ಆ್ಯಪ್ನಗರ

ರೋಲರ್‌ ಕೋಸ್ಟರ್‌ನಲ್ಲಿ ಚಲಿಸುತ್ತಿದ್ದಾಗಲೇ ಮೊಬೈಲ್‌ ಕ್ಯಾಚ್‌ ಹಿಡಿದ ಸಾಹಸಿ ಯುವಕ

ಸುಮಾರು 134 ಕಿಲೋಮೀಟರ್‌ ವೇಗದಲ್ಲಿ ಚಲಿಸುವ ರೋಲರ್‌ ಕೋಸ್ಟರ್‌ನಲ್ಲಿ ಕೂತಿದ್ದ ಯುವಕನೊಬ್ಬ ಮತ್ತೊಬ್ಬರ ಜೇಬಿನಿಂದ ಬೀಳುತ್ತಿದ್ದ ಫೋನನ್ನು ಆಶ್ಚರ್ಯಕರ ರೀತಿಯಲ್ಲಿ ಕ್ಯಾಚ್‌ ಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣ ಸೇರಿದಂತೆ ಆನ್‌ಲೈನ್‌ನಲ್ಲಿ ವೈರಲ್‌ ಆಗಿದೆ.

Vijaya Karnataka Web 6 Sep 2019, 2:56 pm
ಶರವೇಗದಲ್ಲಿ ಚಲಿಸುವ ರೋಲರ್‌ ಕೋಸ್ಟರ್‌ ನಲ್ಲಿ ಕುಳೀತುಕೊಳ್ಳವುದೇ ಒಂದು ರೋಮಾಂಚಕ ಅನುಭವ. ಎರಡು ಗುಂಡಿಗೆಯ ಭಂಟರಷ್ಠೇ ರೋಲರ್‌ ಕೋಸ್ಟರ್‌ ನಲ್ಲಿ ಕಣ್ಣು ತೆರೆದು ಕುಳಿತುಕೊಳ್ಳುವ ಧೈರ್ಯ ಮಾಡುತ್ತಾರೆ. ಆದರೆ, ಐಸ್‌ಲ್ಯಾಂಡ್‌ ಮೂಲದ ನ್ಯೂಜಿಲೆಂಡ್‌ ಪ್ರಜೆ ಸ್ಯಾಮ್ಯುಯಲ್‌ ಕೆಂಫ್‌ ಎಂಬುವರು ರೋಲರ್‌ ಕೋಸ್ಟರ್‌ ಚಲಿಸುವಾಗಲೇ ಮತ್ತೊಬ್ಬರ ಮೊಬೈಲ್‌ ಕಸಿದು ಬೀಳುವಾಗ ಅದ್ಭುತವಾಗಿ ಕ್ಯಾಚ್‌ ಹಿಡಿದಿದ್ದಾರೆ.
Vijaya Karnataka Web roler coaster


ಸ್ಯಾಮ್ಯುಯಲ್‌ ಕೆಂಫ್‌ ಅವರು ಯೂರೋಪಿಯನ್‌ ಆಟವಾದ ಫಿಸ್ಟ್‌ಬಾಲ್‌ ಕ್ರೀಡಾಪಟು. ಇವರು ಇತ್ತೀಚೆಗೆ ನಡೆದ ಫಿಸ್ಟ್‌ಬಾಲ್‌ ವಿಶ್ವಚಾಂಪಿಯನ್‌ಷಿಪ್‌ನಲ್ಲಿ ನ್ಯೂಜಿಲೆಂಡ್‌ ತಂಡವನ್ನು ಪ್ರತಿನಿದಿಸಿದ್ದರು. ಸ್ಯಾಮ್ಯಯಲ್‌ ಅವರ ಈ ಕ್ರೀಡಾ ಕೌಶಲ ಮೊಬೈಲ್‌ ಕ್ಯಾಚ್‌ ಹಿಡಿಯುವಾಗ ಸಮರ್ಥವಾಗಿ ಬಳಕೆಯಾಗಿದೆ. ಅದೃಷ್ಟವೆಂಬಂತೆ ಇವರು ಮೊಬೈಲ್‌ ಕ್ಯಾಚ್‌ ಹಿಡಿದಿದ್ದು, ಅದೇ ರೋಲರ್‌ ಕೋಸ್ಟರ್‌ ನಲ್ಲಿ ಕುಳಿತಿದ್ದ ಮತ್ತೊಬ್ಬರ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಈಗ ವೈರಲ್‌ ಆಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ