ಆ್ಯಪ್ನಗರ

ಮಹಿಳೆಯನ್ನು ದರೋಡೆಗೈದವ ಸಾಮಾಜಿಕ ಜಾಲತಾಣದಲ್ಲಿ ಹೀರೋ!

ಚೀನಾದ ಹೆಯಾನ್ ನಗರದಲ್ಲಿ ನಡೆದ ಘಟನೆ ಇದು. ಮಹಿಳೆಯೊಬ್ಬಳು ಎಟಿಎಂನಿಂದ ಹಣ ತೆಗೆದುಕೊಳ್ಳುತ್ತಿದ್ದಾಗ ದರೋಡೆಕೋರನೊಬ್ಬ ಅಲ್ಲಿಗೆ ನುಗ್ಗಿದ. ಬಳಿಕ ಚಾಕು ತೋರಿಸಿ ಆಕೆ ವಿತ್‍ಡ್ರಾ ಮಾಡಿಕೊಂಡಿದ್ದ ಸುಮಾರು 26ಸಾವಿರ ರೂಪಾಯಿಗಳನ್ನು ಕಸಿದುಕೊಂಡ. ಆಕೆಯಿಂದ ಮತ್ತಷ್ಟು ಹಣ ದೋಚಬೇಕೆಂದು ಆತ Bank balance ತೋರಿಸೆಂದು ಒತ್ತಾಯಿಸಿದ.

Navbharat Times 13 Mar 2019, 2:29 pm
ಮಹಿಳೆಯನ್ನು ಲೂಟಿ ಮಾಡಿದ್ದ ದರೋಡೆಕೋರನೊಬ್ಬನೀಗ ಸಾಮಾಜಿಕ ಜಾಲತಾಣದಲ್ಲಿ ಹೀರೋ ಆಗಿ ಬದಲಾಗಿದ್ದಾನೆ. ಆತನನ್ನು ಜನರು ಮುಕ್ತ ಕಂಠದಿಂದ ಹೊಗಳುತ್ತಿದ್ದಾರೆ. ಅಷ್ಟಕ್ಕೂ ನಡೆದಿದ್ದೇನು?
Vijaya Karnataka Web Arrest

ಚೀನಾದ ಹೆಯಾನ್ ನಗರದಲ್ಲಿ ನಡೆದ ಘಟನೆ ಇದು. ಮಹಿಳೆಯೊಬ್ಬಳು ಎಟಿಎಂನಿಂದ ಹಣ ತೆಗೆದುಕೊಳ್ಳುತ್ತಿದ್ದಾಗ ದರೋಡೆಕೋರನೊಬ್ಬ ಅಲ್ಲಿಗೆ ನುಗ್ಗಿದ. ಬಳಿಕ ಚಾಕು ತೋರಿಸಿ ಆಕೆ ವಿತ್‍ಡ್ರಾ ಮಾಡಿಕೊಂಡಿದ್ದ ಸುಮಾರು 26ಸಾವಿರ ರೂಪಾಯಿಗಳನ್ನು ಕಸಿದುಕೊಂಡ. ಆಕೆಯಿಂದ ಮತ್ತಷ್ಟು ಹಣ ದೋಚಬೇಕೆಂದು ಆತ Bank balance ತೋರಿಸೆಂದು ಒತ್ತಾಯಿಸಿದ.

ಬೇರೆ ದಾರಿ ಇಲ್ಲದೆ ಮಹಿಳೆ ಬ್ಯಾಂಕ್ ಬ್ಯಾಲೆನ್ಸ್ ತೋರಿಸಿದ್ದಾಳೆ. ಅದನ್ನು ನೋಡಿದ ಆತ ಹೌಹಾರಿ ಹೋಗಿದ್ದಾನೆ. ಅದರಲ್ಲಿ ಶೂನ್ಯ ಬ್ಯಾಲೆನ್ಸ್ ಇತ್ತು. ಬೇಸರ ಪಟ್ಟುಕೊಂಡ ಆತ ಆಕೆಯಿಂದ ದೋಚಿದ್ದ ಹಣದಲ್ಲಿ ಸುಮಾರು 16ಸಾವಿರವನ್ನು ಮರಳಿ ಕೊಟ್ಟು ಅಲ್ಲಿಂದ ತೆರಳಿದ್ದಾನೆ.

ಹೃದಯವಂತಿಕೆಗೆ ತಲೆದೂಗಿದ ಜನ

ಕಳ್ಳನೆನೋ ಹೃದಯವಂತನಾಗಿದ್ದ, ಆದರೆ ತಪ್ಪು ತಪ್ಪೇ ಅಲ್ಲವೇ. ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆಕ ಕಂಬಿ ಎಣಿಸುತ್ತಿದ್ದಾನೆ. ಆದರೆ ವೀಡಿಯೋ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಜನರವನನ್ನು ಹೊಗಳುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ