ಆ್ಯಪ್ನಗರ

ಎಟಿಎಂನಿಂದ 40 ಲಕ್ಷ ರೂ. ಲೂಟಿ: ಕಳ್ಳರ ಬೈಕ್ ಅಪಘಾತವಾಗಿ ಹಣ ಹೊತ್ತೊಯ್ದ ಸಾರ್ವಜನಿಕರು

ಉತ್ತರ ಪ್ರದೇಶದ ಎಟಿಎಂಗೆ ಹಣ ತುಂಬುತ್ತಿದ್ದವರ ಬಳಿ ಇಬ್ಬರು ಕಳ್ಳರು ನೋಯ್ಡಾದ ಎಸ್‌ಬಿಐ ಎಟಿಎಂ ಬಳಿಯಿಂದ 40 ಲಕ್ಷ ರೂ. ಲೂಟಿ ಮಾಡಿದ್ದಾರೆ. ಆದರೆ, ಆ ಹಣ ಬೇರೆಯವರ ಪಾಲಾಗಿದೆ. ಆದರೂ, ಅವರು ಜೈಲಿಗೆ ಹೋಗಿ ಕಂಬಿ ಎಣಿಸುವಂತಾಗಿದೆ. ಅದು ಹೇಗೆ ಗೊತ್ತಾ?

Indiatimes 20 Feb 2019, 3:00 pm
[This story originally published in Indiatimes on Feb 20, 2019 ]
Vijaya Karnataka Web ATM

ನೋಯ್ಡಾ:
ಉತ್ತರ ಪ್ರದೇಶದ ನೋಯ್ಡಾ ಸೆಕ್ಟರ್ 82 ಪ್ರದೇಶದ ಎಸ್‌ಬಿಐ ಎಟಿಎಂನಿಂದ ಇಬ್ಬರು ಕಳ್ಳರು ಎಟಿಎಂನಿಂದ ಹಣ ಲೂಟಿ ಮಾಡಿದ್ದಾರೆ. ಎಟಿಎಂಗೆ ಹಣ ತುಂಬುತ್ತಿದ್ದ ಏಜೆನ್ಸಿಯವರ ಬಳಿಯಿದ್ದ 40 ಲಕ್ಷ ರೂ. ಇದ್ದ ಬ್ಯಾಗನ್ನು ಬೈಕ್‌ನಲ್ಲಿ ಬಂದಿದ್ದಇಬ್ಬರು ಮುಸುಕುಧಾರಿಗಳು ಕದ್ದುಕೊಂಡು ಹೋಗಿದ್ದಾರೆ.

ಎಟಿಎಂ ಲೂಟಿ ಮಾಡಲು ಮೊದಲೇ ಪೂರ್ವ ಸಿದ್ಧತೆ ನಡೆಸಿದ್ದ ಇಬ್ಬರು ಕಳ್ಳರು ಸ್ಟೇಟ್‌ ಬ್ಯಾಂಕ್ ಆಫ್‌ ಇಂಡಿಯಾದ ಎಟಿಎಂ ಬಳಿಯೇ ಮುಸುಕು ಹಾಕಿಕೊಂಡು ಗನ್ ಹಿಡಿದು ನಿಂತಿದ್ದರು. ನಂತರ, ಹಣ ತುಂಬಲು ಬಂದ ಸಿಬ್ಬಂದಿ ಬಳಿ ಸುಮಾರು 40ಲಕ್ಷ ರೂ. ಹಣವಿದ್ದ ಬ್ಯಾಗನ್ನು ಬೈಕ್‌ನಲ್ಲಿ ಎತ್ತಿಕೊಂಡು ಹೋಗುವಲ್ಲೂ ಅವರಿಬ್ಬರು ಯಶಸ್ವಿಯಾದರು.

ಆದರೆ, ಅವರ ದುರಾದೃಷ್ಟಕ್ಕೆ ಬೈಕ್‌ನಲ್ಲಿ ವೇಗವಾಗಿ ಚಲಿಸುತ್ತಿದ್ದಾಗ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದು ಅವರಿಬ್ಬರು ರಸ್ತೆಮೇಲೆ ಬಿದ್ದಿದ್ದಾರೆ. ಅವರಷ್ಟೇ ಅಲ್ಲ, ಅವರು ಕದ್ದಿದ್ದ ಹಣವೆಲ್ಲ ರಸ್ತೆ ಪಾಲಾಗಿದ್ದು, ಇದನ್ನು ನೋಡಿದ ಸ್ಥಳೀಯರು ಸಿಕ್ಕವರಿಗೆ ಸೀರುಂಡೆ ಎನ್ನುವಂತೆ ಅವರ ಕೈಗೆ ಸಿಕ್ಕಷ್ಟು ದುಡ್ಡನ್ನು ಬಾಚಿಕೊಂಡು ಹೋಗಿದ್ದಾರೆ.

ಇನ್ನು, ಹಣ ತುಂಬಿಕೊಳ್ಳುತ್ತಿದ್ದ ಜನರನ್ನು ಎದುರಿಸಲು ಹೋಗಿ ಒಬ್ಬ ಆರೋಪಿ ಚರಂಡಿಗೆ ಬಿದ್ದಿದ್ದು, ಮತ್ತೊಬ್ಬ ಆರೋಪಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ ಎಂದು ತಿಳಿದುಬಂದಿದೆ.

ಈ ಸಂಬಂಧ ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿ, ''ಹಣ ಕದ್ದು ಸ್ಥಳದಿಂದ ಎಸ್ಕೇಪ್ ಆಗುವಾಗ ಅವರ ಬೈಕ್ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದಿದೆ. ನಂತರ, ಕಳ್ಳರು ಬಿದ್ದು ಹೋಗಿದ್ದು, ಹಣವಿದ್ದ ಬ್ಯಾಗ್ ಓಪನ್ ಆಗಿ ರಸ್ತೆ ಮೇಲೆಲ್ಲಾ ಹಣ ಬಿದ್ದುಹೋಗಿದೆ. ಇನ್ನು, ಬುಲಂದ್ಶಹರ್ ಜಿಲ್ಲೆ ಮೂಲದ ಒಬ್ಬ ಆರೋಪಿಯನ್ನು ಬಂಧಿಸಲಾಗಿದ್ದು, ಅವರ ಬಳಿಯಿದ್ದ ಬ್ಯಾಗ್‌ನಲ್ಲಿ ಕೇವಲ 19.65 ಸಾವಿರ ರೂ. ಹಣ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ.

ಜತೆಗೆ, ಆರೋಪಿ ಬಳಿ ಇದ್ದ ಮತ್ತೊಂದು ಪ್ಯಾಕೆಟ್‌ನಲ್ಲಿ ಒಂದು ಪಿಸ್ತೂಲ್, ಎರಡು ಸ್ವದೇಶಿ ಬಂದೂಕುಗಳು ಹಾಗೂ ಮದ್ದುಗುಂಡು ಸಹ ದೊರೆತಿದೆ ಎಂದು ತಿಳಿದುಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ