ಆ್ಯಪ್ನಗರ

ಕೈ ಕಾಲಿಲ್ಲದ ಮಗು ಜಾರು ಬಂಡೆ ಆಡುವ ಖುಷಿ ನೋಡಿ...

ಕೈ, ಕಾಲು ಇಲ್ಲದ ಈ ಮಗುವಿನ ವೀಡಿಯೋ ನೋಡಿದರೂ, 'ಮನಸ್ಸು ಮಾಡಿದರೆ ಜೀವನದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು..' ಎಂಬ ವಿವೇಕ ವಾಣಿ ನೆನಪಿಗೆ ಬರುತ್ತದೆ.

Vijaya Karnataka Web 12 Sep 2017, 1:11 pm
ಬೆಂಗಳೂರು: 'ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ..' ಎಂದು ಡಾ. ರಾಜ್‌ಕುಮಾರ್ ಹಾಡಿದ ಗೀತೆ ಎಲ್ಲರನ್ನೂ ಒಂದಲ್ಲ ಒಂದು ರೀತಿಯಲ್ಲಿ ಹಿಡಿದ ಕಾರ್ಯವನ್ನು ಮುಗಿಸುವಂತೆ ಪ್ರೇರೇಪಿಸುತ್ತದೆ. ಹಾಗೆಯೇ ಕೈ, ಕಾಲು ಇಲ್ಲದ ಈ ಮಗುವಿನ ವೀಡಿಯೋ ನೋಡಿದರೂ, 'ಮನಸ್ಸು ಮಾಡಿದರೆ ಜೀವನದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು..' ಎಂಬ ವಿವೇಕ ವಾಣಿಯನ್ನು ನೆನಪಿಸುತ್ತದೆ.
Vijaya Karnataka Web this video inspires all
ಕೈ ಕಾಲಿಲ್ಲದ ಮಗು ಜಾರು ಬಂಡೆ ಆಡುವ ಖುಷಿ ನೋಡಿ...


ಕೈ ಕಾಲು ಸರಿ ಇರುವ, ಬಹುಶಃ ಸಮಕಾಲೀನ ಮಗುವೊಂದು ಜಾರು ಬಂಡೆಯ ಮೆಟ್ಟಿಲು ಹತ್ತಿ, ಆಡುತ್ತಿದ್ದರೆ, ಈ ಮಗುವಿಗೂ ಆಡುವ ಮನಸ್ಸು. ಹಾಗಂತ ಕೈ-ಕಾಲಿಲ್ಲವೆಂದು ಸುಮ್ಮನಿರುವುದಿಲ್ಲ. ಕಷ್ಟಪಟ್ಟು ಮೆಟ್ಟಿಲು ಹತ್ತುತ್ತದೆ. ಒಂದೊಂದು ಮೆಟ್ಟಿಲು ಹತ್ತಿದಾಗಲೂ ಆದರ ಮುಖದ ಸಂಭ್ರಮ ಎಂಥವರಿಗಾದರೂ ನಿರಾಳತೆ ಮೂಡಿಸುತ್ತಿದೆ. ಅಷ್ಟೂ ಮೆಟ್ಟಿಲುಗಳನ್ನು ಹತ್ತಿ, ಒಮ್ಮೆ ಜಾರು ಬಂಡಿಯಿಂದ ಜಾರಿದಾಗ ಆ ಮಗುವಿನ ಮುಖದಲ್ಲಿ ಮೂಡುವ ಮಂದಹಾಸ ಎಲ್ಲರಲ್ಲಿಯೂ ನಿರುಮ್ಮಳ ಭಾವ ಮೂಡಿಸುವುದು ಸಹಜ.

At first I couldn't bear to look & then I was left feeling uplifted. I don't think I will ever complain again about any job being too hard.. pic.twitter.com/06mzMAxxjp — anand mahindra (@anandmahindra) 11 September 2017 ಇಂಥ ಮನ ಕಲಕುವ ವೀಡಿಯೋವನ್ನು ಬ್ಯುಸಿನೆಸ್ ಐಕಾನ್ ಆನಂದ್ ಮಹಿಂದ್ರಾ 'ಮೊದಲು ಇದನ್ನು ನೋಡಲು ನನ್ನ ಕೈಲಿ ಸಾಧ್ಯವಾಗಲಿಲ್ಲ. ಬಳಿಕ ಸಂಪೂರ್ಣ ನೋಡಿ ಚಕಿತನಾದೆ. ಇನ್ನು ಜಗತ್ತಿನಲ್ಲಿ ಯಾವುದೇ ಕೆಲಸವನ್ನೂ ಕಷ್ಟವೆಂದು ದೂಷಿಸುವುದಿಲ್ಲ,' ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ 16 ಸಾವಿರ ಬಾರಿ ರಿ ಟ್ವೀಟ್ ಆಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ