾತೆ ಹೆಸರನ್ನೇ ಬದಲಾಯಿಸಿಕೊಂಡಿದ್ದಾರೆ.
Vijaya Karnataka Web chowkidar modi

ಮೊದಲಿಗೆ ಪ್ರಧಾನಿ ಮೋದಿ ತಮ್ಮ ಟ್ವಿಟರ್‌ ಖಾತೆ ಹೆಸರನ್ನು 'ಚೌಕಿದಾರ್ ನರೇಂದ್ರ ಮೋದಿ' ಎಂದು ಬದಲಾಯಿಸಿಕೊಂಡಿದ್ದು, ನಂತರ ಅಮಿತ್ ಶಾ ಸೇರಿ ಬಿಜೆಪಿಯ ಹಲವು ನಾಯಕರು ಹಲವು ಟ್ವಿಟರ್ ಬಳಕೆದಾರರು ಸಹ ತಮ್ಮ ಹೆಸರಿಗೆ ಚೌಕಿದಾರ್ ಎಂದು ಮೊದಲಿಗೆ ಸೇರಿಸಿಕೊಂಡಿದ್ದಾರೆ.

ಚೌಕಿದಾರ್ ಹೆಸರು ಸೇರಿಸಿಕೊಂಡ ಬಿಜೆಪಿ ನಾಯಕರು


ನಿಮ್ಮ ಕಾವಲುಗಾರ ದೃಢವಾಗಿ ನಿಂತಿದ್ದಾನೆ ಮತ್ತು ದೇಶದ ಸೇವೆ ಮಾಡುತ್ತಿದ್ದಾನೆ ಎಂಬ ಟ್ವೀಟ್ ಮೂಲಕ ಪ್ರಧಾನಿ ಮೋದಿ 'ಮೈ ಭಿ ಚೌಕಿದಾರ್' ಅಭಿಯಾನ ಆರಂಭಿಸಿದ ಒಂದು ದಿನದ ಬಳಿಕ ಟ್ವಿಟರ್ ಖಾತೆ ಹೆಸರು ಬದಲಾವಣೆ ಪರ್ವ ಆರಂಭವಾಗಿದೆ. ಅಲ್ಲದೆ, 'ಮೈ ಭಿ ಚೌಕಿದಾರ್' ಅಭಿಯಾನ ಯಶಸ್ಸು ಗಳಿಸಿದೆ.

ಚೌಕಿದಾರ್ ಹೆಸರು ಸೇರಿಸಿಕೊಂಡ ಬಿಜೆಪಿ ನಾಯಕರು


ಹೀಗಾಗಿ, 'ಮೈ ಭೀ ಚೌಕಿದಾರ್' ಎಂಬುದು ಟ್ವಿಟರ್‌ನಲ್ಲಿ ಟಾಪ್‌ ಟ್ರೆಂಡ್‌ ಆಗಿದ್ದು, ದೇಶ, ವಿದೇಶದಲ್ಲೂ ಟಾಪ್ ಟ್ರೆಂಡ್ ಆಗಿದೆ. ಇದೇ ರೀತಿ, ಭಾನುವಾರ( ಮಾರ್ಚ್ 17, 2019)ರಂದು 'ಚೌಕಿದಾರ್ ಫಿರ್ ಸೇ' (#ChowkidarPhirSe) ಎಂಬ ಹ್ಯಾಶ್‌ಟ್ಯಾಗ್ ಸದ್ಯ ದೇಶದಲ್ಲಿ ನಂ. 1 ಟ್ರೆಂಡ್ ಆಗಿದೆ. ಅಲ್ಲದೆ, ಜಗತ್ತಿನಾದ್ಯಂತ ಹಲವು ಗಂಟೆಗಳ ಕಾಲ ಟಾಪ್‌ ಟ್ರೆಂಡ್‌ ಆಗಿದ್ದ #ChowkidarPhirSe ಹ್ಯಾಶ್‌ಟ್ಯಾಗ್‌ ಸದ್ಯ ನಂ. 2 ಸ್ಥಾನದಲ್ಲಿದೆ. ಲಕ್ಷಾಂತರ ನೆಟ್ಟಿಗರು ಈ ಬಗ್ಗೆ ಟ್ವೀಟ್‌ ಮಾಡುತ್ತಿದ್ದಾರೆ.

ಬಿಜೆಪಿಯ ಹಲವು ನಾಯಕರು ಅಷ್ಟೇ ಅಲ್ಲ ಪ್ರಧಾನಿ ಮೋದಿ, ಕೇಸರಿ ಪಕ್ಷದ ಹಲವು ಬೆಂಬಲಿಗರು ಸಹ ಟ್ವಿಟರ್ ಖಾತೆಯಲ್ಲಿ ತಮ್ಮ ಹೆಸರಿನ ಜತೆಗೆ 'ಚೌಕಿದಾರ್' ಎಂದು ಆರಂಭದಲ್ಲಿ ಸೇರಿಸಿಕೊಂಡಿದ್ದಾರೆ.

'ಚೌಕಿದಾರ್ ಫಿರ್ ಸೇ' ಎಂಬ ಹ್ಯಾಶ್‌ಟ್ಯಾಗ್ ಬಳಸಿಕೊಂಡು ಸುಮಾರು ಒಂದೂವರೆ ಲಕ್ಷದಷ್ಟೂ ಟ್ವೀಟ್‌ಗಳು ಹರಿದಾಡುತ್ತಿದ್ದು, ಟ್ವಿಟರ್‌ನಲ್ಲಿ ಟಾಪ್‌ ಟ್ರೆಂಡಿಂಗ್ ಆಗಿದೆ. ಅಲ್ಲದೆ, ಪ್ರಧಾನಿ ಮೋದಿ ಟ್ವಿಟರ್ ಖಾತೆಯಲ್ಲಿ ತಮ್ಮ ಹೆಸರನ್ನು 'ಚೌಕಿದಾರ್ ನರೇಂದ್ರ ಮೋದಿ' ಎಂದು ಬದಲಾಯಿಸಿಕೊಂಡಿದ್ದು, ಈ ಹಿನ್ನೆಲೆ #ChowkidarNarendraModi ಎಂಬ ಹ್ಯಾಶ್‌ಟ್ಯಾಗ್‌ ಸದ್ಯ ಟ್ವಿಟರ್‌ನಲ್ಲಿ ಟಾಪ್ 2 ಟ್ರೆಂಡಿಂಗ್ ಆಗಿದೆ. ಈ ಬಗ್ಗೆ ಇದುವರೆಗೆ ಸುಮಾರು 10 ಸಾವಿರ ಮಂದಿ ನೆಟ್ಟಿಗರು ಟ್ವೀಟ್‌ ಮಾಡಿದ್ದಾರೆ.

ವಿರೋಧ ಪಕ್ಷಗಳು ಸಹ ಈ ಹ್ಯಾಶ್‌ಟ್ಯಾಗ್ ಬಳಸಿಕೊಂಡು ಕಾಲೆಳೆಯುತ್ತಿದ್ದರೆ, ಕೆಲವು ಮೋದಿ ವಿರೋಧಿಗಳು ಸಹ ಈ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿಕೊಂಡು ಟ್ರೋಲ್ ಮಾಡುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ