ಆ್ಯಪ್ನಗರ

ಚೆನ್ನಾಗಿ ನಿದ್ರಿಸಲು ಫ್ಯಾನ್‌ಗೆ ಸೊಳ್ಳೆ ಬ್ಯಾಟ್‌ ಕಟ್ಟಿಕೊಂಡ ಈತನ ಐಡಿಯಾ ನೋಡಿದರೆ ಭಲೆ ಎನ್ನುತ್ತೀರಿ! (ವೀಡಿಯೋ)

ಆದರೆ 3019ರಲ್ಲಿ ಜೀವಿಸುತ್ತಿರುವ ಯುವಕನಿಗೆ ಮತ್ತೊಬ್ಬ ಟಫ್‌ ಕಾಂಪಿಟೀಟರ್‌ ಹುಟ್ಟಿಕೊಂಡಿದ್ದಾನೆ. ಕುಳಿತಲ್ಲೇ ಮೊಬೈಲ್‌ ಒತ್ತುತ್ತ ಹಣ್ಣುಗಳನ್ನು ಹೇಗೆ ತಿನ್ನಬಹುದು ಎಂದು ತೋರಿಸಿಕೊಟ್ಟಿದ್ದು, ವೀಡಿಯೋ ವೈರಲ್‌ ಆಗಿದೆ.

Vijaya Karnataka Web 31 Mar 2019, 1:12 pm
ಯಾರಿಗೇ ಆದ್ರು ಜೀವನದಲ್ಲಿ ಅತ್ಯದ್ಭುತ ಸುಖ ಅಂದ್ರೆ ಅದು ನಿದ್ರೆನೇ! ಎಲ್ಲರೂ ಕಷ್ಟ ಪಡುವುದು ಸುಖವಾದ ನಿದ್ರೆಗೆ ಎಂಬುದು ತಿಳಿದಿರುವ ವಿಚಾರ. ಆದರೆ ಗುಂಯ್‌ ಗುಡುತ್ತ ಬರುವ ಸೊಳ್ಳೆಗಳೇ ಸುಖ ಜೀವನದ ಪರಮ ಶತ್ರುಗಳು.
Vijaya Karnataka Web Fan


ಬೆಡ್‌ಶೀಟ್‌ಅನ್ನು ದೇಹದ ತುಂಬೆಲ್ಲಾ ಸುತ್ತಿಕೊಂಡು ಮಲಗಿದರೂ ಅದ್ಯಾವುದೋ ಗ್ಯಾಪ್‌ನಲ್ಲಿ ಒಳ ನುಸುಳಿ ಕಚ್ಚುತ್ತವೆ. ಇಲ್ಲೊಬ್ಬ ವಿದ್ಯಾರ್ಥಿ ತನ್ನ ನಿದ್ರೆಗೆ ತೊಂದರೆಯನ್ನುಂಟು ಮಾಡುವ ಸೊಳ್ಳೆಗಳಿಗೆ ಶಾಕ್‌ ಕೊಟ್ಟಿದ್ದಾನೆ. ಟೇಬಲ್‌ ಫ್ಯಾನ್‌ಗೆ ಸೊಳ್ಳೆಯನ್ನು ಕೊಲ್ಲುವ ಇಲೆಕ್ಟ್ರಿಕ್‌ ಬ್ಯಾಟ್‌ ಕಟ್ಟಿದ್ದಾನೆ. ಫ್ಯಾನ್‌ ತಿರುಗುತ್ತ ಆಚೆ-ಈಚೆ ಬಂದಾಗ ಮೂಗಿನಿಂದ ಬಿಡುಗಡೆಯಾಗುವ ಇಂಗಾಲದ ಡೈ ಆಕ್ಸೈಡ್‌ಅನ್ನು ಮೂಸುತ್ತ ರಕ್ತಕ್ಕಾಗಿ ಮುಖ ಬಳಿ ಬರುವ ಸೊಳ್ಳೆಗಳನ್ನು ಇಲೆಕ್ಟ್ರಿಕ್‌ ಬ್ಯಾಟ್‌ ಮೂಲಕ ಸಾಯುವಂತೆ ಮಾಡಿದ್ದಾನೆ. ಈತನ ಕ್ರಿಯೆಟಿವಿಗೆ ನೆಟ್ಟಿಗರು ತಲೆದೂಗಿದ್ದಾರೆ. ಈತ 3019ನೇ ವರ್ಷದಲ್ಲಿ ಜೀವಿಸುತ್ತಿದ್ದಾನೆ ಎಂದಿದ್ದಾರೆ. ಸಾಮಾಜಿಕ ತಾಣಗಳಲ್ಲಿ ಸೊಳ್ಳೆ ಕೊಲ್ಲುವ ಇಲೆಕ್ಟ್ರಿಕ್‌ ಬ್ಯಾಟ್‌ಅನ್ನು ಟೇಬಲ್‌ ಫ್ಯಾನ್‌ಗೆ ಕಟ್ಟಿಕೊಂಡು ಸೊಳ್ಳೆಗಳಿಂದ ಮುಕ್ತಿ ಪಡೆಯುತ್ತಿರುವ ವಿದ್ಯಾರ್ಥಿಯ ವೀಡಿಯೋ ವೈರಲ್‌ ಆಗಿದೆ.


ಆದರೆ 3019ರಲ್ಲಿ ಜೀವಿಸುತ್ತಿರುವ ಯುವಕನಿಗೆ ಮತ್ತೊಬ್ಬ ಟಫ್‌ ಕಾಂಪಿಟೀಟರ್‌ ಹುಟ್ಟಿಕೊಂಡಿದ್ದಾನೆ. ಕುಳಿತಲ್ಲೇ ಮೊಬೈಲ್‌ ಒತ್ತುತ್ತ ಹಣ್ಣುಗಳನ್ನು ಹೇಗೆ ತಿನ್ನಬಹುದು ಎಂದು ತೋರಿಸಿಕೊಟ್ಟಿದ್ದು, ವೀಡಿಯೋ ವೈರಲ್‌ ಆಗಿದೆ. ಈತ 4019ರಲ್ಲಿ ಜೀವಿಸುತ್ತಿದ್ದಾನೆ ಎಂದು ನೆಟ್ಟಿಗರು ಆಗಲೇ ಬಿರುದು ಕೊಟ್ಟಿದ್ದಾರೆ. ಟೇಬಲ್‌ ಫ್ಯಾನ್‌ ಮೇಲೆ ಕೋಲಿಗೆ ದ್ರಾಕ್ಷಿಗಳನ್ನು ಕಟ್ಟಿಕೊಂಡು ತಿನ್ನುತ್ತಿರುವ ಯುವಕನ ಕ್ರಿಯಾಶೀಲತೆಗೆ ನೆಟ್ಟಿಗರು ಯಲಾ ಯಲಾ ಇವ್ನಾ ಎನ್ನುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ