ಆ್ಯಪ್ನಗರ

ವಿಷಪೂರಿತ ಹಾವು - ಜೇಡ ನಡುವಿನ ಭೀಕರ ಕಾಳಗದಲ್ಲಿ ಗೆದ್ದಿದ್ದು ಯಾರು ಗೊತ್ತಾ? (ಫೋಟೋಗಳಲ್ಲಿ ನೋಡಿ)

ಆಸ್ಟ್ರೇಲಿಯಾದ ವಿಕ್ಟೋರಿಯಾದ ವೈನರಿಯಲ್ಲಿ ರೆಡ್‌ಬ್ಯಾಕ್‌ಜೇಡ ಹಾಗೂ ವಿಷಪೂರಿತ ಈಸ್ಟರ್ನ್ ಬ್ರೌನ್‌ ಹಾವು ನಡುವೆ ಕಾಳಗ ನಡೆದಿದ್ದು, ಇದರಲ್ಲಿ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಅವುಗಳ ಕಾಳಗದ ಫೋಟೋಗಳು ಫೇಸ್‌ಬುಕ್‌ನಲ್ಲಿ ವೈರಲ್ ಆಗಿದ್ದು, ಸಾವಿರಾರು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

Times Now 8 Mar 2019, 12:29 pm
ಆಸ್ಟ್ರೇಲಿಯಾ: ರೆಡ್‌ಬ್ಯಾಕ್‌ಜೇಡ ಹಾಗೂ ವಿಷಪೂರಿತ ಈಸ್ಟರ್ನ್ ಬ್ರೌನ್‌ ಹಾವು ನಡುವಿನ ಕಾಳಗವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ರಾಬಿನ್ ಮೆಕ್‌ಲೆನ್ನಾನ್ ಎಂಬುವರು ಫೇಸ್‌ಬುಕ್‌ನಲ್ಲಿ ಕಾಳಗದ ಫೋಟೋಗಳನ್ನು ಹಂಚಿಕೊಂಡಿದ್ದು, ನೂರಾರು ಮಂದಿ ನೆಟ್ಟಿಗರು ಇದನ್ನು ಶೇರ್ ಮಾಡಿಕೊಂಡಿದ್ದಾರೆ.
Vijaya Karnataka Web battle of spider snake


ಆಸ್ಟ್ರೇಲಿಯಾದ ವಿಕ್ಟೋರಿಯಾದ ವೈನರಿಯಲ್ಲಿ ರೆಡ್‌ಬ್ಯಾಕ್‌ಜೇಡ ಹಾಗೂ ವಿಷಪೂರಿತ ಈಸ್ಟರ್ನ್ ಬ್ರೌನ್‌ ಹಾವು ನಡುವೆ ನಡೆದ ಈ ಕಾಳಗದ ಹೆಚ್ಚಿನ ರೆಸಲ್ಯೂಷನ್ ಹೊಂದಿರುವ ಚಿತ್ರಗಳನ್ನು ಕಳೆದ ವಾರ ತೆಗೆಯಲಾಗಿತ್ತು ಎಂದು ತಿಳಿದುಬಂದಿದೆ. ಬಳಿಕ, ಅದನ್ನು ವಿಕ್ಟೋರಿಯಾದ ಫೀಲ್ಡ್‌ ನ್ಯಾಚುರಲಿಸ್ಟ್ ಕ್ಲಬ್‌ನ ಫೇಸ್‌ಬುಕ್‌ ಗ್ರೂಪ್‌ನಲ್ಲಿ ಹಾಕಲಾಗಿತ್ತು.

ಜೇಡ - ಹಾವು ನಡುವಿನ ಕಾಳಗ


ಆದರೆ, ಮೆಕ್‌ಲೆನ್ನಾನ್‌ ಹಾಕಿದ್ದ ಫೋಟೋಗಳ ಪ್ರಕಾರ ಕಾಳಗದಲ್ಲಿ ಅಚ್ಚರಿಯ ಫಲಿತಾಂಶ ಹೊರಬಂದಿದೆ. ಇದನ್ನು ನೋಡಿದ ಜನರು ಸಹ ಆಶ್ಚರ್ಯಪಟ್ಟಿದ್ದಾರೆ. ದೊಡ್ಡ ಹಾವನ್ನು ತನ್ನ ಬಲೆಯಲ್ಲಿ ಬೀಳಿಸಿಕೊಂಡ ರೆಡ್‌ಬ್ಯಾಕ್‌ ಜೇಡ ಅಚ್ಚರಿಯ ರೀತಿಯಲ್ಲಿ ಹಾವನ್ನು ಮಣ್ಣು ಮುಕ್ಕಿಸಿ ಗೆಲುವು ಸಾಧಿಸಿದೆ.

ಈ ಸಂಬಂಧದ ಮಾಹಿತಿಗಳನ್ನು ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಮೆಕ್‌ಲೆನ್ನಾನ್‌ ಹಾಕಿಕೊಂಡಿದ್ದು, ಇದನ್ನು ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ. ಈ ಫೋಟೋಗಳನ್ನು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ನೂರಾರು ಮಂದಿ ಶೇರ್ ಮಾಡಿಕೊಂಡಿದ್ದು, ಸಾವಿರಾರು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಜೇಡ - ಹಾವು ನಡುವಿನ ಕಾಳಗ


ಈ ಬಗ್ಗೆ ನೆಟ್ಟಿಗರು ನಾನಾ ವಿಧದ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಆದರೆ, ರೆಡ್‌ ಬ್ಯಾಕ್‌ ಸ್ಪೈಡರ್ ನಿಜಕ್ಕೂ ಅಪಾಯಕಾರಿಯಾಗಿದ್ದು, ತನ್ನ ಬೇಟೆಯನ್ನು ಕೊಲ್ಲುವ ಸಾಮರ್ಥ್ಯ ಹೊಂದಿದೆ. ಆಲ್ಫಾ ಲ್ಯಾಟ್ರೋಟಾಕ್ಸಿನ್ ಎಂಬ ವಿಷದಿಂದ ಬೇಟೆಗಳು ಸಾಯುತ್ತವೆ ಎಂದು ತಿಳಿದುಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ